ಯುಪಿಐ ವಹಿವಾಟಿಗೆ ಶುಲ್ಕ : ರಾಜಕೀಯ ಸಮರ

ಸಾಮಾನ್ಯ ಗ್ರಾಹಕರಿಗೆ ಯಾವುದೇ ಹೊರೆಯಿಲ್ಲ – ಕೇಂದ್ರ | ಅಮೆರಿಕದ ಒತ್ತಡಕ್ಕೆ ಮಣಿದ ಕೇಂದ್ರ – ಕಾಂಗ್ರೆಸ್ ಆರೋಪ 

ಬೆಂಗಳೂರು : ಎರಡು ಸಾವಿರ ರೂಪಾಯಿಗಿಂತ ಮೇಲ್ಪಟ್ಟ ವರ್ತಕರ ಯುಪಿಐ ವಹಿವಾಟುಗಳ ಮೇಲೆ ಶೇ. 0.4 ರಷ್ಟು ಶುಲ್ಕ (ಎಂಡಿಆರ್) ವಿಧಿಸುವ ಕೇಂದ್ರ ಸರ್ಕಾರದ ಹೊಸ ನಿರ್ಧಾರವು ದೇಶಾದ್ಯಂತ ಭಾರಿ ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡಿದೆ. ಸಾಮಾನ್ಯ ಗ್ರಾಹಕರಿಗೆ ಇದರಿಂದ ಯಾವುದೇ ಶುಲ್ಕ ಇರುವುದಿಲ್ಲ ಎಂದು ಸರ್ಕಾರ ಮತ್ತು ಬ್ಯಾಂಕಿAಗ್ ತಜ್ಞರು ಸ್ಪಷ್ಟಪಡಿಸಿದ್ದರೂ, ವಿರೋಧ ಪಕ್ಷ ಕಾಂಗ್ರೆಸ್ ಇದನ್ನು ಜನಸಾಮಾನ್ಯರ ಲೂಟಿ ಎಂದು ಬಣ್ಣಿಸಿದೆ. ಅತ್ತ ಬಿಜೆಪಿ, ಡಿಜಿಟಲ್ ಇಂಡಿಯಾದ ಯಶಸ್ಸನ್ನು ಸಹಿಸದ ಕಾಂಗ್ರೆಸ್ ಸುಳ್ಳು ಸುದ್ದಿ ಹರಡುತ್ತಿದೆ ಎಂದು ತೀಕ್ಷ÷್ಣವಾಗಿ ತಿರುಗೇಟು ನೀಡಿದೆ.

ಏನಿದು ಹೊಸ ನಿಯಮ? ಅಸಲಿ ಲೆಕ್ಕಾಚಾರ? : ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲಗಳಿಗೆ ತೆರೆ ಎಳೆಯುವ ನಿಟ್ಟಿನಲ್ಲಿ ತಾಂತ್ರಿಕ ವಿವರಗಳು ಹೊರಬಿದ್ದಿವೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಅಧಿಸೂಚನೆ ಪ್ರಕಾರ, ಅಕ್ಟೋಬರ್ 15 ರಿಂದ ಹೊಸ ನಿಯಮ ಜಾರಿಗೆ ಬರಲಿದೆ. ಶೇ. 0.4 ಎಂಡಿಆರ್ ಎಂದರೆ ಗ್ರಾಹಕರು ಡಿಜಿಟಲ್ ಪಾವತಿ ಮಾಡಿದಾಗ, ಆ ವಹಿವಾಟನ್ನು ನಿರ್ವಹಿಸಿದ್ದಕ್ಕಾಗಿ ಬ್ಯಾಂಕುಗಳು ಮತ್ತು ಪಾವತಿ ಸೇವಾ ಸಂಸ್ಥೆಗಳು ವ್ಯಾಪಾರಿಗಳಿಂದ ವಸೂಲಿ ಮಾಡುವ ಕಮಿಷನ್ ಆಗಿದೆ. ಕೇವಲ ರೂ. 2,000 ಕ್ಕಿಂತ ಹೆಚ್ಚಿನ ಮೌಲ್ಯದ ವ್ಯಾಪಾರಿ ವಹಿವಾಟುಗಳಿಗೆ ಮಾತ್ರ ಇದು ಅನ್ವಯಿಸುತ್ತದೆ. ಸಾಮಾನ್ಯ ಗ್ರಾಹಕರಿಗೆ ಹಾಗೂ ವ್ಯಕ್ತಿಯಿಂದ ವ್ಯಕ್ತಿಗೆ ಮಾಡುವ ಹಣ ವರ್ಗಾವಣೆಗೆ ಯಾವುದೇ ಶುಲ್ಕ ಇರುವುದಿಲ್ಲ.

ಕಾಂಗ್ರೆಸ್ ಆರೋಪ: ಅಮೆರಿಕನ್ ಕಂಪನಿಗಳಿಗೆ ಲಾಭ, ಭಾರತೀಯರಿಗೆ ನಷ್ಟ : ಕೇಂದ್ರದ ನಿರ್ಧಾರವನ್ನು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರವಾಗಿ ಖಂಡಿಸಿದ್ದಾರೆ. ಅಮೆರಿಕದ ಕ್ರೆಡಿಟ್/ಡೆಬಿಟ್ ಕಾರ್ಡ್ ಕಂಪನಿಗಳ ಒತ್ತಡಕ್ಕೆ ಮಣಿದು, ಉಚಿತ ಯುಪಿಐ ಭರವಸೆಯನ್ನು ಮುರಿದು ಹಿಂಬಾಗಿಲಿನಿAದ ಶುಲ್ಕ ವಿಧಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಯುಪಿಐ ಶುಲ್ಕದಿಂದ ಅಮೆರಿಕನ್ ಕಂಪನಿಗಳಿಗೆ ಲಾಭವಾಗಲಿದ್ದು, ಬಡ ಮತ್ತು ಮಧ್ಯಮ ವರ್ಗದ ಭಾರತೀಯರಿಗೆ ನಷ್ಟವಾಗಲಿದೆ ಎಂದರು. ಯುಪಿಐ ವ್ಯವಸ್ಥೆಯನ್ನು ಮೋದಿ ಸರ್ಕಾರ ಕಲೆಕ್ಷನ್ ಮಷಿನ್ ಆಗಿ ಪರಿವರ್ತಿಸಿದೆ. 2026ರ ಸೆ.14 ಅನ್ನು ‘ಡಿಜಿಟಲ್ ಪಲ್ಟಿ’ ಹಾಗೂ ‘ದ್ರೋಹದ ದಿನ’ವೆಂದು ಕರೆಯಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಯುಪಿಐ ಮೇಲೆ ತೆರಿಗೆ ವಿಧಿಸಿರುವುದು ಕೇವಲ ಕಾಂಗ್ರೆಸ್ ಪಕ್ಷದ ವಿಚಾರವಲ್ಲ, ಇದೊಂದು ರಾಷ್ಟಿçÃಯ ಸಮಸ್ಯೆ. ಜನಸಾಮಾನ್ಯರ ಹಿತ ಕಾಪಾಡಲು ಈ ನಿರ್ಧಾರದ ವಿರುದ್ಧ ಇಡೀ ದೇಶವೇ ಹೋರಾಟ ಮಾಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದ್ದಾರೆ.

ಬಿಜೆಪಿ ತಿರುಗೇಟು: ಕಾಂಗ್ರೆಸ್‌ನ ಎಲ್ಲಾ ಆರೋಪಗಳನ್ನು ಬಿಜೆಪಿ ಸಾರಾಸಗಟಾಗಿ ತಳ್ಳಿಹಾಕಿದೆ. ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ಮತ್ತೊಮ್ಮೆ ಸುಳ್ಳಿನ ಅಂಗಡಿ ತೆರೆದಿದೆ. ದೇಶದ ಶೇ. 96 ರಷ್ಟು ಯುಪಿಐ ವಹಿವಾಟುಗಳು ರೂ. 2,000 ದ ಒಳಗಿರುತ್ತವೆ. ಇವುಗಳಿಗೆ ಒಂದು ರೂಪಾಯಿ ಶುಲ್ಕವೂ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಡಿಜಿಟಲ್ ಇಂಡಿಯಾದ ಅಭೂತಪೂರ್ವ ಯಶಸ್ಸನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಕಾಂಗ್ರೆಸ್, ಉದ್ದೇಶಪೂರ್ವಕವಾಗಿ ಸಾರ್ವಜನಿಕರಲ್ಲಿ ಅನಗತ್ಯ ಭಯ ಮತ್ತು ಸುಳ್ಳು ಸುದ್ದಿ ಹರಡುತ್ತಿದೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಟೀಕಿಸಿದ್ದಾರೆ.

ಪ್ರಧಾನಿ ಬಂದಾಗ ಪೂರ್ಣ ಗೀತೆ ಹಾಡುತ್ತೇವೆ

ಯುಪಿಐ ವಿಚಾರದ ಜೊತೆಗೆ ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ಸುರ್ಜೇವಾಲಾ ಪ್ರತಿಕ್ರಿಯಿಸಿದರು. ಸಿದ್ದರಾಮಯ್ಯ, ಡಿ.ಕೆ. ಸಹೋದರರು, ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರ ಮೇಲಿನ ಇಡಿ ದಾಳಿಗಳು ರಾಜಕೀಯ ಪ್ರೇರಿತವಾಗಿವೆ. ಚುನಾವಣೆ ಸಮೀಪಿಸಿದಾಗ ಕೇಂದ್ರದ ತನಿಖಾ ಸಂಸ್ಥೆಗಳು ಚುನಾವಣಾ ಮಷಿನ್‌ನಂತೆ ಕೆಲಸ ಮಾಡುತ್ತವೆ ಎಂದು ದೂರಿದರು.

ವಂದೇ ಮಾತರಂ ಗೀತೆ ಕಡಿತಗೊಳಿಸಿದ ವಿವಾದಕ್ಕೆ ಸ್ಪಷ್ಟನೆ ನೀಡಿದ ಅವರು, ರಾಷ್ಟçಪತಿ, ರಾಜ್ಯಪಾಲರು ಅಥವಾ ಪ್ರಧಾನಿ ಬಂದಾಗ ಪೂರ್ಣ ಗೀತೆ ಹಾಡುತ್ತೇವೆ. ಕೇಂದ್ರದ ಮಾರ್ಗಸೂಚಿಗೆ ಬದ್ಧವಾಗಿಯೇ ಸರ್ಕಾರ ನಿರ್ಧಾರ ಮಾಡಿದ್ದು, ವಂದೇ ಮಾತರಂಗೆ ನಾವು ಸದಾ ಗೌರವ ನೀಡುತ್ತೇವೆ ಎಂದರು.

 

ಯುಪಿಐ ಮೇಲಿನ ತೆರಿಗೆ ವಿರುದ್ಧ ದೇಶವೇ ಹೋರಾಡಬೇಕು: ಸಿಎಂ

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಡಿ ಕೆ ಶಿವಕುಮಾರ್ ಅವರು ಯುಪಿಐ ವಹಿವಾಟಿನ ಮೇಲೆ ತೆರಿಗೆ ವಿಧಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಇಡೀ ದೇಶ ಹೋರಾಟ ನಡೆಸಬೇಕು. ಇದು ಕೇವಲ ಕಾಂಗ್ರೆಸ್ ಪಕ್ಷದ ವಿಚಾರವಲ್ಲ. ಇಡೀ ದೇಶದ ಸಮಸ್ಯೆಯಾಗಿದೆ. ಕಾಂಗ್ರೆಸ್ ಪಕ್ಷ ವಿರೋಧ ಪಕ್ಷವಾಗಿದ್ದು, ಜನಸಾಮಾನ್ಯರ ಹಿತ ಕಾಯಲು ಹೋರಾಟ ಮಾಡಲಿದೆ. ಹೀಗಾಗಿ ನಮ್ಮ ಪ್ರಧಾನ ಕಾರ್ಯದರ್ಶಿಗಳು ದೇಶದ ಜನರ ಪರವಾಗಿ ಮಾಧ್ಯಮಗೋಷ್ಠಿ ನಡೆಸಿ ದೇಶದ ಜನರಿಗೆ ಸಂದೇಶ ರವಾನಿಸಿದ್ದಾರೆ ಎಂದು ತಿಳಿಸಿದರು.

Recent Articles

spot_img

Related Stories

Share via
Copy link