ಈರುಳ್ಳಿ ಬೆಲೆ ಏರಿಕೆ : ಟೊಮೆಟೊ ದರ ಕುಸಿತ – ಕರ್ನಾಟಕದ ರೈತರಿಗೆ ತೀವ್ರ ಬೆಲೆ ಬಿಕ್ಕಟ್ಟು

ಬೆಂಗಳೂರು: ಏರುತ್ತಿರುವ ಕೃಷಿ ವೆಚ್ಚಗಳ ನಡುವೆಯೂ ಟೊಮೆಟೊ ದರಗಳು ಕುಸಿದಿದೆ. ಇನ್ನೊಂದೆಡೆ ಬೆಳೆ ನಷ್ಟದ ಬೆನ್ನಲ್ಲೇ ಈರುಳ್ಳಿ ಬೆಲೆ ತೀವ್ರವಾಗಿ ಏರಿರುವುದರಿಂದ ಕರ್ನಾಟಕದ ರೈತರು ತೀವ್ರ ಬೆಲೆ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ.

ಮಾರುಕಟ್ಟೆಯ ಏರಿಳಿತಗಳು ಬೆಳೆಗಾರರನ್ನು ಸಂಕಷ್ಟಕ್ಕೆ ದೂಡಿದ್ದು, ವಿಶೇಷವಾಗಿ ಕನಿಷ್ಠ ಬೆಂಬಲ ಬೆಲೆ, ನೇರ ಸಂಗ್ರಹಣೆ ಮತ್ತು ಉತ್ತಮ ಸಂಗ್ರಹಣೆ ಮತ್ತು ಸಂಸ್ಕರಣಾ ಸೌಲಭ್ಯಗಳನ್ನು ಖಾತರಿಪಡಿಸುವ ಮೂಲಕ ಸರ್ಕಾರಗಳು ಮಧ್ಯಪ್ರವೇಶಿಸಬೇಕು ಎಂದು ರೈತ ಸಂಘಟನೆಗಳು ಒತ್ತಾಯಿಸಿವೆ.

ರಾಜ್ಯದ ಕೆಲವು ಭಾಗಗಳಲ್ಲಿ, 25 ಕೆಜಿ ಟೊಮೆಟೊ ಬಾಕ್ಸ್ ಕೇವಲ 180 ರೂ.ನಿಂದ 200 ರೂ.ಗೆ ಸಿಗುತ್ತಿದೆ. ಗದಗದಲ್ಲಿ ಪ್ರತಿ ಕೆಜಿಗೆ 2 ರೂಪಾಯಿಗೆ ಇಳಿದಿರುವುದಾಗಿ ವರದಿಗಳು ಹೇಳುತ್ತಿವೆ. ಬೀಜಗಳು, ರಸಗೊಬ್ಬರಗಳು, ಕೀಟನಾಶಕಗಳು, ನೀರಾವರಿ, ಸ್ಟೇಕಿಂಗ್, ಕಾರ್ಮಿಕ ಮತ್ತು ಸಾಗಣೆಯನ್ನು ಒಳಗೊಂಡAತೆ ಕೃಷಿ ವೆಚ್ಚಗಳು ಎಕರೆಗೆ ರೂ. 40,000 ಮೀರುತ್ತದೆ. ಕೊಯ್ಲು ಮತ್ತು ಸಾರಿಗೆ ವೆಚ್ಚಗಳನ್ನು ಪೂರೈಸಲು ಸಹ ಬರುವ ಮೊತ್ತ ಕೆಲವೊಮ್ಮೆ ಸಾಕಾಗುತ್ತಿಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

“ರೈತರನ್ನು ಮಾರುಕಟ್ಟೆಯ ಏರಿಳಿತಗಳ ಜಂಜಾಟಕ್ಕೆ ಸಂಪೂರ್ಣವಾಗಿ ಬಿಡುವ ಬದಲು ಸರ್ಕಾರಗಳು ಲಾಭದಾಯಕ ಬೆಲೆಗಳನ್ನು ಏಕೆ ಖಾತರಿಪಡಿಸಬಾರದು ಎಂಬುದಕ್ಕೆ ಈ ಸಮಸ್ಯೆಯೇ ಸಾಕ್ಷಿಯಾಗಿದೆ” ಎಂದು ರೈತ ಮತ್ತು ಸಂಯುಕ್ತ ಕಿಸಾನ್ ಮೋರ್ಚಾದ ಪ್ರತಿನಿಧಿ ಅತ್ತಹಳ್ಳಿ ದೇವರಾಜ್ ಹೇಳಿದ್ದಾರೆ.

“ಟೊಮೆಟೊ ಬೆಲೆ ಕುಸಿದಾಗ, ರೈತರು ಕೊಯ್ಲು ಮತ್ತು ಸಾಗಣೆ ವೆಚ್ಚವನ್ನು ಸಹ ಮರುಪಡೆಯಲು ಸಾಧ್ಯವಾಗುವುದಿಲ್ಲ. ಸರ್ಕಾರ ಖಾತರಿಪಡಿಸಿದ ಕನಿಷ್ಠ ಬೆಲೆಗೆ ಉತ್ಪನ್ನಗಳನ್ನು ಖರೀದಿಸಲು ಮುಂದೆ ಬರಬೇಕು. ನಮಗೆ ಒSP ಗ್ಯಾರಂಟಿ, ರೈತರ ಖಾತೆಗಳಿಗೆ ಪಾವತಿಗಳೊಂದಿಗೆ ನೇರ ಸಂಗ್ರಹಣೆ, ಕೋಲ್ಡ್ ಸ್ಟೋರೇಜ್, ಸಂಸ್ಕರಣಾ ಸೌಲಭ್ಯಗಳು ಮತ್ತು ಸಾಲ ಮನ್ನಾಗಳು ಬೇಕಾಗುತ್ತವೆ” ಎಂದು ದೇವರಾಜ್ ಹೇಳಿದರು.

ಕಾನೂನುಬದ್ಧವಾಗಿ ಖಾತರಿಪಡಿಸಿದ ಎಂಎಸ್‌ಪಿ ಬೇಡಿಕೆ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ರೈತರು ಒSP ಖಾತರಿಗಳು, ನೇರ ಸಂಗ್ರಹಣೆ ಮತ್ತು ಸಾಲ ಪರಿಹಾರಕ್ಕಾಗಿ ಅಭಿಯಾನ ನಡೆಸುತ್ತಿದ್ದಾರೆ, ಕೇಂದ್ರದ ಗಮನ ಸೆಳೆಯಲು ಪ್ರತಿಭಟನೆಗಳನ್ನು ಯೋಜಿಸಲಾಗಿದೆ ಎಂದು ತಿಳಿಸಿದರು.

ಒಂದೆಡೆ ಈರುಳ್ಳಿ ಬೆಲೆ ಏರಿಕೆಯಾಗುತ್ತಿದ್ದರೆ, ಟೊಮೆಟೊ ಬೆಲೆ ಕುಸಿತವಾಗಿದೆ. ಮಾರುಕಟ್ಟೆ ಮಾಹಿತಿ ಪ್ರಕಾರ, ಕೆಲವು ಸ್ಥಳಗಳಲ್ಲಿ ಈರುಳ್ಳಿ ಬೆಲೆ ಕೆಜಿಗೆ ರೂ. 25 ರಿಂದ ರೂ.70 – 80 ಕ್ಕೆ ಏರಿದೆ. ಚಿಲ್ಲರೆ ಬೆಲೆ ರೂ. 80 ಕ್ಕೆ ತಲುಪಿವೆ. ಆದರೆ, ಭಾರಿ ಮಳೆ, ಬರ ಪರಿಸ್ಥಿತಿ ಮತ್ತು ಬೆಳೆ ವೈಫಲ್ಯಗಳು ಉತ್ಪಾದನೆ ಕಡಿಮೆಯಾಗಿರುವುದರಿಂದ ರೈತರು ಉತ್ತಮ ಬೆಲೆ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಕೆಲವು ಈರುಳ್ಳಿ ಬೆಳೆಗಾರರು, ಕಳಪೆ ಗುಣಮಟ್ಟದ ಬೀಜಗಳಿಂದಾಗಿ ಕೇವಲ ಶೇ 50ರಷ್ಟು ಮೊಳಕೆಯೊಡೆದಿದೆ. ಇದೂ ಒಂದು ಕಾರಣ ಎಂದು ಆರೋಪಿಸಿದ್ದಾರೆ.

ತರಕಾರಿ ಮಾರಾಟಗಾರ ಅಶೋಕ್ ಮಾತನಾಡಿ, ವ್ಯತಿರಿಕ್ತ ಬೆಲೆಗಳಿಂದಾಗಿ ರೈತರು ಮತ್ತು ಗ್ರಾಹಕರೂ ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಹಕರು ಈರುಳ್ಳಿಗೆ ಹೆಚ್ಚಿನ ಹಣ ಪಾವತಿಸುತ್ತಿದ್ದಾರೆ. ಆದರೆ ಟೊಮೆಟೊ ರೈತರು ತಾವು ವೆಚ್ಚವನ್ನು ಮರುಪಡೆಯಲೂ ಹೆಣಗಾಡುತ್ತಿದ್ದಾರೆ ಎಂದು ಹೇಳಿದರು.

ಯಶವಂತಪುರದ ತರಕಾರಿ ಸಗಟು ವ್ಯಾಪಾರಿ ಅನ್ವರ್ ಮಾತನಾಡಿ, ಈರುಳ್ಳಿ ಮತ್ತು ಟೊಮೆಟೊ ಬೆಲೆಗಳ ನಡುವಿನ ಹೆಚ್ಚುತ್ತಿರುವ ವ್ಯತ್ಯಾಸವು ಬೆಳೆಗಾರರು ಮತ್ತು ವ್ಯಾಪಾರಿಗಳು ಎದುರಿಸುತ್ತಿರುವ ಅಸ್ಥಿರತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ಹೆಚ್ಚುವರಿ ಟೊಮೆಟೊ ಆಗಮನ ಮತ್ತು ಕೋಲ್ದ್ ಸ್ಟೋರೇಜ್ ಕೊರತೆಯಿಂದಾಗಿ ಬೇಗನೆ ಹಾಳಾಗುವ ಬೆಳೆಯನ್ನು ತಕ್ಷಣ ಮಾರಾಟ ಮಾಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ರೈತ ಉತ್ಪಾದಕ ಸಂಸ್ಥೆಗಳು, ಸ್ವ – ಸಹಾಯ ಗುಂಪುಗಳು ಮತ್ತು ಸಣ್ಣ ಉದ್ಯಮಗಳ ಮೂಲಕ ಟೊಮೆಟೊ ಪ್ಯೂರಿ, ಪೇಸ್ಟ್, ಸಾಸ್, ಜ್ಯೂಸ್ ಮತ್ತು ಒಣಗಿದ ಟೊಮೆಟೊಗಳನ್ನು ಉತ್ಪಾದಿಸುವ ಸ್ಥಳೀಯ ಘಟಕಗಳಿಗೆ ಸರ್ಕಾರ ಬೆಂಬಲ ನೀಡಬೇಕು ಎಂದು ಅವರು ಮನವಿ ಮಾಡಿದರು.

ಸೆ.7ಕ್ಕೆ ಸಿಎಂ ಕೋಲಾರಕ್ಕೆ

‘ಕೋಲಾರದಲ್ಲಿ ಟೊಮೆಟೊ ಬೆಲೆ ಕುಸಿತ, ಉತ್ತರ ಕರ್ನಾಟಕದ ಈರುಳ್ಳಿ ಕೃಷಿ ಮೇಲೆ ಬರಗಾಲ ಹೊಡೆತ ಮತ್ತು ಮಂಡ್ಯದಲ್ಲಿ ಕಬ್ಬು ಬೆಳೆಗಾರರಿಗೆ ನೀರಿನ ಕೊರತೆ ಸೇರಿದಂತೆ ವಿವಿಧ ಪ್ರದೇಶಗಳ ರೈತರು ವಿಭಿನ್ನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸೆಪ್ಟೆಂಬರ್ 7 ರಂದು ಬೆಂಗಳೂರಿನ ಹೆಬ್ಬಾಳದಲ್ಲಿ ರೈತ ಮುಖಂಡರು ಕಾರ್ಯಾಗಾರವನ್ನು ನಡೆಸಲಿದ್ದಾರೆ ಮತ್ತು ನಂತರ ತಮ್ಮ ಬೇಡಿಕೆಗಳೊಂದಿಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡಲಿದ್ದಾರೆ’ ಎಂದು ಅವರು ಹೇಳಿದರು.

 

Recent Articles

spot_img

Related Stories

Share via
Copy link