ಗೃಹ, ವಾಣಿಜ್ಯ ಬಳಕೆಯ ಸಿಲಿಂಡರ್‌ ಬೆಲೆ ಮತ್ತೆ ಏರಿಕೆ

ನವದೆಹಲಿ:

ಈಗಾಗಲೇ ಬೆಲೆ ಏರಿಕೆಯಿಂದ ಬಸವಳಿದಿರುವ ಗ್ರಾಹಕರಿಗೆ ಮತ್ತೆ ಸಿಲಿಂಡರ್‌ ಬೆಲೆ ಏರಿಕೆಯ ಶಾಕ್‌ ನೀಡಲಾಗಿದೆ. ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ರೂ. 3.50, ವಾಣಿಜ್ಯ ಸಿಲಿಂಡರ್‌ನ ಬೆಲೆಯನ್ನು 8 ರೂ.ಗಳಷ್ಟು ಹೆಚ್ಚಿಸಲಾಗಿದೆ. ಇದರೊಂದಿಗೆ, ಹಲವಾರು ನಗರಗಳಲ್ಲಿ ಗೃಹಬಳಕೆಯ LPG ಸಿಲಿಂಡರ್‌ಗಳ ದರವು 1000 ರೂಪಾಯಿ ಆಗಿದೆ.

ಗುರುವಾರ, ಮೇ 19 ರಂದು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಈ ತಿಂಗಳು ಎರಡನೇ ಬಾರಿಗೆ ಹೆಚ್ಚಿಸಲಾಗಿದೆ. ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ರೂ. 3.50, ವಾಣಿಜ್ಯ ಸಿಲಿಂಡರ್ ಬೆಲೆ 8 ರುಪಾಯಿಗಳಷ್ಟು ಏರಿಕೆ ಕಂಡಿದೆ.

ಈ ಹೆಚ್ಚಳದ ನಂತರ, ದೇಶಾದ್ಯಂತದ ಬಹುತೇಕ ಎಲ್ಲಾ ನಗರಗಳಲ್ಲಿ ದೇಶೀಯ ಸಿಲಿಂಡರ್‌ನ ಬೆಲೆ ಈಗ 1000 ರೂಪಾಯಿ ಆಗಿದೆ. ಏರಿಕೆಯೊಂದಿಗೆ ದೆಹಲಿ ಮತ್ತು ಮುಂಬೈನಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 1003 ರೂ., ಕೋಲ್ಕತ್ತಾದಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 1029 ರೂ., ಮತ್ತು ಚೆನ್ನೈನಲ್ಲಿ ಇಂದಿನಿಂದ 1018.5 ರುಪಾಯಿ ಆಗಿದೆ. ಈ ಹಿಂದೆ ಮೇ 7ರಂದು ಸಿಲಿಂಡರ್ ಬೆಲೆ 50 ರೂ. ಏರಿಕೆಯಾಗಿತ್ತು. ಗೃಹಬಳಕೆಯ ಸಿಲಿಂಡರ್ ಜತೆಗೆ ವಾಣಿಜ್ಯ ಸಿಲಿಂಡರ್ ಕೂಡ ದುಬಾರಿಯಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link