ಗುಬ್ಬಿ :
ಬಡ ರೈತರ ಹಸುಗಳು ಹಾಲು ಕೊಡುವುದನ್ನು ನಿಲ್ಲಿಸಿದ ಮೇಲೆ ರೈತ ಹೊಸ ಹಸು ಖರೀದಿಗೆ ಏನು ಮಾಡಬೇಕು ಹಳೆಯದನ್ನು ಮಾರಬೇಕಾ ಅಥವಾ ಎರಡನ್ನೂ ಸಾಕಬೇಕ. ಬಿ ಜೆ ಪಿ ಸರ್ಕಾರದ ವರು ಗೋ ಹತ್ಯೆ ನಿಷೇಧ ಕಾನೂನು ತರ್ತೀರ ಆದ್ರೆ ಸರ್ಕಾರದಿಂದಲೇ ಯಾಕೆ ನೀವು ಗೋ ಶಾಲೆ ಮಾಡಬಾರದು ಸಾಬರು ಎಮ್ಮೆ ಕೋಣನೂ ತಿಂತಾರೆ ನೀವು ನಿಷೇಧ ಮಾಡಿದ್ರೆ ರೈತರ ಪಾಡೇನು ಎಂದು ತಮ್ಮ ಹಳೆ ವರಸೆಯಲ್ಲಿ ಭಾಷಣ ಶುರು ಮಾಡಿದ ಜೆ ಡಿ ಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಬಿ ಜೆ ಪಿ ಯನ್ನು ಆ ಪಕ್ಷದ ನಾಯಕರನ್ನು ತರಾಟೆಗೆ ತೆಗೆದುಕೊಂಡರು. ಬಹಳ ಹಿಂದಿನಿಂದಲೂ ನಾವು ಕಾಂಗ್ರೆಸ್ ಪಕ್ಷವನ್ನು ನಂಬಿ ಮೋಸ ಹೋಗಿದ್ದೇವೆ ಅವರಿಂದ ಮುಸ್ಲಿಂ ಸಮಾಜಕ್ಕೆ ಯಾವುದೇ ಉಪಯೋಗವಿಲ್ಲ. ಎಂದು ತಿಳಿಸಿದರು.
ತಾಲೂಕಿನ ಕುನ್ನಲಾ ಗ್ರಾಮದಲ್ಲಿ ಜೆಡಿಎಸ್ ಪಕ್ಷದಿಂದ ಆಯೋಜನೆ ಮಾಡಿದ್ದ ಅಲ್ಪಸಂಖ್ಯಾತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು ಮುಸ್ಲಿಂ ಬಾಂಧವರು ಒಗ್ಗಟ್ಟಿನಿಂದ ಈ ಬಾರಿ ಜೆಡಿಎಸ್ ಪಕ್ಷದತ್ತ ಒಲವು ತೊರಬೇಕಾಗಿದೆ ಗುಬ್ಬಿಯಲ್ಲಿ ಬಿಎಸ್ ನಾಗರಾಜು ಗೆದ್ದರೆ ನಾನು ಗೆದ್ದಂತೆ ಎಂದು ನೀವು ತಿಳಿದುಕೊಳ್ಳಿ ನಮ್ಮ ಮುಸ್ಲಿಂ ಸಮಾಜದ ಯಾವುದೇ ಸಮಸ್ಯೆಗಳಿದ್ದರೂ ನಾನೇ ಮುಂದು ನಿಂತು ಆ ಸಮಸ್ಯೆಗಳನ್ನು ಬಗೆಹರಿಸಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ಬದ್ಧವಾಗಿದ್ದೇನೆ.
ಇಲ್ಲಿನ ಶಾಸಕರು 20 ವರ್ಷದಿಂದ ಆಡಳಿತ ಮಾಡಿದ್ದರು ಯಾವುದೇ ಅಭಿವೃದ್ಧಿ ಕೆಲಸವಾಗಿಲ್ಲ ಅವರು ಕೊಡುವ ಕುಕ್ಕರ್ ಸೀರೆಯಿಂದ ನಮ್ಮ ಬಡತನ ವಾಗಲಿ ನಮ್ಮ ಅಭಿವೃದ್ಧಿಆಗುವುದಕ್ಕೆ ಸಾಧ್ಯವಿಲ್ಲ ಹಾಗಾಗಿ ನಾವೆಲ್ಲರೂ ಈ ಬಾರಿ ಜೆಡಿಎಸ್ ಪಕ್ಷಕ್ಕೆ ಮತವನ್ನು ಹಾಕಬೇಕು.
ಇನ್ನು ಹಿಜಾಬ್, ಹಲಾಲ್ ನಂತಹ ಸಮಸ್ಯೆಗಳು ಎದುರಾದಾಗ ಕಾಂಗ್ರೆಸ್ ಪಕ್ಷ ನಮ್ಮ ಪರವಾಗಿ ನಿಲ್ಲಲಿಲ್ಲ ನಮ್ಮ ಜೊತೆಯಲ್ಲಿ ನಿಂತಿದ್ದು ಕುಮಾರಸ್ವಾಮಿ ಹಾಗಾಗಿ ಅವರು ನಮ್ಮ ನಾಯಕರಾಗುತ್ತಾರೆ ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಒಳ್ಳೆಯ ಆರೋಗ್ಯ, ಉದ್ಯೋಗ ಸಿಗಬೇಕು ಎಂದರೆ ಅದು ಜೆಡಿಎಸ್ ಪಕ್ಷದಿಂದ ಮಾತ್ರ ಸಾಧ್ಯ ತಾವೆಲ್ಲರೂ ಒಗ್ಗಟ್ಟಿನಿಂದ ನಾಗಣ್ಣನ ಜೊತೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಗುಬ್ಬಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿಎಸ್ ನಾಗರಾಜ ಮಾತನಾಡಿ ನನಗೆ 20 ವರ್ಷ ತಾವು ಆಡಳಿತ ನೀಡಬೇಡಿ ಕೇವಲ ಐದು ವರ್ಷ ಆಡಳಿತ ನೀಡಿ ನಾನು ಕುಕ್ಕರ್,ಮಿಕ್ಸಿ ಹಿಡಿದುಕೊಂಡು ನಿಮ್ಮ ಮನೆ ಬಾಗಿಲಿಗೆ ಬರುವುದಿಲ್ಲ ನಿಮ್ಮ ಗ್ರಾಮದ ನಿಮ್ಮ ಬದುಕಿನ ಅಭಿವೃದ್ಧಿ ಯೋಜನೆಗಳನ್ನು ಹಿಡಿದುಕೊಂಡು ನಿಮ್ಮ ಮನೆ ಬಾಗಿಲಿಗೆ ಬರುತ್ತೇನೆ ತಾವೆಲ್ಲ ಮುಸ್ಲಿಂ ಸಮುದಾಯದವರು ಕಷ್ಟ ಬಿದ್ದು ತಮ್ಮ ವೃತ್ತಿ ಬದುಕನ್ನು ಮಾಡುತ್ತಿರುವಂತಹ ಜನತೆ ನಿಮ್ಮ ಮಕ್ಕಳು ವಿದ್ಯಾವಂತರಾಗಬೇಕು, ಉದ್ಯೋಗ ಪಡೆಯ ಬೇಕು ಮತ್ತು ಸಮಾಜದಲ್ಲಿ ನೀವೆಲ್ಲ ಉನ್ನತ ಮಟ್ಟಕ್ಕೆ ಸಾಗಬೇಕು ಅಂದರೆ ಜೆಡಿಎಸ್ ಪಕ್ಷದಿಂದ ಮಾತ್ರ ಸಾಧ್ಯಎಂಬುದನ್ನು ತಾವು ಅರಿಯಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಚಿಕ್ಕಿ ರಪ್ಪ, ಮಾಜಿ ತಾಲೂಕು ಪಂಚಾಯತಿ ಸದಸ್ಯ ಸಿದ್ದಗಂಗಮ್ಮ, ಮಾಜಿ ಎಪಿಎಂಸಿ ಸದಸ್ಯ ಕಳ್ಳಿಪಾಳ್ಯ ಲೋಕೇಶ್, ಮುಖಂಡರಾದ ಅಲಿಂ ಸಾಬ್, ಸಲೀಂ ಪಾಷಾ, ಇಲಾಯತ್ ಹುಸೇನ್, ಅಕ್ರಮ್, ಬೆಹಜಾನ್, ಸುರೇಶ್ ಗೌಡ, ಶಿವಲಿಂಗೇಗೌಡ, ವಿಜಯ್ ಕುಮಾರ್, ತೊಪಿಕ್ ಅಹಮದ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ