ಗಣೇಶೋತ್ಸವಕ್ಕೆ ಹಾಕಿರುವ ಅನಗತ್ಯ ನಿರ್ಬಂಧಗಳನ್ನು ತೆರವುಗೊಳಿಸಿ : ಜಿಲ್ಲಾಡಳಿತಕ್ಕೆ ಬಿಜೆಪಿ ಯುವಮೋರ್ಚಾ ಆಗ್ರಹ

ತುಮಕೂರು:

              ಗಣೇಶೋತ್ಸವ ಮತ್ತು ಗಣೇಶ ಪ್ರತಿಷ್ಠಾಪನೆಯು ನಮ್ಮ ದೇಶದ ಒಂದು ಪ್ರಮುಖ ಸಾಂಸ್ಕøತಿಕ ಮತ್ತು ಧಾರ್ಮಿಕ ಆಚರಣೆಯಾಗಿದೆ. ಗಣೇಶೋತ್ಸವದ ಬಗ್ಗೆ ಯುವಕರು ಭಾವಾನಾತ್ಮಕ ಸಂಬಂಧವನ್ನು ಹೊಂದಿದ್ದಾರೆ, ಅದೇ ರೀತಿಯಾಗಿ ತುಮಕೂರು ಜಿಲ್ಲೆ ಮತ್ತು ನಗರದಲ್ಲಿಯೂ ಸಹ ಅನೇಕ ಮಂಡಳಿಗಳು ಗಣೇಶ ಪ್ರತಿಷ್ಠಾಪನೆ ಮಾಡಿ ಸಾಮರಸ್ಯವನ್ನು ಮೆರೆಯುತ್ತಾ, ಕ್ರೀಡೆ ಕಲೆ, ಜಾನಪದ ಪ್ರಾಕಾರಗಳಿಗೆ ಪ್ರೋತ್ಸಾಹಿಸುತ್ತಾ ಬಂದಿರುವುದು ಅಭಿನಂದನಾರ್ಹ.
          ಆದರೆ, ಕಳೆದ ಭಾರಿಯಿಂದ ಗಣೇಶ ಮಂಡಳಿಗಳ ಮೇಲೆ ಅನವಶ್ಯಕ ನಿರ್ಬಂಧ ಹೇರಲಾಗುತ್ತಿದೆ. ಆ ಮೂಲಕ ಯುವಕರಿಗೆ ಒತ್ತಡ ಹೇರಿ, ಅವರ ಆಸಕ್ತಿ ಕುಂದಿಸಿ, ಗಣೇಶೋತ್ಸವವನ್ನು ಹತ್ತಿಕ್ಕುವ ಹುನ್ನಾರವಾಗುತ್ತಿದೆಯೋ ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡುತ್ತಿದೆ. ಕಾನೂನು ಸುವ್ಯವಸ್ಥೆ, ಮತ್ತು ಸಮಾಜದ ಶಾಂತಿ ಕಾಪಾಡಬೇಕಾಗಿರುವುದು ಎಲ್ಲರ ಕರ್ತವ್ಯ. ಅದಕ್ಕೆ ಯಾರೂ ಸಹ ವಿರೋಧಿಸುವುದಿಲ್ಲ ಆದರೆ, ಆ ಕಾರಣವನ್ನಿಟ್ಟುಕೊಂಡು ಅನವಶ್ಯಕ ನಿರ್ಬಂಧಗಳನ್ನು ಹೇರುವುದು ಸರಿಯಲ್ಲ. ಹಾಗಾಗಿ, ಸಮಾಜದ ಸಾಂಸ್ಕøತಿಕ ಆಚರಣೆಯಾದ ಗಣೇಶೋತ್ಸವ ಪ್ರತಿಷ್ಠಾಪನೆಗೆ ಮತ್ತು ಮಂಡಳಿಗಳ ಮೇಲೆ ಅನವಶ್ಯಕ ನಿರ್ಬಂಧಗಳನ್ನು ಹೇರದೆ ಜಿಲ್ಲಾಡಳಿತ ಅವಶ್ಯಕ ಪ್ರೋತ್ಸಾಹ ಮತ್ತು ಸಹಕಾರವನ್ನು ನೀಡುವ ಮೂಲಕ ಹಿಂದೂ ಯುವಕರ ಭಾವನೆಗಳಿಗೆ ಸ್ಪಂದಿಸಬೇಕೇಂದು ಬಿಜೆಪಿ, ಯುವಮೋರ್ಚಾ ಜಿಲ್ಲಾಡಳಿತದಲ್ಲಿ ಕೆಳಗಿನ ಬೇಡಿಕೆಗಳ ಮೂಲಕ ಮನವಿ ಮಾಡಿಕೊಳ್ಳುತ್ತೇವೆ.
1. ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅನುಮತಿಯು ಒಂದೇ ಸೂರಿನಡಿ, ಏಕಗವಾಕ್ಷಿಯಲ್ಲಿ ದೊರೆಯುವಂತೆ ವ್ಯವಸ್ಥೆ ಮಾಡಬೇಕು.
2. ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಯಾವ ಯಾವ ಕ್ರಮವನ್ನು ಅನುಸರಿಸಬೇಕು ಎಂಬುದನ್ನು ಎಲ್ಲಾ ಗಣೇಶ ಮಂಡಳಿಗಳ ಸಭೆ ಕರೆದು, ಮನವರಿಕೆ ಮಾಡಿಕೊಡಬೇಕು.
3. ಡಿಜೆ, ಧ್ವನಿವರ್ಧಕಗಳು ಹಾಗೂ ಮೆರವಣಿಗೆಯ ಮಾರ್ಗಗಳಿಗೆ ಯಾವುದೇ ನಿರ್ಬಂಧವಿರಬಾರದು.

Recent Articles

spot_img

Related Stories

Share via
Copy link