ಕೋರಂ ಇಲ್ಲದ ಕಾರಣ ಸಾಮಾನ್ಯ ಸಭೆ ಮುಂದೂಡಿಕೆ

ರಾಣಿಬೆನ್ನೂರು:

                ಸ್ಥಳೀಯ ತಾಪಂ ಸಭಾಂಗಣದಲ್ಲಿ ಸೋಮವಾರ ನಡೆಯಬೇಕಾಗಿದ್ದ ತಾಪಂ ಸರ್ವ ಸದಸ್ಯರ ಸಾಮಾನ್ಯ ಸಭೆಯು ಕೋರಂ ಇಲ್ಲದ ಕಾರಣ ಸಭೆ ಎರಡನೇ ಬಾರಿಗೆ ಸೆ,24ಕ್ಕೆ ಮತ್ತೆ ಮುಂದೂಡಲಾಯಿತು. ಕೇವಲ 6 ಸದಸ್ಯರು ಮಾತ್ರ ಸಭೆಯಲ್ಲಿ ಭಾಗವಹಿಸಿದ್ದರು. ತಾಪಂನಲ್ಲಿ ಬಹುಮತ ಹೊಂದಿರುವ ಕಾಂಗ್ರೆಸ್ ಆಡಳಿತವಿರುವ ಇಲ್ಲಿ ಒಟ್ಟು 23 ಸಂಖ್ಯಾಬಲದಲ್ಲಿ ಕಾಂಗ್ರೆಸ್ 17 ಮತ್ತು ಬಿಜೆಪಿ 6 ಸದಸ್ಯರನ್ನು ಹೊಂದಿದೆ.

               ಕಳೆದ ಸ.6 ರಂದು ಸಭೆ ಕೋರಂ ಇಲ್ಲದೇ ಮುಂದೂಡಲ್ಪಟ್ಟಿತ್ತು. ಕೆಲ ಕಾರಣಗಳಿಂದಾಗಿ ಅನೇಕ ಸದಸ್ಯರು ಸಭೆಗೆ ಗೈರಾಗಿದ್ದು, ಇದೇ ಸ.24 ರಂದು ಸಭೆಯನ್ನು ಮತ್ತೆ ಕರೆಯಲಾಗಿದೆ ಎಂದು ತಾಪಂ ಅಧ್ಯಕ್ಷ ನೀಲಕಂಠಪ್ಪ ಕುಸಗೂರ ಸ್ಪಷ್ಠಪಡಿಸಿದರು. ಸದಸ್ಯರ ಗೈರಿನ ಮಧ್ಯೆಯೂ ಸಹ ತಾಲೂಕು ಮಟ್ಟದ ಬಹುತೇಕ ಹಿರಿಯ-ಕಿರಿಯ ಅಧಿಕಾರಿಗಳು ಸಭೆಗೆ ಬಾರದಿರುವುದನ್ನು ತಾಪಂ ಅಧ್ಯಕ್ಷರು ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲು ಸಭೆಗೆ ಸೂಚಿಸಿದರು. ತಾಪಂ ಇಓ ಡಾ.ಬಸವರಾಜ ಬಿಸಿ, ವ್ಯವಸ್ಥಾಪಕ ಬಸವರಾಜ ಶಿಡೆನೂರ ಸೇರಿದಂತೆ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link