ಹೊಸಪೇಟೆ 
ನಗರದ ಅನಂತಶಯನಗುಡಿಯಲ್ಲಿರುವ ಶ್ರೀ ಪಾಂಡುರಂಗ ಸ್ವಾಮಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುನಮನ ಕಾರ್ಯಕ್ರಮವನ್ನು ಜ.30ರಂದು ಬೆಳಿಗ್ಗೆ 10ಕ್ಕೆ ಆಯೋಜಿಸಲಾಗಿತ್ತು.ಶಾಲೆಯ ಹಳೆಯ ವಿದ್ಯಾರ್ಥಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜನಾಧಿಕಾರಿ ಗುರುರಾಜ್ ಮಾತನಾಡಿ, ಶಿಕ್ಷಕರಿಗೆ ವಿಶೇಷ ಗೌರವ ಮನ್ನಣೆಗಳಿದ್ದು, ಪ್ರಾಮಾಣಿಕತೆಯಿಂದ ವೃತ್ತಿಯನ್ನು ಕೈಗೊಂಡಲ್ಲಿ ಅವರು ಶಿಷ್ಯರಿಗೆ ದ್ರೋಣಾಚಾರ್ಯರಂತೆ ಇರುತ್ತಾರೆ ಎಂದರು.
ಶಾಲೆಯ ಮುಖ್ಯೋಪಾಧ್ಯಯಿನಿ ಹೆಚ್.ತಿಪ್ಪಮ್ಮ ಮಾತನಾಡಿ, ಗುರುಗಳಿಗೆ ನಮನ ಸಲ್ಲಿಸುವಂತಾಗಬೇಕಾದರೆ, ಪಠ್ಯಕ್ಕಿಂತ ನೈತಿಕ ಶಿಕ್ಷಣವನ್ನು ಒದಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಶಾಲೆಯ ಬಗ್ಗೆ ವಿಶೇಷ ಒಲವನ್ನಿಟ್ಟುಕೊಂಡ ಹಳೆಯ ವಿದ್ಯಾರ್ಥಿಗಳು, ಇಂತಹ ಕಾರ್ಯಕ್ರಮವನ್ನು ಆಯೋಜಿಸಿರುವುದು ನಿಜಕ್ಕೂ ಶ್ಲಾಘನೀಯ. ಗುಣವಂತ ಶಿಷ್ಯರು ಮಾತ್ರ ಶಾಲೆ ಮತ್ತು ಗುರುಗಳ ಬಗ್ಗೆ ವಿಶೇಷ ಪ್ರೀತಿಯನ್ನಿಟ್ಟುಕೊಂಡಿರಲು ಸಾಧ್ಯ ಎಂದರು.
ಹಳೆಯ ವಿದ್ಯಾರ್ಥಿಗಳ ಪ್ರೀತಿಯ ಮತ್ತೊಬ್ಬ ಶಿಕ್ಷಕ ಮತ್ತು ವಿಶೇಷ ಆಹ್ವಾನಿತಮಂಜುನಾಥ ಮಾತನಾಡಿ, ಇಂದು ಶೈಕ್ಷಣಿಕ ಮೌಲ್ಯ ಕುಸಿಯುತ್ತಿರುವುದು ಅತ್ಯಂತ ಆತಂಕಕಾರಿ ಸನ್ನಿವೇಶವಾಗಿದೆ. ಇಂತಹ ಸನ್ನಿವೇಶದಲ್ಲೂ ಗುರುಗಳ ಬಗ್ಗೆ ವಿಶೇಷ ಕಾಳಜಿಯನ್ನಿಟ್ಟು ಕೊಂಡಿರುವ ಅನೇಕ ಶಿಷ್ಯ ವರ್ಗವಿದೆ. ಹಳೆಯ ವಿದ್ಯಾರ್ಥಿಗಳಲ್ಲಿ ಇಂದಿಗೂ ಗುರುಗಳ ಬಗ್ಗೆ ಭಕ್ತಿಯನ್ನಿಟ್ಟುಕೊಂಡಿರುವುದು ನಿಜಕ್ಕೂ ಅರ್ಥಪೂರ್ಣ ಎಂದರು. ಸ್ಥಳೀಯ ಮುಖಂಡ ಬಿ.ಭರ್ಮಪ್ಪ ಶಿಷ್ಯರ ಕರ್ತವ್ಯದ ಬಗ್ಗೆ ವಿವರಿಸಿ ತಿಳಿಸಿದರು.
ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಧರ್ಮೇಶ್, ರುದ್ರಮ್ಮ ಎಂ., ಸೋಮಶೇಖರ್, ಮಂಜುನಾಥ, ಅಂಬರೀಷ, ಗಾಳೆಪ್ಪ, ಸುರೇಶ್ ಮುಂತಾದವರಿದ್ದರು. ನಗರಸಭಾ ಸದಸ್ಯ ಕುಲ್ಲಾಯಪ್ಪ, ಸ್ಥಳೀಯ ಮುಖಂಡ ನಾಯಕರ ಹನುಮಂತಪ್ಪ, ಜಿ.ಎಂ. ಜ್ಞಾನೇಶ್ವರಿ, ಶಿಕ್ಷಕರಾದ ಈರಣ್ಣ ಡಿ.ಜಿ. ಶಾಂತಮ್ಮ ಹತ್ತಿಕಟ್ಟಿ, ಸ್ಥಳೀಯ ಹಳೆಯ ವಿದ್ಯಾರ್ಥಿಗಳು ಮುಂತಾದವರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








