ಹಾವೇರಿ:
ಹಾವೇರಿ ಜಿಲ್ಲೆಯಾದ್ಯಂತ ಸೆಪ್ಟೆಂಬರ್ 13 ರಿಂದ 23 ರವರೆಗೆ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಸಮಯದಲ್ಲಿ ಹೆಚ್ಚು ಶಬ್ದ ಮಾಡುವ ಧ್ವನಿವರ್ಧಕಗಳ ಮಿತಿಯನ್ನು ನಿಗಧಿಗೊಳಿಸಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ವೆಂಕಟೇಶ ಅವರು ಆದೇಶ ಹೊರಡಿಸಿದ್ದಾರೆ.
ಹೆಚ್ಚು ಶಬ್ದ ಮಾಡುವ ಧ್ವನಿವರ್ಧಕಗಳನ್ನು ಬಳಸುವುದರಿಂದ ಸಾರ್ವಜನಿಕರ ಆಯೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕಾರಣ ಕೈಗಾರಿಕಾ ವಲಯದಲ್ಲಿ ಹಗಲು ಸಮಯ 75 ಮತ್ತು ರಾತ್ರಿ ಸಮಯ 70 ಡೆಸಿಬೆಲ್, ವಾಣಿಜ್ಯ ವಲಯದಲ್ಲಿ ಹಗಲು ಸಮಯ 65 ಮತ್ತು ರಾತ್ರಿ ಸಮಯ 55 ಡೆಸಿಬೆಲ್, ವಸತಿ ವಲಯದಲ್ಲಿ ಹಗಲು ಸಮಯ 55 ಮತ್ತು ರಾತ್ರಿ ಸಮಯ 45 ಡೆಸಿಬೆಲ್ ಹಾಗೂ ಶಾಂತ ವಲಯದಲ್ಲಿ ಹಗಲು ಸಮಯ 50 ಮತ್ತು ರಾತ್ರಿ ಸಮಯ 40 ಡೆಸಿಬೆಲ್‍ಗೆ ಮಿತಿಗೊಳಿಸಲಾಗಿದೆ.
ಈ ಆದೇಶವನ್ನು ಉಲ್ಲಂಘಿಸಿದರೆ ಕಾನೂನು ರೀತ್ಯ ಕ್ರಮ ಕೈಕೊಳ್ಳಲಾಗುವುದೆಂದು ಪ್ರಕಟಣೆಯಲ್ಲಿ ಎಚ್ಚರಿಸಲಾಗಿದೆ.