ಲೈಫ್‌ ಸೀಕ್ರೇಟ್‌ ಬಿಚ್ಚಿಟ್ಟ ರಷ್ಮಿಕಾ ಮಂದಣ್ಣ…!

ಮುಂಬೈ :

    ‘ಡಿಯರ್ ಡೈರಿ’ ಎಂಬ ಶೀರ್ಷಿಕೆಯಲ್ಲಿ ಯಾವ ವಿಷಯಗಳು ಹಿತವೆನಿಸುತ್ತವೆ ಎಂದು ತಮ್ಮ ಲೈಫ್ ಸೀಕ್ರೆಟ್ ಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

   ನಟಿ ರಶ್ಮಿಕಾ ಇನ್‌ಸ್ಟಾಗ್ರಾಮ್‌ನಲ್ಲಿ ಸಾಮಾನ್ಯವಾಗಿ ಇವೆಂಟ್‌ ಫೋಟೋ, ಹೊಸ ಫೋಟೋಶೂಟ್‌, ಸಾರಿ ಇನ್ನಿತರ ರೆಗುಲರ್ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೆ ಈ ಭಾರಿ ಅವರು ತಮಗೆ ಖುಷಿ ನೀಡುವ ಸಂಗತಿಗಳಲ್ಲಿ ಅವರು ಮುಳುಗಿ ಹೋಗಿರುವ ಸುಮಾರು 10 ಫೋಟೋಗಳನ್ನು ಶೇರ್‌ಮಾಡಿಕೊಂಡಿದ್ದಾರೆ. ಅದಕ್ಕೆ ‘ಡಿಯರ್ ಡೈರಿ’ ಎಂದು ಶಿರ್ಷಿಕೆ ಬರೆದುಕೊಂಡಿದ್ದಾರೆ.

    ರಶ್ಮಿಕಾ ಮಂದಣ್ಣ ಜೀವನದಲ್ಲಿ ಮುಖ್ಯವಾಗಿರುವ ‘ಒಳ್ಳೆಯ ಆಹಾರ, ನಿದ್ರೆ, ಓದು, ಸಿಹಿ ಉಪಚಾರ, ಪ್ರಯಾಣ ಮತ್ತು ಔರಾ (ಸಾಕುನಾಯಿ)’ ತಮ್ಮನ್ನು ಖುಷಿಪಡಿಸಿವ ವಿಷಯಗಳು ಎಂದಿದ್ದಾರೆ. ನೀವು ನಿಮ್ಮ ಜೀವನದಲ್ಲಿ ಖುಷಿಯಾಗಿರಲು ನಿಮ್ಮ ನೆಚ್ಚಿನ ನಟಿಯಂತೆ ಈ ವಿಷಯಗಳನ್ನು ಅನುಸರಿಸಬಹುದಾಗಿದೆ.

    ಈ ಡಿಯರ್ ಡೈರಿ ನನಗೆ ವಿಶೇಷವಾದದ್ದು. ‘ಒಳ್ಳೆಯ ಆಹಾರ, ನಿದ್ರೆ, ಓದು, ಸಿಹಿ ಉಪಚಾರ, ಕಾಫಿ, ಪ್ರಯಾಣ ಮತ್ತು ಔರಾ” ನನ್ನ ಜೀವನದಲ್ಲಿ ಇಲ್ಲದ್ದನ್ನು ಊಹಿಸಲು ಸಾಧ್ಯವಿಲ್ಲ. ಈವಷ್ಟೇ ಅಲ್ಲ ಇನ್ನಷ್ಟು ಖುಷಿ ನೀಡುವ ಸಂಗತಿಗಳನ್ನು ನಿಮ್ಮೊಂದಿಗೆ ನಾನು (ಭಾಗ 2ನಲ್ಲಿ) ಹಂಚಿಕೊಳ್ಳಬಹುದು ಅಂತಲೂ ಅವರು ತಿಳಿಸಿದ್ದಾರೆ.

   ಸಾಮಾನ್ಯವಾಗಿ ಜನರು ನನ್ನ ನಟನೆಯನ್ನು ನೋಡಿರುತ್ತಾರೆ. ಆದರೆ ನನ್ನೂ ಸೇರಿದಂತೆ ನನ್ನ ಸ್ನೇಹಿತರು ಮತ್ತು ಕುಟುಂಬದವರಿಗೆ ನನ್ನ ಈ ಎಲ್ಲ ವಿಷಯಗಳ ಗೊತ್ತಿರುತ್ತದೆ ಎಂದು ಅವುಗಳ ಬಗ್ಗೆ ನಟಿ ವಿವರಿಸಿದ್ದಾರೆ.

  ‘ಒಳ್ಳೆಯ ಆಹಾರ’ ವನ್ನು ನಾನು ಸದಾ ಇಷ್ಟಪಡುತ್ತೇನೆ. ದೇವರೇ! ನಾನು ಇಷ್ಟವಾದದನ್ನು ತಿಂದ ನಂತರವೂ ಇಷ್ಟು ಫಿಟ್ ಆಗಿದ್ದೇನೆ ಎಂದು ಒಮ್ಮೊಮ್ಮೆ ನನಗೆ ಆಶ್ಚರ್ಯವಾಗುತ್ತದೆ ಎಂದು ನಟಿ ದೇವರಿಗೆ ಧನ್ಯವಾದ ತಿಳಿಸಿದ್ದಾರೆ. ಚಯಪಚಯ ಸರಿಯಾಗಿ ಇರಬೇಕು ಅವರು ಅಭಿಪ್ರಾಯಪಟ್ಟಿದ್ದಾರೆ.

   ದಿನದಲ್ಲಿ ಎಷ್ಟೇ ಕೆಲಸವಿದ್ದರೂ, ಯಾವುದೇ ಸಮಯದಲ್ಲಾದರೂ ನಾನು ‘ಸಿಹಿ ನಿದ್ರೆ’ಯನ್ನು ಪ್ರೀತಿಸುತ್ತೇನೆ. ಒಳ್ಳೆಯ ‘ಪುಸ್ತಕ’ ನನ್ನ ಜೀವನದ ಹೊಸ ಪ್ರೀತಿ. ಪುಸ್ತಕ ಓದುವುದು ನನ್ನ ಖುಷಿಗಳಲ್ಲಿ ಒಂದಾಗಿದೆ. ಈ ಹವ್ಯಾಸ ಜೀವನದಲ್ಲಿ ತಡವಾಗಿ ಬಂದಿದ್ದರೂ ಸಹಿತ ಅದರ ಪ್ರಾಮುಖ್ಯತೆ ನಾನು ಕಂಡುಕೊಂಡು ಖುಷಿಯಾಗಿದ್ದೇನೆ ಎಂದು ನಟಿ ರಶ್ಮಿಕಾ ತಿಳಿಸಿದ್ದಾರೆ.

   ‘ಸಿಹಿ ತಿಂಡಿಗಳು’ ಸಹ ನನ್ನ ಜೀವನದ ಪ್ರಮುಖ ಭಾಗವೇ ಆಗಿದೆ. ಇನ್ನೂ ‘ಪ್ರಯಾಣ’ ಇದು ಸಹ ನನ್ನು ಜೀವನವನ್ನು ಮರು ಹೊಂದಿಸುತ್ತದೆ. ನೀವು ಸಾಧ್ಯವಾದಷ್ಟು ಜಗತ್ತನ್ನು ಸುತ್ತಿ, ಅನುಕೂಲಕ್ಕೆ ತಕ್ಕಂತೆ ಹೆಚ್ಚು ಪ್ರಯಾಣ ಮಾಡಿ. ಇದು ನಮ್ಮ ಮನಸ್ಥಿತಿ, ದೇಹ, ಮನಸ್ಸು, ಹೃದಯ ಮತ್ತು ಎಲ್ಲದಕ್ಕೂ ಒಳ್ಳೆಯದು. ಇದರಿಂದ ನೀವು ಹೆಚ್ಚು ಖರ್ಚಾಗಬಹುದು ಎಂದು ಹೇಳಬಹುದು. ಆದರೆ ನೀವು ಮಾಡುವ ಖರ್ಚು ಪ್ರಯಾಣ ಮೇಲಲ್ಲ, ಒಳ್ಳೆಯ ನೆನಪುಗಳಿಗಾಗಿ ಖರ್ಚಾಗುತ್ತದೆ ಎಂದು ರಶ್ಮಿಕಾ ಸಲಹೆ ನೀಡಿದ್ದಾರೆ.

   ನಟಿ ರಶ್ಮಿಕಾಗೆ ನಾಯಿಗಳೆಂದರೆ ಅಚ್ಚುಮೆಚ್ಚು. ಅವರು ತಮ್ಮ ಮುದ್ದಿನ ನಾಯಿ ‘ಔರಾ’ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ನನಗೆ ಖುಷಿ ಮತ್ತೊಂದು ಸಂಗತಿ ಎಂದರೆ ಅದು ‘ಔರಾ’. ಇದು ನನ್ನ ಪುಟ್ಟ ಹೆಣ್ಣು ಮಗು. ನಾನು ನಿನ್ನನ್ನು ಆದಷ್ಟು ಬೇಗ ಹೈದರಾಬಾದ್‌ಗೆ ಕರೆಸಿಕೊಳ್ಳುತ್ತೇನೆ ಔರಾ ಮಿಸ್ ಮಾಡಿಕೊಳ್ಳುತ್ತಿರುವ ಬಗ್ಗೆ ನಟಿ ಹೇಳಿಕೊಂಡಿದ್ದಾರೆ.

   ಸಿನಿಮಾ ‘ಕೆಲಸ’ದ ಕುರಿತು ಬರೆದುಕೊಂಡಿರುವ ನಟಿ ರಶ್ಮಿಕಾ ಮಂದಣ್ಣ ಅವರು, ನಾನು ಇಲ್ಲಿಯವರೆಗೆ ಬಂದು ನಿಂತಿದ್ದೇನೆ. ಉತ್ತಮ ಜೀವನಕ್ಕೆ ಅವಕಾಶ ಕೊಟ್ಟ ದೇವರಿಗೆ, ಪ್ರೀತಿ ಪಾತ್ರರಿಗೆ ನಾನು ಹೆಚ್ಚು ಕೃತಜ್ಞರಾಗಿದ್ದೇನೆ ಎಂದು ಅವರು ತಿಳಿಸಿದ್ದಾರೆ.

Recent Articles

spot_img

Related Stories

Share via
Copy link
Powered by Social Snap