ಕೊಡಗು ಸಂತ್ರಸ್ಥರಿಗಾಗಿ ತಾಲ್ಲೂಕು ಆಡಳಿತದಿಂದ ನಿಧಿ ಸಂಗ್ರಹಣೆ

ಚಳ್ಳಕೆರೆ

              ಕಳೆದವಾರ ಸುರಿದ ಬಾರೀ ಮಳೆಗೆ ರಾಜ್ಯದ ಕೊಡಗು ಜಿಲ್ಲೆಯ ಹಲವಾರು ಗ್ರಾಮಗಳು ಜಲಾವೃತ್ತವಾಗಿದ್ದು, ಗ್ರಾಮದಲ್ಲಿದ್ದ ಮನೆಗಳು, ಕಾಫಿ ತೋಟಗಳು, ನೀರಿನಲ್ಲಿ ಮುಳಗಿ ಹೋಗಿದ್ದು, ಪ್ರಕೃತಿ ವಿಕೋಪದಿಂದ ಕೊಡಗು ಜಿಲ್ಲೆ ತುಂಬಲಾಗದ ನಷ್ಟವನ್ನು ಅನುಭವಿಸುತ್ತಿದ್ದು, ಸರ್ಕಾರದ ಸೂಚನೆ ಮೇರೆಗೆ ಇಲ್ಲಿನ ತಹಶೀಲ್ದಾರ್ ಟಿ.ಸಿ.ಕಾಂತರಾಜು ಕೊಡಗು ನೆರೆ ಸಂತ್ರಸ್ಥರ ನಿಧಿ ಸಂಗ್ರಹಕ್ಕೆ ಗುರುವಾರ ಚಾಲನೆ ನೀಡಿದರು.

                 ನಗರದ ಖಾಸಗಿ ಬಸ್ ನಿಲ್ದಾಣದಿಂದ ಸಂತ್ರಸ್ಥರ ನಿಧಿ ಸಂಗ್ರಹಣ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಇನ್ನೂ ಎರಡು ದಿನಗಳ ಕಾಲ ನಿಧಿ ಸಂಗ್ರಹಣ ಕಾರ್ಯವನ್ನು ಮುಂದುವರೆಸಲಾಗುವುದು. ಕಾರಣ ಅನೇಕ ಅಂಗಡಿಗಳಲ್ಲಿ ವರ್ತಕರು ಹಾಗೂ ದಾನಿಗಳು ಸಮಯವಾಕಾಶ ಕೇಳಿದ್ದು, ಶುಕ್ರವಾರ ಮತ್ತು ಶನಿವಾರ ಎರಡೂ ದಿನಗಳ ಕಾಲ ನಗರದ ಎಲ್ಲಾ ರಸ್ತೆಗಳಲ್ಲಿ ಪಾದಯಾತ್ರೆಯ ಮೂಲಕ ಸಂಚಾರ ನಡೆಸಿ ದಾನಿಗಳಿಂದ ಹಣ ಸಂಗ್ರಹಣೆ ಮಾಡಲಾಗುವುದು. ನಂತರ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಮಕ್ಷಮದಲ್ಲಿ ಸಂಗ್ರಹವಾದ ಸಂಪೂರ್ಣ ಹಣ ಹಾಗೂ ಇನ್ನಿತರೆ ವಸ್ತುಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗುವುದು.

                  ನಿಧಿ ಸಂಗ್ರಹಣ ಕಾರ್ಯದಲ್ಲಿ ನಗರದ ಆದರ್ಶ ಶಾಲೆ, ಎಸ್‍ಆರ್‍ಎಸ್ ಶಾಲೆ, ಕರ್ನಾಟಕ ಪ್ರೆಸ್ ಕ್ಲಬ್ ಮುಂತಾದ ಸಂಘ ಸಂಸ್ಥೆಗಳು ಸಹಕಾರ ನೀಡಿದ್ದು, ಎಲ್ಲರ ಸಹಕಾರಕ್ಕೆ ತಹಶೀಲ್ದಾರ್ ಕೃತಜ್ಞತೆ ಸಲ್ಲಿಸಿದ್ದಾರೆ.

Recent Articles

spot_img

Related Stories

Share via
Copy link