ನನ್ನ ಪ್ರೀತಿಯ ಹುಡುಗಿ’, ‘ದುನಿಯಾ’, ‘ಆಪ್ತಮಿತ್ರ” ಇಂತಿ ನಿನ್ನ ಪ್ರೀತಿಯ’ ‘ರಾಮ್’ ಸೇರಿದಂತೆ ಸಾಕಷ್ಟು ಸಿನಿಮಾದ ಹಾಡುಗಳಿಗೆ ಧ್ವನಿಯಾದ ನಂದಿತಾ ಈಗ ತಾಯಿಯಾಗಿದ್ದಾರೆ.
ನಂದಿತಾ ಅವರು ಕನ್ನಡದ ಖ್ಯಾತ ಸಂಗೀತ ನಿರ್ದೇಶಕರಾದ ಹಂಸಲೇಖ, ಇಳಯರಾಜ, ಮನೋ ಮೂರ್ತಿ, ಗುರುಕಿರಣ್, ವಿ.ಮನೋಹರ್, ರಾಜೇಶ್ ರಾಮನಾಥ್ ಸೇರಿದಂತೆ ಅನೇಕ ಸಂಗೀತ ನಿರ್ದೇಶಕರ ಸಿನಿಮಾಗಳಿಗೆ ಹಾಡಿದ್ದಾರೆ. ‘ಹಬ್ಬ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಬಂದ ನಂದಿತಾ ಒಂದು ಕಾಲದಲ್ಲಿ ಸಾಕಷ್ಟು ಬೇಡಿಕೆ ಹೊಂದಿದ್ದ ಗಾಯಕಿ ಆಗಿದ್ದರು.
ಹಿನ್ನೆಲೆಗಾಯಕಿ ನಂದಿತಾ ಮತ್ತು ರಾಕೇಶ ಮದುವೆ ಆಗಿದ್ದರು, ಈಗ ದಂಪತಿಗೆ ಗಂಡು ಮಗು ಜನಿಸಿದೆ. ಈ ಸಂತಸವನ್ನು ನಂದಿತಾ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ದಿನ ಮಗು ಹುಟ್ಟಿದೆ. ಇದನ್ನು ನೋಡಿ ನಂದಿತಾ ಅವರ ನೂರಾರು ಅಭಿಮಾನಿಗಳು ಹಾಗೂ ಚಿತ್ರರಂಗದ ಮಿತ್ರರು ಶುಭ ಹಾರೈಸಿದ್ದಾರೆ.
