ಬ್ಯಾಡಗಿ:
ಮುಖ್ಯಾಧಿಕಾರಿ ನೇತೃತ್ವದ ಪುರಸಭೆ ತಂಡವು ಪಟ್ಟಣದ ಗಣೇಶ ವಿಗ್ರಹ ತಯಾರಕರ ಬಿಡಾರಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಪರಿಸರ ಸ್ನೇಹಿ (ಪಿಓಪಿ ರಹಿತ) ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಬಳಕೆ ಮಾಡಬೇಕೆನ್ನುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಪುರಸಭೆ ಸಿಬ್ಬಂದಿಯು ಪಟ್ಟಣದ ಸುಮಾರು 8 ಬಿಡಾರಗಳಿಗೆ ತೆರಳಿ ಪರಿಶೀಲನೆ ನಡೆಸಿದರು.
ನಿಮ್ಮ ಆಚರಣೆಗೆ ಅಡ್ಡಿಪಡಿಸುವುದಿಲ್ಲ:ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಾಧಿಕಾರಿ ಬಸವರಾಜ ನಾಗಲಾಪೂರ, ಎಲ್ಲ ಧರ್ಮದವರು ಸಾರ್ವತ್ರಿಕವಾಗಿ ಗಣೇಶನ ಹಬ್ಬವನ್ನು ದೇಶದಾದ್ಯಂತ ಆಚರಿಸುತ್ತಾರೆ, ಈ ಸಂದರ್ಭದಲ್ಲಿ ಮನೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನ ವಿಗ್ರಹಗಳನ್ನು 5 ರಿಂದ 11 ದಿನದವರೆಗೆ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಭಕ್ತಿಯಿಂದ ಹಬ್ಬದಾಚರಣೆಯಲ್ಲಿ ತೊಡಗಿರುತ್ತಾರೆ, ಪರಿಸರ ಸ್ನೇಹಿ ಮಣ್ಣಿನಿಂದ ತಯಾರದ ಗಣೇಶನನ್ನು ಬಳಕೆ ಮಾಡಬೇಕು ಮತ್ತು ಪಿಓಪಿಯಿಂದ ತಯಾರಾದ ಗಣೇಶನ ಮೂರ್ತಿಗಳನ್ನು ತಿರಸ್ಕರಿಸುವಂತೆ ಮನವಿ ಮಾಡಿದರು.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರದಂತೆ ಕ್ರಮ: ಆರೋಗ್ಯಾಧಿಕಾರಿ ರವಿ ಕೀರ್ತಿ ಮಾತನಾಡಿ, ಹಬ್ಬಗಳನ್ನು ಆಚರಿಸುವ ಭರದಲ್ಲಿ ಪರಿಸರ ಹಾಳು ಮಾಡುವುದು ಅದರ ಉದ್ದೇಶಕ್ಕೆ ವಿರುದ್ಧವಾಗಿ ನಡೆದುಕೊಂಡಂತೆ, ಇದೂ ಸಹ ಶಿಕ್ಷಾರ್ಹ ಅಪರಾಧವಾಗಿದ್ದು ಇಂತಹವರ ವಿರುದ್ಧ ಕ್ರಮ ಆನಿವಾರ್ಯವಾಗಿದೆ, ಉದ್ದೇಶಪೂರ್ವಕಾಗಿ ಸರ್ಕಾರ ಧರ್ಮಧಾಚರಣೆಗಳಿಗೆ ಕಡಿವಾಣ ಹಾಕುತ್ತಿದೆ ಎಂಬ ಅರ್ಥಕ್ಕೆ ಬರಬಾರದು, ಸ್ವತಃ ಸಾರ್ವಜನಿಕರೇ ಸಾರ್ವತ್ರಿಕ ಜವಾಬ್ದಾರಿಗಳನ್ನು ತೋರುವ ಮೂಲಕ ಪಿಓಪಿಯಿಂದ ತಯಾರಾದ ಗಣೇಶನ ಮೂರ್ತಿಗಳನ್ನು ತಿರಸ್ಕರಿಸುವಂತೆ ಮನವಿ ಮಾಡಿದರು. ಇದಕ್ಕೆ ತಪ್ಪಿದಲ್ಲಿ ಕಾನೂನು ಕ್ರಮ ಅನಿವಾರ್ಯ ಎಂದರು..
ಪಿಓಪಿ ಮೂರ್ತಿ ತಯಾರಕರಿಗೆ ಎಚ್ಚರಿಕೆ: ಪರಿಸರಾಧಿಕಾರಿ ಮಹೇಶ ಮಾತನಾಡಿ, ಪಟ್ಟಣದ ಸುಮಾರು 8 ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಅಧಿಕಾರಿಗಳ ತಂಡವು ಯಾವುದೇ ಕಾರಣಕ್ಕೂ ಪಿಓಪಿ ಗಣೇಶನನ್ನು ತಯಾರಿಸದಂತೆ ಎಚ್ಚರಿಕೆ ನೀಡಿದ ಅವರು, ಮಣ್ಣಿನ ಗಣೇಶನನ್ನು ತಯಾರಿಸುವ ಮೂಲಕ ತಾವು ಸಹ ಪರಿಸರ ರಕ್ಷಣೆಯಲ್ಲಿ ಸರ್ಕಾರದೊಂದಿಗೆ ಕೈಜೋಡಿಸುವಂತೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಪುರಸಭೆ ಸಿಬ್ಬಂದಿಗಳಾದ ರಾಜೇಶ್ ಮಾಲತೇಶ ಹಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಫೊಟೋ-01ಬಿವೈಡಿ3-ಬ್ಯಾಡಗಿ:ಮುಖ್ಯಾಧಿಕಾರಿ ನೇತೃತ್ವದ ಪುರಸಭೆ ತಂಡವು ಪಟ್ಟಣದ ಗಣೇಶ ವಿಗ್ರಹ ತಯಾರಕರ ಬಿಡಾರಗಳಿಗೆ ತೆರಳಿ ಪರಿಶೀಲನೆ ನಡೆಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ