ಚಾಮರಾಜನಗರ
ಭಾರೀ ವಾಹನಗಳಿಗೆ ತಮಿಳುನಾಡು ಅರಣ್ಯ ಇಲಾಖೆಯು ದಂಡ ವಿಧಿಸುತ್ತಿದ್ದು, ಪ್ರತಿ ಲಾರಿ, ಟ್ರಕ್‌ಗಳ ತೂಕ ಅಳೆಯುತ್ತಿರುವುದರಿಂದ ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಕಿಲೋ ಮೀಟರ್‌ಗಟ್ಟಲೇ ಟ್ರಾಫಿಕ್ ಜಾಂ ಉಂಟಾಗಿದೆ. ಇದರಿಂದ ವಾಹನ ಸವಾರರು ಪರದಾಡಿದ ಘಟನೆ ನಡೆದಿದೆ.
ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಚಾಮರಾಜನಗರದ ಗಡಿಯಲ್ಲಿರುವ ಅಸನೂರಲ್ಲಿ ತಮಿಳುನಾಡಿನ ಅರಣ್ಯ ಇಲಾಖೆಯು ಅತಿಭಾರ ಹೊತ್ತ ವಾಹನಗಳಿಗೆ ದಂಡ ವಿಧಿಸುತ್ತಿರುವ ಹಿನ್ನೆಲೆ ಉಳಿದ ವಾಹನಗಳಾದ ಬಸ್, ಕಾರು, ಬೈಕ್ ಸವಾರರು ಗಂಟೆಗಟ್ಟಲೇ ಟ್ರಾಫಿಕ್ ಜಾಂನಲ್ಲಿ ಸಿಲುಕಿ ಪರದಾಡಿದರು.
ದಿಂಬಂ ಘಟ್ಟ ಪ್ರದೇಶದಲ್ಲಿ ಸರಕು ತುಂಬಿದ ವಾಹನಗಳು 16 ಟನ್ ಅಷ್ಟೇ ಹೊತ್ತು ಸಾಗಬೇಕು ಎಂದು ಹೈಕೋರ್ಟ್ ಆದೇಶ ಹಿನ್ನೆಲೆ ಗಡಿಯಲ್ಲಿ ಸರಕುಗಳ ತೂಕ ಪರೀಕ್ಷಿಸಿ ಅನುಮತಿ ನೀಡುತ್ತಿರುವ ಹಿನ್ನೆಲೆ ಉಳಿದ ವಾಹನಗಳು ಕಿಮೀಗಟ್ಟಲೇ ಟ್ರಾಫಿಕ್‌ನಲ್ಲಿ ಸಿಲುಕುವಂತಾಗಿದೆ.
6 ಮತ್ತು 10 ಚಕ್ರದ ಲಾರಿಗಳು, ಟ್ರಕ್‌ಗಳು ಕೇವಲ 16.2 ಟನ್‌ನಷ್ಟು ಮಾತ್ರ ಸರಕು ತುಂಬಿ ಸಾಗಾಟ ನಡೆಸಬಹುದಾಗಿದೆ. ಆದರೆ, ಬಹುತೇಕ ಲಾರಿಗಳು 20-25 ಟನ್‌ನಷ್ಟು ತೂಕ ಹೊತ್ತು ಸಾಗುತ್ತಿರುವುದು ಕಂಡುಬಂದಿದ್ದರಿಂದ ಅರಣ್ಯ ಇಲಾಖೆ ಈ ಕ್ರಮ ತೆಗೆದುಕೊಂಡಿದೆ. ಒಟ್ಟಿನಲ್ಲಿ ಆ್ಯಂಬುಲೆನ್ಸ್‌ಗಳು ಸೇರಿದಂತೆ ಹಲವು ವಾಹನಗಳು ಕಿಲೋ ಮೀಟರ್‌ಗಟ್ಟಲೇ ವಾಹನಗಳು ತಮಿಳುನಾಡು ಗಡಿಯಲ್ಲಿ ನಿಂತು ಫಜೀತಿ ಅನುಭವಿಸುವಂತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ