ಕ್ಷೇತ್ರದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ ಕ್ರಮ ಕೈಗೊಳ್ಳದ ಶಾಸಕ : ಹೆಚ್.ಎಸ್. ಶಿವಶಂಕರ್ ಆರೋಪ

ಹರಿಹರ:

      ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ತುಂಬಾ ಹದಗೆಟ್ಟಿದ್ದು ನಾಲ್ಕೈದು ಕೊಲೆಗಳು ನಡೆದಿವೆ, ಇದರ ಬಗ್ಗೆ ಶಾಸಕರು ಯಾವುದೇ ಕ್ರಮ ಕೈಗೊಂಡಿಲ್ಲ, ಇದರ ಬಗ್ಗೆ ಚಕಾರವನ್ನೂ ಎತ್ತಿಲ್ಲ. ಆದರೆ ಜಾತಿ ಆಧಾರದ ಮೇಲೆ ವರ್ಗಾವಣೆಗಳು, ಕಾಮಗಾರಿಗಳು, ಗುತ್ತಿಗೆಗಳು, ಕ್ಷೇತ್ರದಲ್ಲಿ ಹೆಚ್ಚು ನಡೆಯುತಿವೆ ಎಂದು ಮಾಜಿ ಶಾಸಕ ಹೆಚ್.ಎಸ್ ಶಿವಶಂಕರ್ ಆರೋಪಿಸಿದರು.

      ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಹೆಚ್.ಶಿವಪ್ಪ ಅಭಿಮಾನಿ ಸಾಂಸ್ಕೃತಿಕ ಬಳಗದಿಂದ, ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು

      ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ತುಂಬಾ ಹದಗೆಟ್ಟಿದ್ದು ನಾಲ್ಕೈದು ಕೊಲೆಗಳು ನಡೆದಿವೆ, ಇದರ ಬಗ್ಗೆ ಶಾಸಕರು ಯಾವುದೇ ಕ್ರಮ ಕೈಗೊಂಡಿಲ್ಲ, ಇದರ ಬಗ್ಗೆ ಚಕಾರವನ್ನೂ ಎತ್ತಿಲ್ಲ. ಆದರೆ ಜಾತಿ ಆಧಾರದ ಮೇಲೆ ವರ್ಗಾವಣೆಗಳು ಹೆಚ್ಚು ಆಗುತ್ತಿವೆ ಎಂದು ದೂರಿದರು,
ನಾನು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜಯಶಾಲಿಯಾಗಿದ್ದರೆ ಶತಾಯಗತಾಯ ಪ್ರಯತ್ನಿಸಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಿ ಹರಿಹರಕ್ಕೆ ಮೆಡಿಕಲ್ ಕಾಲೇಜ್ ತರುತ್ತಿದ್ದೆ. ಅದರಂತೆ ಈಗಿನ ಶಾಸಕರು ಕ್ಷೇತ್ರದ ಆಭಿವೃದ್ಧಿಯ ಕಡೆ ಪ್ರಯತ್ನ ನಡೆಸಿ ಮೆಡಿಕಲ್ ಕಾಲೇಜ್ ತರುವಲ್ಲಿ ಕಾರ್ಯ ಪ್ರವೃತ್ತರಾಗಲಿ ಎಂದು ಹೇಳಿದರು.

     ಹಾಲಿ ಶಾಸಕರು ಕೆಲವು ಸಭೆ ಸಮಾರಂಭಗಳಲ್ಲಿ ಮಾತನಾಡುವಾಗ ಯಾವುದೇ ಸಾಮಾನ್ಯ ಜ್ಞಾನ ಇಲ್ಲದವರಂತೆ ಮಾತನಾಡುತ್ತಿದ್ದಾರೆ. ಕಲಾ ಮತ್ತು ವಾಣಿಜ್ಯ ಕಾಲೇಜು ವಿದ್ಯಾರ್ಥಿಗನ್ನು ಉದ್ದೇಶಿಸಿ ಮಾತನಾಡುವಾಗ ನೀವು ಮುಂದೆ ಉತ್ತಮವಾಗಿ ಓದಿ ದೊಡ್ಡ ದೊಡ್ಡ ಎಂಜಿನಿಯರ್, ಡಾಕ್ಟರುಗಳಾಗಿ ಎಂದು ಹೇಳುವುದು ಎಷ್ಟು ಸರಿ ಎಂದರು.

      ವಾಲ್ಮೀಕಿ ಜಯಂತಿಯ ಸಮಾರಂಭದಲ್ಲ್ಲಿ ವಾಲ್ಮೀಕಿಯ ಮಹರ್ಷಿಯವರ ಬಗ್ಗೆ ಮಾತನಾಡುತ್ತಾ ಮಹಾಭಾರತವನ್ನು ವಾಲ್ಮೀಕಿ ರಚಿಸಿದ್ದಾರೆ ಎಂದು ಹೇಳುವುದು ಎಷ್ಟುರ ಮಟ್ಟಿಗೆ ಸರಿ, ಕನಿಷ್ಠ ಧಾರ್ಮಿಕ ಜ್ಞಾನ ಇಲದೇ ಇರುವ ಇಂತಹ ಶಾಸಕರು ಕ್ಷೇತ್ರಕ್ಕೆ ಬೇಕೇ ಗೆಲ್ಲಿಸಿದ ಜನರೆ ಪ್ರಶ್ನಿಸುವಂತಾಗಿದೆ ಎಂದು ಹೇಳಿದರು.

      ಕಾರ್ಯಕ್ರಮಗಳಲ್ಲಿ ಮಾತನಾಡುವಾಗ ಸ್ಥಳೀಯರಾದ ನನ್ನನ್ನು ಆಯ್ಕೆ ಮಾಡಿದ್ದೀರಿ ಮಾಜಿ ಶಾಸಕರುಗಳೆಲ್ಲ ಪರಸ್ಥಳದವರು ಎಂದು ಪದೇ ಪದೇ ಹಾಲಿ ಶಾಸಕರು ಹೇಳುತ್ತಿರುತ್ತಾರೆ, ಆದರೆ ಈ ಹಿಂದೆ ಆಯ್ಕೆಯಾದ ಎಲ್ಲ ಶಾಸಕರುಗಳು (ಡಾ.ನಾಗಪ್ಪನವರನ್ನು ಹೊರತು ಪಡಿಸಿ) ಇನ್ನು ಉಳಿದವರು ದಾವಣಗೆರೆಯಲ್ಲಿ ವಾಸವಾಗಿದ್ದರು ಎಂದು ತಿಳಿಸಿದರು.

      ಇಂದು ನಡೆಸುತ್ತಿರುವ ಆರೋಗ್ಯ ಮೇಳವು ಯಾವುದೇ ಪ್ರಚಾರಕ್ಕಾಗಿ ಮಾಡುತ್ತಿಲ್ಲ. ಕಳೆದ ಆರು ವರ್ಷಗಳಿಂದ ಈ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ, ಬಡವರ ಒಳಿತಿಗಾಗಿ ಪ್ರತಿ ವರ್ಷದಂತೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಮಾಡಲಾಗುತ್ತಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಜನರು ಇಲ್ಲಿ ಸೇರಿದ್ದಾರೆ ಇಂದು ನನ್ನಗೆ ತೃಪ್ತಿ ತಂದಿದೆ ಎಂದರು.

      ಕಾರ್ಯಕ್ರಮದಲ್ಲಿ ಯಲವಟ್ಟಿ ಶ್ರೀ ಯೋಗಾನಂದಶ್ರೀಗಳು, ನಂದಿಗಾವಿ ನಂದೀಶ್ವರ ಶಿವಾಚಾರ್ಯ ಶ್ರೀಗಳು, ಗುತ್ತೂರಿನ ಪ್ರಭುಲಿಂಗ ಶ್ರೀಗಳು, ಹರಪನಹಳ್ಳಿಯ ಕೊಟ್ರೇಶ್, ಚಂದ್ರಯ್ಯ, ವಾಸನದ ದೇವರಾಜ್ ಮುಂತಾದವರು ಮಾತನಾಡಿದರು.

     ವೇದಿಕೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ, ವಿಶ್ವನಾಥ ಭೂತೆ, ಹಬಿಬುಲ್ಲಾ, ಪಿ.ಎನ್ ವಿರೂಪಾಕ್ಷ, ಬಂಡೇರ ತಿಮ್ಮಣ್ಣ, ಜಿ.ನಂಜಪ್ಪ, ನಿರಂಜನ್ ದೀಟೂರು, ಮುಂತಾದ ಜೆಡಿಎಸ್ ಮುಖಂಡರುಗಳು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap