ಗಡಿ ಗ್ರಾಮಗಳಲ್ಲಿ ಭೂಕಂಪನ….!

ವಿಜಯಪುರ

ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿ ಫೆ.2ರ ರಾತ್ರಿ ಹಾಗೂ ಫೆ.೩ ಬೆಳಗಿನ ಜಾವ ಭೂಕಂಪನ ಸಂಭವಿಸಿದೆ ಗುರುವಾರ ರಾತ್ರಿ 10:05 ಹಾಗೂ ಶುಕ್ರವಾರ ನಸುಕಿನ 01:47 ಕ್ಕೆ ತಿಕೋಟಾ ತಾಲೂಕಿನ ಘೋಣಸಗಿ, ಕಳ್ಳಕವಟಗಿ, ಹುಬನೂರ, ಟಕ್ಕಳಕಿ, ಸೋಮದೇವರಹಟ್ಟಿ, ಸಿದ್ದಾಪುರ ಕೆ. ಮಲಕನದೇವರಹಟ್ಟಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭೂಕಂಪನ ಸಂಭವಿಸಿದೆ.

ಕರ್ನಾಟಕ-ಮಹಾರಾಷ್ಟ್ರ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಈ ಗ್ರಾಮಗಳಲ್ಲಿ ಮಾತ್ರವಲ್ಲದೆ ಮಹಾರಾಷ್ಟ್ರದ ಬಿವರಗಿ, ಮೊರಬಗಿ ಗ್ರಾಮದ ಸುತ್ತಮುತ್ತಲು ಭೂಕಂಪನ ಅನುಭವ ಆಗಿದೆ ಭೂಮಿ ಕಂಪಿಸಲು ಪ್ರಾರಂಭಿಸಿದ ತಕ್ಷಣ ಜನರು ಜೀವ ಭಯದಿಂದ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.

ಶುಕ್ರವಾರ ನಸುಕಿನ 01:47 ಕ್ಕೆ ಸಂಭವಿಸಿದ ಭೂಕಂಪನ ರಿಕ್ಟರ್ ಮಾಪಕದಲ್ಲಿ 2.7 ರಷ್ಟು ಪ್ರಮಾಣ ದಾಖಲಾಗಿದೆ. ಭೂಕಂಪನದ ಕೇಂದ್ರ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಬಿವರಗಿ ಗ್ರಾಮದಲ್ಲಿ ಕೇಂದ್ರೀಕೃತವಾಗಿತ್ತು ಎಂದು ತಿಳಿದುಬಂದಿದೆ.

Recent Articles

spot_img

Related Stories

Share via
Copy link
Powered by Social Snap