ನಾಯಕನಹಟ್ಟಿ:
ಪಟ್ಟಣದ ಅಂಬೇಡ್ಕರ್ ವೃತ್ತದ ಹತ್ತಿರ ಹೊಸದಾಗಿ ನಿರ್ಮಾಣ ಗೊಳಿಸುತ್ತಿರುವ ಖಾಸಗಿ ಲೇಔಟ್‌ನಲ್ಲಿ ಅಕ್ರಮವಾಗಿ ನಿರ್ಮಿಸಿರುವ ಯುಜಿಡಿ ಮತ್ತು ಚರಂಡಿಯನ್ನು ತೆರವುಗೊಳಿಸುವಂತೆ ಸ್ಥಳ ಪರಿಶೀಲನೆ ನಡೆಸಿದ ಪಟ್ಟಣ ಅಭಿವೃದ್ಧಿ ಸಹಾಯಕ ನಿರ್ದೇಶಕ ಹಾಗೂ ತಹಶೀಲ್ದಾರ್ ತಿಳಿಸಿದರು.
ರಾಜ್ಯ ಹೆದ್ದಾರಿ-೪೫ರ ಅರಬಾವಿ ಚಳ್ಳಕೆರೆ ರಸ್ತೆಯಲ್ಲಿ ಬರುವ ಖಾಸಗಿ ಲೇಔಟ್‌ನ ಮಾಲೀಕರು ಹಾಗೂ ಡೆವಲಪರ್ ಸೇರಿ ಮಧ್ಯರಸ್ತೆಯಿಂದ ೧೫ ಮೀಟರ್ ಬಿಟ್ಟು ಲೇಔಟ್ ಕಾಮಗಾರಿ ನಡೆಸಲು ನಕ್ಷೆಯನ್ನು ನೀಡಿದ್ದು, ಅದರಲ್ಲಿ ೧೫ ಮೀಟರ್ ಒಳಗಡೆನೇ ಯುಜಿಡಿ ಮತ್ತು ಚರಂಡಿಯನ್ನು ನಿರ್ಮಿಸಿರುವುದು ಕಂಡುಬAದಿರುತ್ತದೆ. ಆದ್ದರಿಂದ ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು ೧೫ ಮೀಟರ್ ಮತ್ತು ೬ ಮೀಟರ್ ಜಾಗವನ್ನು ಬಿಟ್ಟು ಲೇಔಟ್ ನಿರ್ಮಿಸಬೇಕೆಂದು ಖಡಕ್ಕಾಗಿ ಎಚ್ಚರಿಸಿದರು.
ಪ್ರಸ್ತುತ ನಿರ್ಮಿಸಿರುವ ಯುಜಿಡಿ ಮತ್ತು ಚರಂಡಿಯನ್ನು ಒತ್ತುವರಿಗೊಳಿಸಲಾಗಿದೆ ಎಂಬುವುದನ್ನು ಖಾತರಿಪಡಿಸಿಕೊಂಡ ಅಧಿಕಾರಿಗಳು ತೆರವುಗೊಳಿಸಿ ಮುಂದಿನ ಕೆಲಸವನ್ನು ಮಾಡಿಕೊಳ್ಳಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಸ್ಥಿತರಾದ ಚಳ್ಳಕೆರೆ ತಹಶೀಲ್ದಾರ್ ರೇಹನ್ ಪಾಷ, ಸಹಾಯಕ ನಿರ್ದೇಶಕ ಮಂಜುನಾಥ, ಟೌನ್ ಪ್ಲಾನರ್ ರೆಹಮಾನ್, ಲೋಕೋಪಯೋಗಿ ಇಲಾಖೆ ಅಧಿಕಾರಿ ಹಕೀಮ್, ಮುಖ್ಯಾಧಿಕಾರಿ ಓ.ಶ್ರೀನಿವಾಸ್, ೯ನೇ ವಾರ್ಡ್ನ ಪಟ್ಟಣ ಪಂಚಾಯಿತಿ ಸದಸ್ಯ ಜೆ.ಆರ್.ರವಿಕುಮಾರ್, ಪ.ಪಂ.ಸದಸ್ಯ ಸೈಯದ್ ಅನ್ವರ್, ಪ.ಪಂ.ಸದಸ್ಯ ಅಬಕಾರಿ ತಿಪ್ಪೇಸ್ವಾಮಿ, ಮುಖಂಡ ಎತ್ತಿನಹಟ್ಟಿ ಗೌಡ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ, ಮುದಿಯಪ್ಪ, ಪಟೇಲ್ ಕೆಬಿ ಕೃಷ್ಣೆಗೌಡ, ಕಂದಾಯ ನಿರೀಕ್ಷ ಚೇತನ್ ಕುಮಾರ್ ಮತ್ತು ಸಿಬ್ಬಂದಿಗಳು, ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಕೆ.ಅನ್ವರ್ ಬಾಷಾ ಇನ್ನೂ ಮುಂತಾದವರು ಇದ್ದರು.
