ಗ್ರಂಥಾಲಯ, ಕ್ರೀಡಾಂಗಣಗಳಲ್ಲಿ ಕಾಲ ಕಳೆಯಿರಿ

ದಾವಣಗೆರೆ:

   ವಿದ್ಯಾರ್ಥಿಗಳು ಹೆಚ್ಚುಕಾಲ ಗ್ರಂಥಾಲಯ ಮತ್ತು ಕ್ರೀಡಾಂಗಣದಲ್ಲಿ ಕಾಲ ಕಳೆದರೆ, ದೈಹಿಕ ಮತ್ತು ಜ್ಞಾನದ ಬಲ ಹೆಚ್ಚಾಗಲಿದೆ ಎಂದು ಜಾನಪದ ತಜ್ಞ ಡಾ.ಎಂ.ಜಿ.ಈಶ್ವರಪ್ಪ ತಿಳಿಸಿದರು.

   ನಗರದ ಆರ್‍ಎಲ್ ಕಾನೂನು ಕಾಲೇಜಿನಲ್ಲಿ ಬುಧವಾರ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಂತರ್ ಕಾಲೇಜು ವಿದ್ಯಾರ್ಥಿಗಳಿಗೆ ಗುಡ್ಡಗಾಡು ಓಟದ ಸ್ಪರ್ಧೆಯ ಸಮಾರೋಪ ಹಾಗೂ ಬಹುಮಾನ ವಿತರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿಒದ ಅವರು, ವಿದ್ಯಾರ್ಥಿಗಳು ನಿತ್ಯವು ಗ್ರಂಥಾಲಯ ಹಾಗೂ ಕ್ರೀಡಾಂಗಣಗಳಲ್ಲಿ ಹೆಚ್ಚಿನ ಸಮಯ ಕಳೆಯಬೇಕು. ಇದರಿಂದ ದೈಹಿಕ ಬಲ ಹಾಗೂ ಜ್ಞಾನದ ವೃದ್ಧಿಯೂ ಹೆಚ್ಚಾಗುತ್ತದೆ ಎಂದರು.

    ವಿದ್ಯಾರ್ಥಿಗಳನ್ನು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲೂ ಭಾಗವಹಿಸಬಹುದಾಗಿದೆ. ಈ ನಿಟ್ಟಿನಲ್ಲಿ ಕ್ರೀಡೆ, ಕಲೆ, ಸಾಂಸ್ಕೃತಿಕ ಸ್ಪರ್ಧೆಗಳನ್ನು ಎಲ್ಲಾ ಶಾಲಾ-ಕಾಲೇಜುಗಳಲ್ಲಿ ನಡೆಸುವುದು ಒಳ್ಳೆಯದು ಎಂದ ಅವರು, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕವಾಗಿ ಸದೃಢಗೊಳ್ಳುವುದರ ಜತೆಗೆ ತಮ್ಮ ಆತ್ಮಬಲವು ವೃದ್ಧಿಯಾಗಲಿದೆ ಎಂದು ಹೇಳಿದರು.

    ಹಿಂದೆ ಮಲೆನಾಡು ಗುಡ್ಡಗಾಡುಗಳಲ್ಲಿ ಓಟದ ಸ್ಪರ್ಧೆಯಲ್ಲಿ ಭಾಗವಹಿಸುವುದು ಸಾಮಾನ್ಯವಾಗಿತ್ತು. ಕಾಲ ಬದಲಾದಂತೆಲ್ಲಾ ನಾಗರಿಕರಿಗೆ ಸೌಲಭ್ಯ ಹೆಚ್ಚಿದಂತೆಲ್ಲಾ ಸ್ಪರ್ಧೆಗಳು ನಡೆಯುವ ಸ್ಥಳವೂ ಬದಲಾಗುತ್ತಿದೆ. ಕ್ರೀಡಾಪಟುಗಳಿಗೆ ಯಾವುದೇ ತೋಂದರೆ ಆಗದಂತೆ ಸುವ್ಯವಸ್ಥೆಗಳಿವೆ. ಆದ್ದರಿಂದ ಕ್ರೀಡೆಗಳಲ್ಲಿ ಹೆಚ್ಚೆಚ್ಚು ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದು ಹೇಳಿದರು.

    ಕಾಲೇಜಿನ ಪ್ರಾಚಾರ್ಯ ಪ್ರೊ.ಬಿ.ಎಸ್.ರೆಡ್ಡಿ ಮಾತನಾಡಿ, ಕ್ರೀಡಾ ಸ್ಪರ್ಧೆಗಳಲ್ಲಿ ಸೋಲು ಗೆಲುವು ಸಾಮಾನ್ಯ. ನಿತ್ಯ ಪ್ರಾಯೋಗಿಕವಾಗಿ ಯಾರು ಪರಿಶ್ರಮ ಪಡುತ್ತಾರೋ ಅವರಿಗೆ ಜಯ ಸಾಧಿಸಲು ಸಾಧ್ಯವಾಗಲಿದೆ. ಆದ್ದರಿಂದ ಕ್ರೀಡೆಗಳಲ್ಲಿ ಭಾಗವಹಿಸುವ ಆಕಸ್ತಿ, ಉತ್ಸಾಹ ಬೆಳೆಸಿಕೊಳ್ಳಬೇಕು. ಕ್ರೀಡೆಗೆ ಆಸಕ್ತಿ ತೋರಿಸುವಷ್ಟು ಶೈಕ್ಷಣಿಕ ಚಟುವಟಿಕೆಗಳಲ್ಲೂ ಆಸಕ್ತಿ ತೋರಿಸುವ ಮೂಲಕ ಶಿಕ್ಷಣ ಸಂಸ್ಥೆಗೆ ಕೀರ್ತಿ ತರಬೇಕೆಂದು ಕಿವಿಮಾತು ಹೇಳಿದರು.

     ಹುಬ್ಬಳ್ಳಿಯ ಖಾಲಿದ್ ಬಿ.ಖಾನ್ ಮಾತನಾಡಿದರು. ಈ ವೇಳೆ ಸಾಹಯಕ ಪ್ರಾಧ್ಯಾಪಕ ಎಂ.ಸೋಮಶೇಖರಪ್ಪ, ಎಂ.ಕಿರಣ್, ಜಿ.ಎಸ್.ಯತೀಶ್ ಇದ್ದರು

                  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link