ರಾಜಸ್ಥಾನ
ಅಜ್ಮೀರ್ನಿಂದ ಅಹಮದಾಬಾದ್‌ಗೆ ಹೋಗುವ ಮಾರ್ಗದಲ್ಲಿ ರೈಲಿನ ಹಳಿ ತಪ್ಪಿಸುವ ಪ್ರಯತ್ನ ನಡೆದಿದೆ. ರೈಲ್ವೆ ಹಳಿ ಮೇಲಿದ್ದ ಸಿಮೆಂಟ್ ಮೈಲಿಗಲ್ಲಿಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದು ಹಳಿ ತಪ್ಪಿದೆ. ಕಾನ್ಪುರದಲ್ಲಿ ಭಾನುವಾರ ಕಾಳಿಂದಿ ಎಕ್ಸ್ಪ್ರೆಸ್ ರೈಲನ್ನು ಹಳಿ ತಪ್ಪಿಸುವ ಯತ್ನವನ್ನು ಕಿಡಿಗೇಡಿಗಳು ನಡೆಸಿದ್ದರು, ಹಳಿ ಮೇಲೆ ಸಿಲಿಂಡರ್, ಪೆಟ್ರೋಲ್ ತುಂಬಿದ ಬಾಟಲಿಗಳು, ಗನ್ ಪೌಡರ್ ಸೇರಿದಂತೆ ಅಪಾಯಕಾರಿ ವಸ್ತುಗಳನ್ನು ಇರಿಸಲಾಗಿತ್ತು.
ರೈಲು ಸಿಲಿಂಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಅದು ಸ್ಫೋಟಗೊಂಡಿತ್ತು, ಆದರೆ ರೈಲಿಗಾಗಲಿ ಅಥವಾ ಪ್ರಯಾಣಿಕರಿಗಾಗಲಿ ಯಾವುದೇ ರೀತಿಯ ಸಮಸ್ಯೆಯಾಗಿರಲಿಲ್ಲ. ಲೊಕೊ ಪೈಲಟ್ ತುರ್ತು ಬ್ರೇಕ್ ಹಾಕಿದ್ದರಿಂದ ರೈಲು ಹಳಿಯಲ್ಲಿ ಅಡಚಣೆ ಉಂಟಾದ ಕಾರಣ ತಕ್ಷಣ ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ಗೆ ಎಚ್ಚರಿಕೆ ನೀಡಿ ಸಂಪೂರ್ಣ ತಪಾಸಣೆ ನಡೆಸಿದ ನಂತರ ದೊಡ್ಡ ರೈಲು ಅಪಘಾತವನ್ನು ತಪ್ಪಿಸಲಾಯಿತು.
ಅಜ್ಮೀರ್‌ನ ಫುಲೇರಾದಿಂದ ಗುಜರಾತ್‌ನ ಅಹಮದಾಬಾದ್‌ಗೆ ರೈಲು ಪ್ರಯಾಣಿಸುತ್ತಿದ್ದಾಗ ಮಂಗಳವಾರ ನಸುಕಿನ ವೇಳೆ ಈ ಘಟನೆ ನಡೆದಿದೆ. ರೈಲು ಶಾರಧನ ನಿಲ್ದಾಣದ ಬಳಿ ಇದ್ದಾಗ ಇಂಜಿನ್ ಹಳಿಯಲ್ಲಿ ಯಾವುದೋ ವಸ್ತುವಿಗೆ ಡಿಕ್ಕಿ ಹೊಡೆದಿದೆ.
ತಪಾಸಣೆ ನಡೆಸಿದಾಗ, ರೈಲನ್ನು ಹಳಿತಪ್ಪಿಸುವ ಪ್ರಯತ್ನದಲ್ಲಿ 100 ಕಿಲೋಗ್ರಾಂಗಳಷ್ಟು ತೂಕದ ದೊಡ್ಡ ಕಾಂಕ್ರೀಟ್ ಬ್ಲಾಕ್ ನಿರ್ಮಿಸಲಾಗಿತ್ತು ಎಂಬುದು ತಿಳಿದುಬಂದಿದೆ. ಈ ಸಂಬಂಧ ಮಾಂಗಲ್ಯವಾಸ್ ಠಾಣೆಯಲ್ಲಿ ಆರ್‌ಪಿಎಫ್ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಆರೋಪಿಗಳ ಪತ್ತೆಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.