ಗಣೇಶೋತ್ಸವದಲ್ಲಿನ ಪಾವಿತ್ರ್ಯತೆಯನ್ನು ಕಾಪಾಡುವ ಬಗ್ಗೆ ಮನವಿ

ತುಮಕೂರು

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಡಿವೈಎಸ್ಪಿ ಶ್ರೀ ನಾಗರಾಜ್ ಕೆ.ಎಸ್ ಅವರಿಗೆ. ಗಣೇಶೋತ್ಸವದಲ್ಲಿನ ಪಾವಿತ್ರ್ಯತೆಯನ್ನು ಕಾಪಾಡುವ ಬಗ್ಗೆ ಮನವಿಯನ್ನು ನೀಡಲಾಯಿತು. ಗಣೇಶೋತ್ಸವದ ಸಂದರ್ಭದಲ್ಲಿ ಹಲವಾರು. ತಪ್ಪುಗಳು ನಡೆಯುತ್ತಿದ್ದು ಅಲ್ಲಿನ ಪವಿತ್ರ್ಯ ಹಾಗೂ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಕೆಳಗಿನ ಕಾನೂನುಬದ್ಧ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹಿಂದೂ ಜನಜಾಗೃತಿ ಸಮಿತಿಯು ವಿನಂತಿಸಿತು. ಜಬರ್ದಸ್ಥಿ ಚಂದವಸೂಲುಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದು . ಸರ್ವೋಚ್ಚ ನ್ಯಾಯಾಲಯದ ಆಜ್ಞೆಯಂತೆ ರಾತ್ರಿ 10 ಗಂಟೆ ನಂತರ ಧ್ವನಿವರ್ಧಕಗಳ ಉಪಯೋಗವನ್ನು ತಡೆಯುವುದು.

 ಉತ್ಸವದ ಸಂದರ್ಭದಲ್ಲಿ ಪ್ರದರ್ಶಿಸುವ
                 ಅಸಯ್ಯ ಕಾರ್ಯಕ್ರಮಗಳನ್ನು ತಡೆಯುವುದು ಉದಾಹರಣೆಗೆ ನಾಟಕ ನೃತ್ಯ  ಉತ್ಸವದ ಆಸುಪಾಸಿನಲ್ಲಿ ನಡೆಯುವ ಧ್ವನಿ ಪ್ರದೂಷಣೆಯನ್ನು ಸಮಾಜದ ಹಿತದೃಷ್ಟಿಯಿಂದ ತಡೆಯುವುದು .ಮೆರವಣಿಗೆಯ ಸಂದರ್ಭದಲ್ಲಿ ಹುಡುಗರು ಹುಡುಗಿಯರ ಜೊತೆ ನರ್ತಿಸುವುದು , ಡಿಜೆ ಉಪಯೋಗಿಸುವುದು . ಮಾದಕ ದ್ರವ್ಯವನ್ನು ಸೇವಿಸಿ ಸಮಾಜದ ಜನತೆಯನ್ನು ಪೀಡಿಸುವುದು ಮತ್ತು ಸಮಯ ಮೀರಿ ಮೆರವಣಿಗೆಯನ್ನು ಮಾಡುವುದು ಮುಂತಾದ ಅಹಿತಕರ ಘಟನೆಗಳನ್ನು ತಡೆಯಬೇಕು.ಈ ಸಂದರ್ಭದಲ್ಲಿ ಮನವಿಯನ್ನು ಸ್ವೀಕರಿಸಿದ ಮಾನ್ಯ ಡಿವೈಎಸ್ಪಿ ಶ್ರೀ ನಾಗರಾಜ್ ರವರು ದಿನಾಂಕ :11.09.2018 ರ ದಿನ ಬೆಳಗ್ಗೆ 10 ಗಂಟೆಗೆ ಚಿಲುಮೆ ಸಭಾಂಗಣ ದಲ್ಲಿ ಸಭೆಯನ್ನುಭ ನೆಡೆಸಲು ನಿರ್ಧರಿಸಿದರು. ಸಾರ್ವಜನಿಕ ಗಣೇಶ ಉತ್ಸವ ಮಂಡಳಿಗಳ ಸಭೆಯನ್ನು ಕರೆಯಲು ಸೂಚನೆ ನೀಡಿದ್ದು. ಸಾರ್ವಜನಿಕ ಉತ್ಸವ ಹೇಗಿರಬೇಕು , ಎಂಬುದರ ಬಗ್ಗೆ ವಿಚಾರಗಳನ್ನು ತಿಳಿಸಿರಿ ಎಂದು ಹೇಳಿದರು

Recent Articles

spot_img

Related Stories

Share via
Copy link