ಜಮ್‌ಶೆಡ್‌ಪುರ:
ಜಾರ್ಖಂಡ್‌ನ ಪೂರ್ವ ಸಿಂಗ್‌ಭೂಮ್ ಜಿಲ್ಲೆಯ ರೈಲು ನಿಲ್ದಾಣದ ಬಳಿ ಶುಕ್ರವಾರ ಗೂಡ್ಸ್ ರೈಲಿಗೆ ಸಿಲುಕಿ ಇಬ್ಬರು ಎಳೆ ಮಕ್ಕಳು ಸೇರಿದಂತೆ ಮೂವರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಮ್‌ಶೆಡ್‌ಪುರ ನಗರದ ಹೊರವಲಯದಲ್ಲಿರುವ ಗೋವಿಂದಪುರ ಹಾಲ್ಟ್ ನಿಲ್ದಾಣದ ಬಳಿ ವ್ಯಕ್ತಿಯೊಬ್ಬ ಎರಡು ವರ್ಷದ ಬಾಲಕ ಮತ್ತು ಮೂರು ವರ್ಷದ ಬಾಲಕಿ ಜೊತೆಯಲ್ಲಿ ಮುಂಜಾನೆ ಹಳಿ ದಾಟುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.ಮೂವರು ಒಂದೇ ಕುಟುಂಬದ ಸದಸ್ಯರು ಎಂದು ಹೇಳಲಾಗಿದೆ.
ಮೂವರು ಪ್ರಾಯಶಃ ಪೂರ್ವ ಸಿಂಗ್‌ಭೂಮ್ ಜಿಲ್ಲೆಯ ಪೊಟ್ಕಾ ಬ್ಲಾಕ್‌ನ ನಿವಾಸಿಗಳಾಗಿದ್ದು, ಅವರನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಗೋವಿಂದಪುರ ಪೊಲೀಸ್ ಠಾಣೆಯ ಅಧಿಕಾರಿ ಪ್ರಕಾಶ್ ಕುಮಾರ್ ತಿಳಿಸಿದ್ದಾರೆ.
ಗೋವಿಂದಪುರ ಹಾಲ್ಟ್ ರೈಲು ನಿಲ್ದಾಣವು ಆಗ್ನೇಯ ರೈಲ್ವೆಯ ಚಕ್ರಧರಪುರ ವಿಭಾಗದ ಅಡಿಯಲ್ಲಿ ಬರುತ್ತದೆ. ಮೃತದೇಹಗಳನ್ನು ಇಲ್ಲಿನ ಎಂಜಿಎಂ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.