ಗ್ರಾಹಕರಿಂದ ಅಧಿಕ ಹಣ ವಸೂಲಿ

ಪಾವಗಡ

            ಪಾವಗಡ ಟೌನ್ ಮತ್ತು ವೈ.ಎನ್.ಹೊಸಕೋಟೆ ಗ್ರಾಮದಲ್ಲಿರುವ ಗ್ಯಾಸ್ ಏಜೆನ್ಸಿಯವರಿಂದ ಗ್ಯಾಸ್ ವಿತರಣೆ ಮಾಡುವಾಗ ಗ್ರಾಹಕರಿಂದ ಅಧಿಕ ಹಣ ವಸೂಲಿ ಮಾಡುತ್ತಿದ್ದಾರೆಂದು ಅರೋಪಿಸಿ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ತಹಶೀಲ್ದಾರ್ ಕಛೇರಿಗೆ ಮುತ್ತಿಗೆ ಹಾಕಿ ಗ್ಯಾಸ್ ಏಜೆನ್ಸಿಗಳ ವಿರುದ್ದ ಕ್ರಮಕೈಗೊಳ್ಳಬೇಕೆಂದು ತಮ್ಮ ಅಕ್ರೋಶವನ್ನು ಹೊರಹಾಕಿದ ಘಟನೆ ಮಂಗಳವಾರ ಜರುಗಿತು.
ಮುತ್ತಿಗೆಯ ನೆತೃತ್ವ ವಹಿಸಿದ್ದ ನಮ್ಮ ಹಕ್ಕು ಸಂಸ್ಥೆಯ ತಾಲ್ಲೂಕು ಅಧ್ಯಕ್ಷ ಗಿರೀಶ್ ಮಾತನಾಡಿ,ಪಾವಗಡ ಪಟ್ಟಣದ ನಾಯಕ್ ಇಂಡಿಯನ್ ಗ್ಯಾಸ್ ಮತ್ತು ವೈ.ಎನ್.ಹೊಸಕೋಟೆ ಗ್ರಾಮದ ಎಸ್.ಎಂ. ಇಂಡಿಯನ್ ಗ್ಯಾಸ್ ಏಜೆನ್ಸಿಯಿಂದ ವಿತರಣೆ ಮಾಡಲು ಅದಿಕ ಹಣ ವಸೂಲಿ ಮಾಡುತ್ತಿದ್ದು, ಕೇಂದ್ರ ಸರ್ಕಾರ ಒಬ್ಬ ಗ್ರಾಹಕರಿಗೆ ಮನೆಗೆ ವಿತರಣೆ ಮಾಡಲು 807 ನಿಗದಿಪಡಿಸಿದೆ, ಅದರೆ ಗ್ಯಾಸ್ ಏಜೆನ್ಸಿಯವರು ಮನೆಗಳಿಗೆ ವಿತರಣೆ ಮಾಡುವಾಗ 840 ರೂಗಳನ್ನು ಪಡೆಯುತ್ತಿದ್ದು, ಅಧಿಕವಾಗಿ 37 ರೂಗಳನ್ನು ಪಡೆಯುತ್ತಿದ್ದು, ನಿಯಮಾನುಸಾರ ಎಷ್ಟೆ ದೂರ ಇದ್ದರೂ ವಿತರಣೆ ಮಾಡಲು ಯಾವುದೇ ರೀತಿಯಾದ ಬಾಡಿಗೆ ಪಡೆಯದೆ ನಿಗದಿಯಾದ ಧರವನ್ನು ಪಡೆಯಬೇಕು, ಅದರೆ ಒಬ್ಬ ಗ್ರಾಹಕರಿಂದ 37 ರೂಗಳನ್ನು ಹೆಚ್ಚು ವಸೂಲಿ ಮಾಡುತ್ತಾ, ಗ್ರಾಹಕರಿಗೆ ಮೋಸ ಮಾಡುತ್ತಿದ್ದು, ಹಲವಾರು ವರ್ಷಗಳಿಂದ ಇದೇ ರೀತಿ ಹಣ ವಸೂಲಿ ಮಾಡಿ ಗ್ರಾಹಕರಿಗೆ ಮೋಸ ಮಾಡುತ್ತಿದ್ದಾರೆಂದು ದೂರಿ, ಗ್ರಾಹಕರು ಇಂಡಿಯನ್ ಗ್ಯಾಸ್ ಹೆಲ್ಪ್ ಲೈನ್ ನಂ 18002333555 ದೂರು ನೀಡಬಹುದು ಎಂದು ತಿಳಿಸಿದರು.

               ಹೆಲ್ಪ್ ಸೋಸೈಟಿ ಅಧ್ಯಕ್ಷ ಮಾನಂಶಶಿಕಿರಣ್ ಮಾತನಾಡಿ, ಕೇಂದ್ರ ಸರ್ಕಾರದ ಪ್ರದಾನಮಂತ್ರಿ ಉಜ್ವಲ ಗ್ಯಾಸ್ ವಿತರಣೆ ಯೋಜನೆಯಲ್ಲಿ ಗ್ರಾಹಕರಿಮದ ಹಣ ಪಡೆಯುವಂತಿಲ್ಲ ಅದರೇ ಒಬ್ಬ ಫಲಾನುಭವಿಯಿಂದ 500 ಹಣ ವಸೂಲಿ ಮಾಡುತ್ತಿದ್ದಾರೆಂದು ದೂರಿದರು.

                ವಿಶ್ವಮಾನವ ಹಕ್ಕುಗಳ ಸ್ವಯಂಸೇವಾಸಂಸ್ಥೆಯ ತಾ. ಅಧ್ಯಕ್ಷ ಪಳವಳ್ಳಿದಿನೇಶ್ ಮಾತನಾಡಿ, ಗ್ಯಾಸ್ ಏಜೇನ್ಸಿಯವರಿಂದ ಹಗಲು ದರೋಡೆ ನಡೆಯುತ್ತಿದ್ದು,ಈ ತಕ್ಷಣ ಗ್ಯಾಸ್ ಏಜೆನ್ಸಿಯವರಿಗೆ ಕರೆಯಿಸಿ ಈ ಬಗ್ಗೆ ಗ್ರಾಹಕರಿಗೆ ಮೋಸ ಮಾಡದ ಹಾಗೆ ಹೆಚ್ಚರಿಕೆ ನೀಡಬೇಕು ಇಲ್ಲವಾದ ಪಕ್ಷದಲ್ಲಿ ನಮ್ಮಹಕ್ಕು, ಹೆಲ್ಪಸೊಸೈಟಿ, ಚಿನ್ಮಯ ವಿಶ್ವಮಾನವ ಹಕ್ಕುಗಳ ಸಂಸ್ಥೆಗಳಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹೆಚ್ಚರಿಸಿದರು.ಗ್ರೇಡ್- 2 ತಹಶೀಲ್ದಾರ್ ಹನುಮಂತಯ್ಯ ಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಸ್ವೀಕರಿಸದ ಹನುಮಂತಯ್ಯ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ದಲಿತ ಮುಖಂಡರಾದ ಮಂಜುನಾಥ್ ಕೋಟಗುಡ್ಡಹನುಮಂತರಾಯ,ಚಿನ್ಮಯ ಸಂಸ್ಥೆಯ ನಿರ್ದೇಶಕ ವಿರೇಶ್, ಅನಿಲ್,ಪೂಜಾಬಾಬು, ನರೇಂದ್ರ, ವಿನೋದ್,ಮತ್ತಿತರರು ಹಾಜರಿದ್ದರು

Recent Articles

spot_img

Related Stories

Share via
Copy link