ಬೃಹತ್ ನಕಲಿ ಔಷಧ ಜಾಲ ಪತ್ತೆ : ಕಳಪೆ ಔಷಧಿಗೆ ನಕಲಿ ಲೇಬಲ್ : 800 ಖಾತೆಗಳಲ್ಲಿ – 87 ಕೋಟಿ ಅಕ್ರಮ ವಹಿವಾಟು

 

ಬಿಡದಿ ಬಳಿಯ ಹೆಜ್ಜಾಲದ ಫಾರ್ಮ್ಹೌಸ್ ಮೇಲೆ ಎಫ್‌ಡಿಎ ಮಿಂಚಿನ ದಾಳಿ | ತೆಲಂಗಾಣ, ಹಿಮಾಚಲ ಪ್ರದೇಶದಿಂದ ತಂದು ಮರುಲೇಬಲಿಂಗ್

ಬೆಂಗಳೂರು/ಬಿಡದಿ : ರಾಜಧಾನಿಯ ಹೊರವಲಯದಲ್ಲಿ ಸಾರ್ವಜನಿಕರ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿದ್ದ, ದೇಶವ್ಯಾಪಿ ಹಬ್ಬಿರುವ ದೈತ್ಯ ನಕಲಿ ಔಷಧ ತಯಾರಿಕೆ ಹಾಗೂ ಮರುಲೇಬಲಿಂಗ್ ಜಾಲವೊಂದನ್ನು ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ (ಈಆಂ) ಜಾರಿ ವಿಭಾಗ ಯಶಸ್ವಿಯಾಗಿ ಭೇದಿಸಿದೆ. ಬಿಡದಿ ಟೋಲ್ ಗೇಟ್ ಸಮೀಪದ ಹೆಜ್ಜಾಲದ ಕುರುಬರಕರಣಹಳ್ಳಿಯಲ್ಲಿರುವ ಫಾರ್ಮ್ಹೌಸ್ ಒಂದರ ಮೇಲೆ ಹಠಾತ್ ದಾಳಿ ನಡೆಸಿದ ಅಧಿಕಾರಿಗಳು, ಬರೋಬ್ಬರಿ ೬ ಕೋಟಿ ರೂಪಾಯಿ ಮೌಲ್ಯದ ನಕಲಿ ಔಷಧಗಳು, ಅತ್ಯಾಧುನಿಕ ಮರುಪ್ಯಾಕಿಂಗ್ ಯಂತ್ರಗಳು ಹಾಗೂ ಜಾಗತಿಕ ಬಹುರಾಷ್ಟಿçÃಯ ಕಂಪನಿಗಳ ನಕಲಿ ಲೇಬಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಹತ್ತು ಪಟ್ಟು ಹೆಚ್ಚಿನ ಬೆಲೆಗೆ ನಕಲಿ ಔಷಧ ಮಾರಾಟ : ಯಾವುದೇ ಅಧಿಕೃತ ತಯಾರಿಕಾ ಅಥವಾ ಪ್ಯಾಕಿಂಗ್ ಪರವಾನಗಿ ಇಲ್ಲದೆ ಈ ರಹಸ್ಯ ಘಟಕ ಕಾರ್ಯಾಚರಿಸುತ್ತಿತ್ತು. ಈ ಜಾಲದ ಕಾರ್ಯಾಚರಣೆಯ ರೀತಿ ತನಿಖಾಧಿಕಾರಿಗಳನ್ನೇ ಬೆಚ್ಚಿಬೀಳಿಸಿದೆ. ಖದೀಮರು ಹಿಮಾಚಲ ಪ್ರದೇಶ ಹಾಗೂ ತೆಲಂಗಾಣದಲ್ಲಿರುವ ನಕಲಿ ಉತ್ಪಾದನಾ ಕಾರ್ಖಾನೆಗಳಿಂದ ಅತ್ಯಂತ ಕಳಪೆ ಮಟ್ಟದ ಹಾಗೂ ಅವಧಿ ಮುಗಿದ ಔಷಧಗಳನ್ನು ಕೇವಲ ೬೦೦ ರಿಂದ ೭೦೦ ರೂಪಾಯಿಗಳಿಗೆ ತರಿಸಿಕೊಳ್ಳುತ್ತಿದ್ದರು. ತದನಂತರ ‘ಸ್ಟಿಕ್ಕರ್ ರಿಮೂವರ್ ಸ್ಪೆçÃ’ ಬಳಸಿ ಅವುಗಳ ಮೇಲಿದ್ದ ಮೂಲ ಲೇಬಲ್‌ಗಳನ್ನು ಅತ್ಯಂತ ಎಚ್ಚರಿಕೆಯಿಂದ ತೆರವುಗೊಳಿಸುತ್ತಿದ್ದರು. ಆ ಜಾಗದಲ್ಲಿ ಜಾಗತಿಕ ದೈತ್ಯ ಸಂಸ್ಥೆಯಾದ ‘ಫೈಜರ್’ ಸೇರಿದಂತೆ ಪ್ರಮುಖ ಬಹುರಾಷ್ಟಿçÃಯ ಕಂಪನಿಗಳ ನಕಲಿ ಲೇಬಲ್ ಹಾಗೂ ಹೊಸ ಮುಕ್ತಾಯ ದಿನಾಂಕವನ್ನು (ಎಕ್ಸ್ಪೈರಿ ಡೇಟ್) ಅಂಟಿಸುತ್ತಿದ್ದರು. ಹೀಗೆ ಮರುಪ್ಯಾಕ್ ಮಾಡಿದ ಔಷಧಗಳನ್ನು ರಾಜ್ಯದ ವಿವಿಧ ಆಸ್ಪತ್ರೆಗಳು ಮತ್ತು ಚಿಲ್ಲರೆ ಔಷಧ ಅಂಗಡಿಗಳಿಗೆ ೬,೦೦೦ ದಿಂದ ೭,೦೦೦ ರೂಪಾಯಿಗಳ ದರದಲ್ಲಿ, ಅಂದರೆ ಬರೋಬ್ಬರಿ ಹತ್ತು ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂಬ ಆಘಾತಕಾರಿ ಮಾಹಿತಿ ತನಿಖೆಯಲ್ಲಿ ಸ್ಪಷ್ಟವಾಗಿದೆ.

೮೦೦ ಖಾತೆಗಳಿಂದ – ೮೭ ಕೋಟಿ ಅಕ್ರಮ ಹಣ ವರ್ಗಾವಣೆ : ತನಿಖೆಯನ್ನು ತೀವ್ರಗೊಳಿಸಿದ ಅಧಿಕಾರಿಗಳಿಗೆ ಈ ಅಕ್ರಮ ದಂಧೆಯ ಆರ್ಥಿಕ ವಹಿವಾಟಿನ ಆಳ-ಅಗಲ ಬಯಲಾಗಿದೆ. ಕೇವಲ ಔಷಧ ಮಾರಾಟ ಮಾತ್ರವಲ್ಲದೆ, ಹೈದರಾಬಾದ್ ಮೂಲದ ವಿವಿಧ ಬ್ಯಾಂಕ್‌ಗಳ ಸುಮಾರು ೮೦೦ ಶಂಕಿತ ಖಾತೆಗಳಿಗೆ ಬರೋಬ್ಬರಿ ೮೭ ಕೋಟಿ ರೂಪಾಯಿಗಳಷ್ಟು ಅಕ್ರಮ ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿದೆ. ಈ ಬೃಹತ್ ಆರ್ಥಿಕ ವಹಿವಾಟಿನ ಕುರಿತು ಪೊಲೀಸರು ಹಾಗೂ ತನಿಖಾ ಸಂಸ್ಥೆಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ದಾಳಿ ನಡೆದ ಫಾರ್ಮ್ಹೌಸ್ ಸಿದ್ದಯ್ಯ ಎಂಬುವರಿಗೆ ಸೇರಿದ್ದಾಗಿದ್ದು, ಇದನ್ನು ದುಬೈ ನಿವಾಸಿ ಪ್ರಶಾಂತ್ ಎಂಬಾತ ಬಾಡಿಗೆಗೆ ಪಡೆದುಕೊಂಡಿದ್ದ. ಪ್ರಕರಣಕ್ಕೆ ಸಂಬAಧಿಸಿದAತೆ ಪ್ರಶಾಂತ್‌ನ ಸಂಬAಧಿ ತೇಜಸ್ ಹಾಗೂ ಸ್ಥಳೀಯವಾಗಿ ಕೆಲಸ ಮಾಡುತ್ತಿದ್ದ ಪ್ರಭುದೇವ್ ಗೌಡ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಇಡೀ ಜಾಲದ ಪ್ರಮುಖ ರೂವಾರಿ ಎನ್ನಲಾದ ಚೇತನ್‌ಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದ್ದು, ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ರಾಮನಗರ ಎಸ್.ಪಿ. ನೇತೃತ್ವದಲ್ಲಿ ಜಂಟಿ ತನಿಖೆ ಮುಂದುವರಿದಿದೆ.

ದಾಳಿಯ ವೇಳೆ ಜಪ್ತಿಯಾದ ವಸ್ತುಗಳು ಹಾಗೂ ಇಲಾಖೆಯ ಮುಂದಿನ ಕಠಿಣ ಕ್ರಮಗಳು
ದಾಳಿಯ ವೇಳೆ ಅಧಿಕಾರಿಗಳು ಅಪಾರ ಪ್ರಮಾಣದ ನಕಲಿ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಪ್ರಮುಖವಾಗಿ ೫,೬೪೦ ವೈಯಲ್‌ಗಳ ‘ಸೆಫಿಯಾವಿಜೆಂಟ್ ೨.೫’ ಹಾಗೂ ೧,೫೩೧ ವೈಯಲ್‌ಗಳ ‘ಹಿಜ್ಲಾಮ್’ ಚುಚ್ಚುಮದ್ದುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಜೊತೆಗೆ ೩೦ಕ್ಕೂ ಹೆಚ್ಚು ದೊಡ್ಡ ಬಾಕ್ಸ್ಗಳಷ್ಟು ಅವಧಿ ಮುಗಿದ ಔಷಧಗಳು ಪತ್ತೆಯಾಗಿವೆ. ನಕಲಿ ಜಾಲದಲ್ಲಿ ಬಳಸುತ್ತಿದ್ದ ನೋಚಿಂಗ್ ಮೆಷಿನ್, ಸ್ಟಿಕ್ಕರ್ ರಿಮೂವರ್ ಸ್ಪೆ, ಚುಚ್ಚುಮದ್ದು ಭರ್ತಿ ಮಾಡುವ ಯಂತ್ರಗಳು, ‘ಕೌಶಿ…’ ಹೆಸರಿನ ನಕಲಿ ಇನ್‌ವಾಯ್ಸ್ಗಳು, ಪ್ಯಾಕಿಂಗ್ ವಸ್ತುಗಳು ಹಾಗೂ ಪ್ರಮುಖ ಬಹುರಾಷ್ಟಿಯ ಕಂಪನಿಗಳ ನಕಲಿ ಲೇಬಲ್‌ಗಳನ್ನು ಅಧಿಕಾರಿಗಳು ಸ್ವಾಧೀನಪಡಿಸಿಕೊಂಡಿದ್ದಾರೆ.

ಮುAದಿನ ಕ್ರಮವಾಗಿ, ವಶಪಡಿಸಿಕೊಂಡ ಔಷಧಗಳ ಮಾದರಿಗಳನ್ನು ರಾಸಾಯನಿಕ ತಪಾಸಣೆ ಮತ್ತು ಪ್ರತ್ಯೇಕ ಲ್ಯಾಬ್ ಪರೀಕ್ಷೆಗೆ ಕಳುಹಿಸಲಾಗಿದೆ. ಈ ನಕಲಿ ಬ್ಯಾಚ್ ಸಂಖ್ಯೆಯ ಔಷಧಗಳು ಮಾರುಕಟ್ಟೆಯಲ್ಲಿ ಮತ್ತೆ ಮಾರಾಟವಾಗದಂತೆ ಎಫ್‌ಡಿಎ ಪೋರ್ಟಲ್‌ನಲ್ಲಿ ತಕ್ಷಣವೇ ಬ್ಲಾಕ್ ಮಾಡಲಾಗಿದೆ. ಈ ಜಾಲದ ಮೂಲ ಬೇರುಗಳನ್ನು ಕಿತ್ತೊಗೆಯಲು ತೆಲಂಗಾಣ, ಹಿಮಾಚಲ ಪ್ರದೇಶ ಸರ್ಕಾರಗಳು ಹಾಗೂ ಕೇಂದ್ರ ಸರ್ಕಾರಕ್ಕೂ ಮಾಹಿತಿ ನೀಡಿ ತನಿಖೆಗೆ ಸಹಕರಿಸಲು ಕೋರಲಾಗಿದೆ. ರಾಜ್ಯಾದ್ಯಂತ ಔಷಧ ಮಳಿಗೆಗಳು ಹಾಗೂ ಗೋದಾಮುಗಳ ಮೇಲೆ ಹದ್ದಿನ ಕಣ್ಣಿಡಲು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ನಕಲಿ ಔಷಧಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಐಸಿಯುಗಳಿಗೂ ಪೂರೈಕೆ ಶಂಕೆ: ಎಸ್‌ಐಟಿ ತನಿಖೆಗೆ ಸರ್ಕಾರದ ನಿರ್ಧಾರ

ದಾಳಿಯ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಒಂದೇ ದಿನದಲ್ಲಿ ೬ ಕೋಟಿ ರೂಪಾಯಿ ಮೌಲ್ಯದ ನಕಲಿ ಔಷಧ ಸಿಕ್ಕಿದೆ ಎಂದರೆ, ಈಗಾಗಲೇ ಸಾರ್ವಜನಿಕರಿಗೆ ಎಷ್ಟು ಕೋಟಿ ಮೌಲ್ಯದ ನಕಲಿ ಔಷಧ ತಲುಪಿರಬಹುದು ಎಂಬ ಆತಂಕ ಕಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ. ಈ ನಕಲಿ ಔಷಧಗಳನ್ನು ಪ್ರಮುಖ ಆಸ್ಪತ್ರೆಗಳ ತುರ್ತು ನಿಗಾ ಘಟಕಗಳಿಗೂ ಸರಬರಾಜು ಮಾಡಿರುವ ಬಲವಾದ ಶಂಕೆಯಿದೆ. ಕಳೆದ ಎರಡು ವರ್ಷಗಳಲ್ಲಿ ಈ ಔಷಧಗಳನ್ನು ಯಾವ್ಯಾವ ಆಸ್ಪತ್ರೆಗಳಲ್ಲಿ ಬಳಸಲಾಗಿದೆ ಮತ್ತು ಇದರಿಂದ ರೋಗಿಗಳಿಗೆ ತೊಂದರೆ ಅಥವಾ ಸಾವು ಸಂಭವಿಸಿದೆಯೇ ಎಂಬುದರ ಕುರಿತು ವಿಸ್ತತ ತನಿಖೆ ನಡೆಯಲಿದೆ. ಈ ಪ್ರಕರಣದ ಗಂಭೀರತೆಯನ್ನು ಅರಿತು, ಸಂಪೂರ್ಣ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸುವ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಚರ್ಚಿಸುವುದಾಗಿ ಸಚಿವರು ಸ್ಪಷ್ಟಪಡಿಸಿದ್ದಾರೆ.

ಕೇಂದ್ರಕ್ಕೂ ಮಾಹಿತಿ ನೀಡುವೆವು : ಸಚಿವ

ಪ್ರಕರಣದ ಸಂಪೂರ್ಣ ಮಾಹಿತಿಯನ್ನು ರಾಜ್ಯ ವಿಧಾನಮಂಡಲದ ಸದನದಲ್ಲಿ ಚರ್ಚಿಸಲಾಗುವುದು ಹಾಗೂ ಅಗತ್ಯ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೂ ನೀಡಲಾಗುವುದು. ನಕಲಿ ಔಷಧಿಗಳು ಯಾವ್ಯಾವ ಆಸ್ಪತ್ರೆಗಳು, ಮೆಡಿಕಲ್ ಸ್ಟೋರ್‌ಗಳು ಹಾಗೂ ಇತರ ಸಂಸ್ಥೆಗಳಿಗೆ ಸರಬರಾಜಾಗಿವೆ? ಯಾರೆಲ್ಲ ಖರೀದಿಸಿದ್ದಾರೆ ಹಾಗೂ ಈ ಔಷಧಿಗಳನ್ನು ಯಾರಾದರೂ ಸೇವಿಸಿದ್ದಾರೆಯೇ ಎಂಬುದನ್ನು ತನಿಖೆ ಮೂಲಕ ಪತ್ತೆಹಚ್ಚಲಾಗುವುದು. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಈ ಔಷಧಿಗಳು ಎಲ್ಲಿ ಮಾರಾಟವಾಗಿವೆ, ಯಾವ ಆಸ್ಪತ್ರೆಗಳಿಗೆ ತಲುಪಿವೆ, ಯಾವೆಲ್ಲ ವ್ಯಕ್ತಿಗಳು ಅವುಗಳನ್ನು ಬಳಸಿದ್ದಾರೆ ಹಾಗೂ ಅವುಗಳ ಬಳಕೆಯಿಂದ ಯಾರಿಗಾದರೂ ಆರೋಗ್ಯದ ಮೇಲೆ ಹಾನಿಯಾಗಿದೆಯೇ ಎಂಬುದನ್ನೂ ಪರಿಶೀಲಿಸಲಾಗುವುದು ಎಂದು ಹೇಳಿದರು. ವಶಪಡಿಸಿಕೊಂಡ ಔಷಧಿಗಳ ಮಾದರಿಗಳನ್ನು ಸರ್ಕಾರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅವುಗಳ ರಾಸಾಯನಿಕ ಸಂಯೋಜನೆ, ಗುಣಮಟ್ಟ ಮತ್ತು ಶುದ್ಧತೆಯ ಕುರಿತು ಪರೀಕ್ಷೆ ನಡೆಯುತ್ತಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್,ಹೇಳಿದ್ದಾರೆ.

 

Recent Articles

spot_img

Related Stories

Share via
Copy link