ಕಾಂಗ್ರೇಸ್ ಹಾಗೂ ಜೆ.ಡಿ.ಎಸ್. ಪಕ್ಷಗಳ ಕಾರ್ಯಕರ್ತರ ಸಭೆ

ಚಿಕ್ಕನಾಯಕನಹಳ್ಳಿ

     ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ, ಜಿಲ್ಲೆಯ ಪ್ರತಿ ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಜವಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ ಎಂದು ಜೆ.ಡಿ.ಎಸ್. ವರಿಷ್ಟ ಹೆಚ್.ಡಿ, ದೇವೇಗೌಡ ಹೇಳಿದರು.

      ಪಟ್ಟಣದ ಬಳಿ ಇರುವ ಜಿ.ಎಂ.ಆರ್ ಕಲ್ಯಾಣ ಮಂಟಪದಲ್ಲಿ ನಡೆದ ಕಾಂಗ್ರೇಸ್ ಹಾಗೂ ಜೆ.ಡಿ.ಎಸ್. ಪಕ್ಷಗಳ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಇಂದಿರಾಗಾಂಧಿ ಹಾಗೂ ವಾಜಪೇಯಿಯವರ ಕಾಲದಲ್ಲೂ ಯುದ್ದಗಳಾಗಿವೆ. ಆಗ ರಾಜಕೀಯ ಇರಲಿಲ್ಲ, ಪ್ರಧಾನಮಂತ್ರಿ ನರೇಂದ್ರಮೋದಿಯವರು ಪುಲ್ವಾಮದಾಳಿಯನ್ನು ರಾಜಕೀಯಕ್ಕೆ ಉಪಯೋಗಿಸಿಕೊಳ್ಳಬಾರದು ಎಂಬ ಕನಿಷ್ಟ ಪ್ರಮಾಣದ ಜ್ಞಾನವಿರಬೇಕಾಗಿತ್ತು.

        ನಾನು ಪ್ರಧಾನಮಂತ್ರಿಯಾದಾಗ 10 ತಿಂಗಳಲ್ಲಿ ಒಂದು ಕೋಮುಗಲಭೆಯಾಗಲಿ ಯಾವ ರೈತರು ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ ಎಂದ ಅವರು ಮೋದಿಯವರನ್ನು ಮಣಿಸಲು ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಪ್ರಮಾಣ ವಚನ ತೆಗೆದುಕೊಂಡ ನಂತರ 6 ರಾಜ್ಯಗಳ ಮುಖ್ಯಮಂತ್ರಿಗಳು ಸೇರಿ ಮೋದಿಯವರನ್ನು ಮಣಿಸಲು ಘಟಬಂಧನ್ ರಚಿಸಿಕೊಳ್ಳಲಾಗಿದೆ ಎಂದರು.

       ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ 1994-95ರಲ್ಲಿ ನಾನು ರಾಜಕೀಯಕ್ಕೆ ಬಂದಿರಲಿಲ್ಲ. ದೇವೇಗೌಡರು ಜಾತಿ ರಾಜಕಾರಣ ಮಾಡುತ್ತಾರೆ ಎಂದು ಆಪಾದಿಸುತ್ತಾರೆ, ಆದರೆ ಹೆಚ್.ಡಿ ದೇವೇಗೌಡರು ಮುಖ್ಯಮಂತ್ರಿಯಾದಾಗ ಕುರುಬ ಸಮಾಜದ ಭಾಸ್ಕರಪ್ಪ, ಚಿತ್ರದುರ್ಗಕ್ಕೆ ಯಾದವ ಸಮಾಜದ ಕೋದಂಡರಾಮಯ್ಯ ಹಾಗೂ ಚಿಕ್ಕಬಳ್ಳಾಪುರಕ್ಕೆ ಈಡೀಗ ಸಮಾಜದ ಜಾಲಪ್ಪನವರನ್ನು ಲೋಕಸಭೆಗೆ ನಿಲ್ಲಿಸಿ ಗೆಲ್ಲಿಸಿದ್ದರೆ ಆದರೂ ದೇವೇಗೌಡರನ್ನು ಜಾತಿವಾದಿಯೆಂದು ಬಿಂಬಿಸುತ್ತಿದ್ದಾರೆ.

       ಇದು ಸರಿಯಲ್ಲ ಚಿ.ನಾ.ಹಳ್ಳಿಗೆ ವಿಧಾನಸಭಾ ಕ್ಷೇತ್ರಕ್ಕೆ ಸಂತೋಷ್ ಜಯಚಂದ್ರ ಬರದೇ ಹೋಗಿದ್ದರೆ ಸಿ.ಬಿ.ಸುರೇಶ್‍ಬಾಬು ಗೆಲ್ಲುತ್ತಿದ್ದರು, ವಿಧಾನಸಭೆಯಲ್ಲಿ ನೀರಾವರಿಯ ಬಗ್ಗೆ ಚಕಾರವೆತ್ತಿದ ಶಾಸಕರು ಈಗ ಹೇಮಾವತಿ ನೀರಿನ ಬಗ್ಗೆ ಮಾತನಾಡುತ್ತಾರೆ ಎಂದ ಅವರು, ಶಿರಾದಿಂದ ಬರುವಾಗ ತೆಂಗಿನತೋಟ, ಅಡಿಕೆ, ಹುಣಸೇಮರ, ದಾಳಿಂಬೆ ಗಿಡಗಳು, ಒಣಗಿ ಹೋಗಿದ್ದನ್ನು ಕಂಡರೆ ಕಣ್ಣಿರು ಬರುತ್ತಿತ್ತು. ಇದನ್ನು ನೋಡಿದಾಗ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ತೀರ್ಮಾನ ತೆಗೆದುಕೊಂಡಿದ್ದೇವೆ ಎಂದರು.

         ನೀರಾವರಿ ಯೋಜನೆಗೆ 17ಸಾವಿರ ಕೋಟಿ ಬಜೆಟ್‍ನಲ್ಲಿ ಹಂಚಿಕೆ ಮಾಡಿದ್ದೇವೆ ನಾವು ಬದುಕಿರುವುದು ರೈತರಿಗೋಸ್ಕರ ತಮಿಳುನಾಡು ರೈತರು 3 ತಿಂಗಳು ಸಂಸತ್‍ಭವನದ ಮುಂದೆ ಧರಣಿ ಮಾಡಿದರೂ ಕ್ಯಾರೇ ಅನ್ನದೆ ಪ್ರಧಾನಂತ್ರಿ ರೈತರ ಪರವೋ ಅಥವಾ ಶ್ರೀಮಂತರ ಪರವೋ ಎಂದು ಪ್ರಶ್ನಿಸಿದ ಅವರು ಕಿಸನ್ ಸನ್ಮಾನ್ ಯೋಜನೆಯಡಿ ಪ್ರತಿ ರೈತರಿಗೆ 6000ಸಾವಿರ ನೀಡುತ್ತೇವೆ ಎಂದು ಹೇಳಿದ ಪ್ರಧಾನಮಂತ್ರಿಗಳು ಕೇವಲ 6 ಜನ ರೈತರಿಗೆ ಮಾತ್ರ ಹಣ ಬಂದಿದೆ ಎಂದ ಅವರು ಈವರೆಗೆ ರಾಜ್ಯದ ರೈತರ ಸಾಲಮನ್ನಾಗೆ 24 ಸಾವಿರ ಕೋಟಿ ಹಣ ನೀಡಿದ್ದೇವೆ ಎಂದ ಅವರು, ರೈತರು ಬೆಳೆದ ಬೆಲೆ ಕುಸಿದಾಗ ರೈತರ ಅನುಕೂಲಕ್ಕೆ ಗೋಡೋನ್ ನಿರ್ಮಾಣ ಮತ್ತು ಸಾಗಾಣಿಕಾ ವೆಚ್ಚವನ್ನು ಸರ್ಕಾರ ಭರಿಸಲಿದೆ ಗರ್ಭೀಣಿ ತಾಯಂದಿರಿಗೆ 12000 ಸಾವಿರದಿಂದ 24 ಸಾವಿರಕ್ಕೆ ಮುಂದಿನ ವರ್ಷದಿಂದ ನೀಡಲಿದ್ದೇವೆ ತುಮಕೂರು ವಸಂತ ನರಸಾಪುರ ಕೈಗಾರಿಕಾ ವಸತಿಗೆ 50 ಸಾವಿರ ಕೋಟಿ ನೀಡಲು ತಿರ್ಮಾನಿಸಲಾಗಿದೆ ಎಂದರು.

         ಉಪಮುಖ್ಯಮಂತ್ರಿ ಡಾ||ಜಿ.ಪರಮೇಶ್ವರ್ ಮಾತನಾಡಿ ಕೋಮುವಾದಿ ಶಕ್ತಿಗಳನ್ನು ದೂರವಿಡಲು ಕಾಂಗ್ರೇಸ್ ಹಾಗೂ ಜೆ.ಡಿ.ಎಸ್ ಪಕ್ಷಗಳು ರಾಜ್ಯದಲ್ಲಿ ಹೊಂದಾಣಿಕೆ ಮಾಡಿಕೊಂಡು ತುಮಕೂರು ಲೋಕಸಭಾ ಚುನಾವಣೆಯಲ್ಲಿ ಹೆಚ್.ಡಿ.ದೇವೇಗೌಡರಿಗೆ ಬಿಟ್ಟು ಕೊಡಲಾಗಿದೆ. ಪ್ರಧಾನಮಂತ್ರಿ ಒಬ್ಬ ದೊಡ್ಡ ಸುಳ್ಳುಗಾರ 2014ರಲ್ಲಿ ಚುನಾವಣೆಯಲ್ಲಿ ಪ್ರತಿ ವರ್ಷ 2ಕೋಟಿ ಉದ್ಯೋಗ ನೀಡುತ್ತೇವೆ ಎಂದು ಭರವಸೆ ನೀಡಿದ್ದರು ಇದುವರೆಗೂ ಭರವಸೆ ಈಡೇರಿಲ್ಲ 5 ವರ್ಷಗಳಲ್ಲಿ 10 ಕೋಟಿ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಗಬೇಕಾಗಿತ್ತು ಎಂದ ಅವರು, ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ 2 ರಿಂದ 3 ಲಕ್ಷ ರೂ ಪರಿಹಾರ ನೀಡಲಾಗಿದೆ. ರಾಜ್ಯದಲ್ಲಿ ನೀರಾವರಿ ಯೋಜನೆಗಳಿಗೆ ಪ್ರತಿ ವರ್ಷ 10 ಸಾವಿರ ಕೋಟಿ ನೀಡಿದ್ದೇವೆ 5 ವರ್ಷಗಳ 62 ಸಾವಿರ ಕೋಟಿ ಹಣ ಖರ್ಚು ಮಾಡಿದ್ದೇವೆ ಎಂದರು.

         ಆದ್ದರಿಂದ ಜೆ.ಡಿ.ಎಸ್ ಹಾಗೂ ಕಾಂಗ್ರೇಸ್ ಕಾರ್ಯಕರ್ತರು ಯಾವುದೇ ಭಿನ್ನಾಭಿಪ್ರಾಯ ಮರೆತು ಒಂದಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಗೆಲ್ಲಿಸಿಕೊಂಡು ಬರುವ ಜವಬ್ದಾರಿ ರಾಹುಲ್‍ಗಾಂಧಿಯವರು ನನಗೆ ಜವಬ್ದಾರಿ ವಹಿಸಿದ್ದಾರೆ ಎಂದರು.
ಮಾಜಿ ಶಾಸಕ ಸಿ.ಬಿ.ಸುರೇಶ್‍ಬಾಬು ಮಾತನಾಡಿ ಏಪ್ರೀಲ್ 10 ರಂದು ಚಿ.ನಾ.ಹಳ್ಳಿಗೆ ಸಿದ್ದರಾಮಯ್ಯ ಹಾಗೂ ಹೆಚ್.ಡಿ.ದೇವೇಗೌಡರು ಚುನಾವಣಾ ಭಾಷಣಾ ಮಾಡಲಿದ್ದಾರೆ ಎಂದರು.

         ಕಾರ್ಯಕ್ರಮದಲ್ಲಿ ಸಣ್ಣಕೈಗಾರಿಕಾ ಸಚಿವ ಶ್ರೀನಿವಾಸ್, ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾಜಿ ಶಾಸಕರಾದ ಸಿ.ಬಿ.ಸುರೇಶ್‍ಬಾಬು, ಎಂ.ಟಿ ಕೃಷ್ಣಪ್ಪ, ಷಡಾಕ್ಷರಿ, ರಫೀಕ್ ಅಹಮದ್, ವಿಧಾನಪರಿಷತ್ ಸದಸ್ಯರಾದ ರಮೇಶ್‍ಬಾಬು, ಬೆಮಲ್ ಕಾಂತರಾಜು, ಎಂ.ಡಿ.ಲಕ್ಷ್ಮೀನಾರಾಯಣ್, ಚೌಳರೆಡ್ಡಿತೂಪುವಲ್ಲಿ, ಜಿ.ಪಂ ಸದಸ್ಯ ನಾರಾಯಣ್, ರಾಮಚಂದ್ರಯ್ಯ, ಜಿ.ಪಂ ಅಧ್ಯಕ್ಷೆ ಲತಾರವಿಕುಮಾರ್, ಬಿ.ಲಕ್ಕಪ್ಪ, ಸಂತೋಷ್ ಜಯಚಂದ್ರ, ತಾ.ಪಂ ಅಧ್ಯಕ್ಷೆ ಚೇತನಾಗಂಗಾಧರ್, ಜಿ.ಪಂ ಸದಸ್ಯರಾದ ಕಲ್ಲೇಶ್ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link