ವಿದ್ಯಾರ್ಥಿ ದೆಸೆಯಲ್ಲಿಯೇ ಸಿಗುವ ಅನುಭವ ಧಾರೆಗಳನ್ನು ಸದ್ವಿನಿಯೋಗ ಪಡಿಸಿಕೊಳ್ಳಿ

0
18

ಹರಪನಹಳ್ಳಿ: 

     ವಿದ್ಯಾರ್ಥಿ ದೆಸೆಯಲ್ಲಿಯೇ ಸಿಗುವ ಅನುಭವ ಧಾರೆಗಳನ್ನು ಸದ್ವಿನಿಯೋಗ ಪಡಿಸಿಕೊಂಡರೆ ಮುಂದಿನ ಭವಿಷ್ಯ ಉಜ್ವಲಗೊಳ್ಳುತ್ತದೆ ಆಗುತ್ತದೆ ಎಂದು ಶಿಕ್ಷಕ ಮನೋಹರ ಹೇಳಿದರು.

     ತಾಲ್ಲೂಕಿನ ಹಾರಕನಾಳು ಗ್ರಾಮದಲ್ಲಿ ಪಟ್ಟಣದ ಎಚ್.ಪಿ.ಎಸ್. ಕಾಲೇಜು ವತಿಯಿಂದ ಹಮ್ಮಿಕೊಂಡಿರುವ ಎನ್ನೆಸ್ಸೆಸ್ ವಾರ್ಷಿಕ ಶಿಬಿರದ ಮಂಗಳವಾರದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

     ಶಿಬಿರಾರ್ಥಿಗಳಿಗೆ ಎನ್ನೆಸ್ಸೆಸ್ ಶ್ರಮದಾನದ ಪರಿಕಲ್ಪನೆ ಮೂಡಿಸುತ್ತದೆ. ಗ್ರಾಮಸ್ಥರಲ್ಲಿ ಶುಚಿತ್ವದ ಅರಿವು ತಿಳಿಸಲು ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ಅವಕಾಶ. ಯುವಶಕ್ತಿ ಒಂದಾಗಿ ಕೆಲಸ ಮಾಡಿದರೆ ಸಮಾಜಕ್ಕೆ ಹೇಗೆ ಪ್ರೇರಣೆ ಆಗಬಹುದು ಎಂಬುದಕ್ಕೆ ಇಂತಹ ಶಿಬಿರ ಸಾಕ್ಷಿ ಆಗುತ್ತವೆ ಎಂದರು.

     ಯುವ ಮುಖಂಡ ಕೆ.ಅಶೋಕ ಮಾತನಾಡಿ, ಗ್ರಾಮೀಣ ಬದುಕಿನ ಚಿತ್ರಣ ಅರಿಯಲು ಎನ್ನೆಸ್ಸೆಸ್ ಅಡಿಪಾಯ ಆಗಿದೆ. ಯುವ ಜನತೆ ಮೊಬೈಲ್, ಟಿವಿಗಳಿಗೆ ಮಾರು ಹೋಗದೇ ಪುಸ್ತಕಗಳ ಪ್ರಿಯರಾಗಬೇಕು. ಆರೋಗ್ಯಕರ ಸಮಾಜಕಟ್ಟುವಲ್ಲಿ ಶಿಕ್ಷದ ಪಾತ್ರ ಅಪಾರವಾಗಿದೆ ಎಂದರು.

     ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಕೊತಬಾಳ ಗ್ರಾಮದ ರಾಜ್ಯೋತ್ಸವ ಪುರಸ್ಕೃತ ಅರುಣೋದಯ ಕಲಾತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

       ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಭೋವಿ ನಾಗಪ್ಪ, ಸದಸ್ಯರಾದ ರತ್ನಮ್ಮ, ಹನುಮವ್ವ, ದುರ್ಗದಯ್ಯ, ಶಿಬಿರಾಧಿಕಾರಿ ಡಿ.ಸಿ.ಪ್ರದೀಪ್, ಸಹ ಶಿಬಿರಾಧಿಕಾರಿಗಳಾದ ಮಂಜುನಾಥ್ ಮಾಳ್ಗಿ, ಮುಖಂಡರಾದ ಡಿ.ಜಿ.ಪ್ರಕಾಶಗೌಡ, ಶಿವಮೂರ್ತೆಪ್ಪ, ಬಸಲಿಂಗನಗೌಡ, ಲಿಂಗನಗೌಡ, ಕಲ್ಲನಗೌಡ, ಫಕ್ಕಿರಪ್ಪ ಇತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here