ತುಮಕೂರು:
ಇತ್ತೀಚಿನ ಹೈಫೈ ಜೀವನ ಶೈಲಿ ಹಾಗು ಪಾತ್ರಕ್ಕೆ ತಕ್ಕ ದೇಹಾಡ್ಯತೆ ಪಡೆಯಲು ಸಿನಿಮಾ ಮಂದಿ ಅನೇಕ ಚಿಕಿತ್ಸೆ ಅಥವಾ ಶಸ್ತ್ರ ಚಿಕಿತ್ಸೆಗೆ ಒಳಗಾಗುವುದು ಸಾಮಾನ್ಯವೇ ಆದರೆ ಅದು ಕೆಲವರ ವಿಷಯದಲ್ಲಿ ವರವಾಗುವ ಬದಲಿಗೆ ಶಾಪವಾಗಿ ಪರಿಣಮಿಸಿ ಅವರ ಭವಿಷ್ಯವನ್ನೆ ಹಾಳು ಮಾಡಿದ್ದು ಇದೆ.
ಸಿನಿಮಾ ತಾರೆಯರು ತಮಗಿರುವ ಆರೋಗ್ಯ ಸಮಸ್ಯೆಗಳ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿ ದ್ದಾರೆ. ಕೆಲವೇ ದಿನಗಳ ಹಿಂದೆ ನಟಿ ಸಮಂತಾ ಮಯೋಸೈಟಿಸ್ ಎನ್ನುವ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದರು. ಇದೀಗ ನಟಿ ಅನುಷ್ಕಾ ಶೆಟ್ಟಿ ತಮಗಿರುವ ವಿಚಿತ್ರ ಸಮಸ್ಯೆಯ ಬಗ್ಗೆ ಹೇಳಿಕೊಂಡಿದ್ದಾರೆ.
‘ಸೈಜ್ ಜೀರೊ’ ಎಂಬ ತೆಲುಗಿನ ಚಿತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡ ನಟಿ ಸ್ವೀಟಿ ಶೆಟ್ಟಿ ಎಡವಟ್ಟು ಮಾಡಿಕೊಂಡಿದ್ದರು. ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡು ಮತ್ತೆ ತೂಕ ಇಳಿಸಿಕೊಳ್ಳಲು ನಾನಾ ಕರಸತ್ತು ನಡೆಸುವಂತಾಯಿತು. ಇದೇ ಕಾರಣಕ್ಕೆ ಇತ್ತೀಚಿನ ವರ್ಷಗಳಲ್ಲಿ ಅನುಷ್ಕಾ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಆಗಿತ್ತು. ಇದೀಗ ಅನುಷ್ಕಾ ತೂಕ ಇಳಿಸಿಕೊಂಡು ಮತ್ತೆ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಮೊದಲಿನ ಪಿಜಿಕ್ ಮಾತ್ರ ಮರಳಿ ಪಡೆಯಲು ಸಾಧ್ಯವಾಗಲಿಲ್ಲ.
ನಟಿ ಅನುಷ್ಕಾ ಶೆಟ್ಟಿಗೆ ಒಂದು ಭಯಾನಕವಾದ ಸಮಸ್ಯೆ ಇದೆ ಅದೇನೆಂದರೆ ಅವರಿಗೆ ನಗುವ ಸಮಸ್ಯೆ ಇದೆಯಂತೆ. ನಗು ಆರೋಗ್ಯಕ್ಕೆ ಒಳ್ಳೆಯದೇ ಅಲ್ಲವೇ ಇದರಲ್ಲಿ ಸಮಸ್ಯೆ ಎನು ಎಂದರೆ ಅಯ್ಯೋ ನಾನು ಒಮ್ಮೆ ನಗುವುದಕ್ಕೆ ಶುರು ಮಾಡಿದರೆ 15 ರಿಂದ 20 ನಿಮಿಷ ನಗುತ್ತಲೇ ಇರ್ತೀನಿ ಎಂದು ಸ್ವೀಟಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.
ಶೂಟಿಂಗ್ ಸೆಟ್‌ನಲ್ಲಿ ಜೋರಾಗಿ ನಗುವುದಕ್ಕೆ ಆರಂಭಿದರೆ ಎಲ್ಲರೂ ತಮ್ಮ ಕೆಲಸಗಳನ್ನು ನಿಲ್ಲಿಸಿ ನನ್ನನ್ನೇ ನೋಡುತ್ತಾ ನಿಂತುಬಿಡುತ್ತಾರೆ ಎಂದು ಆಕೆ ಹೇಳಿದ್ದಾರೆ. ಯಾವುದರರೂ ಫನ್ನಿ ಘಟನೆ ನೆನಪಿಸಿಕೊಂಡರೆ, ಯಾರಾದರೂ ಜೋಕ್ ಮಾಡಿದರೆ ಕಥೆ ಮುಗೀತು, ನಿರಂತರವಾಗಿ ನಗುತ್ತಲೇ ಇರ್ತೀನಿ ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ