ಜಗಳೂರು
ಅಣಬೂರು ಗ್ರಾಮ ಪಂಚಾಯ್ತಿಯ ಅಧ್ಯಕ್ಷ ಹಾಗೂ ಸದಸ್ಯತ್ವ ವನ್ನು ರದ್ದು ಮಾಡಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶ ಹೊರಡಿಸಿದೆ.
ತಾಲೂಕಿನ ಅಣಬೂರು ಗ್ರಾಮ ಪಂಚಾಯ್ತಿಯ ಅಧ್ಯಕ್ಷರಾಗಿ ಶ್ರೀಮತಿ ಗಿರಿಜಾಬಾಯಿ ಇಲ್ಲಿಯವರೆಗೆ ಕಾರ್ಯನಿ ರ್ವಹಿಸಿದ್ದರು. ಸರ್ಕಾರದಿಂದ ಬಿಡುಗಡೆ ಯಾದ ಹಣ ದುರುಪಯೋಗ ಪಡಿಸಿಕೊ ಂಡಿರುವ ಬಗ್ಗೆ ಇಲಾಖೆ ವಿಚಾರಣೆಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ತಕ್ಷಣದಿಂದ ಆದೇಶ ಜಾರಿಗೆ ಬರುವಂತೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶ ನೀಡಿದೆ.
ಅಧ್ಯಕ್ಷರಾಗಿದ್ದ ಶ್ರೀಮತಿ ಗಿರಿಜಾಬಾಯಿ ಅವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು 2016-17ರಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ತಂತ್ರಾಂಶ ಅಳವಡಿಸದೇ ಸಾಮಗ್ರಿ ಖರೀದಿ ಬಿಲ್ಲುಗಳಿಗೆ ಹಣ ಪಾವತಿಸಿ ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿ 17.92.435 ರೂ.ಗಳನ್ನು ಹಾಗೂ ಸದರೀ ಸಾಲಿನಲ್ಲಿ 14ನೇ ಹಣಕಾಸು ಯೋಜನೆಯಲ್ಲಿ 14 ಕಾಮಗಾರಿಗೆ ಕ್ರಿಯಾ ಯೋಜನೆಯಲ್ಲಿ ಅನುಮೋದನೆ ಪಡೆದಿದ್ದು, ಸದರಿ ಕಾಮಗಾರಿಗಳನ್ನು ನಿರ್ವಹಣೆ ಮಾಡದೇ 14ನೇ ಹಣಕಾಸು ಯೋಜನೆಯ ಮಾರ್ಗ ಸೂಚಿಯನ್ನು ಉಲ್ಲಂಘಿಸಿ, ಕುಡಿಯುವ ನೀರಿನ ಸಾಮಗ್ರಿ ಖರೀದಿ, ಪೈಪ್‍ಲೈನ್ ದುರಸ್ಥಿ, ಬೀದಿ ದೀಪ ನಿರ್ವಹಣೆ, ಮೋಟ ರ್ ದುರಸ್ಥಿ, ಚರಂಡಿ ಸ್ವಚ್ಚತೆ ವೆಚ್ಚದ ಲೆಕ್ಕ ತೋರಿಸಿ 10.97.474 ರೂ.ಗಳನ್ನು ಪರೋ ಕ್ಷವಾಗಿ ಸರ್ಕಾರದ ಹಣ ದುರುಪಯೋಗ ಪಡಿಸಿಕೊಂಡಿದ್ದು, ವಿಚಾರಣೆ ವೇಳೆ ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಅಧ್ಯಕ್ಷ ಮತ್ತು ಸದಸ್ಯತ್ವ ಸ್ಥಾನದಿಂದ ವಜಾಗೊಳಿಸಿದ್ದಾರೆ.
ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ/811/ಗ್ರಾಪಂಅ/2018 ಬೆಂಗಳೂರು, ದಿನಾಂಕ: 06-03-2019 ರಂದು ಪ್ರಸ್ತಾವನೆಯಲ್ಲಿ ವಿವರಿಸಲಾದ ಅಂಶಗಳ ಹಿನ್ನೆಲೆಯಲ್ಲಿ ಶ್ರೀಮತಿ ಗಿರಿಜಾಬಾಯಿ, ಅಧ್ಯಕ್ಷರು, ಪ್ರಕರಣದಲ್ಲಿ ಆಪಾದನೆ ಸಾಬೀತಾಗಿರುವುದರಿಂದ ಸದರಿಯವರ ವಿರುದ್ದ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993 ಪ್ರಕರಣದ 43(ಎ) ಮತ್ತು 48(4) ರನ್ವಯ ಅಣಬೂರು ಗ್ರಾಮ ಪಂಚಾಯ್ತಿಯ ಅಧ್ಯಕ್ಷರ ಸ್ಥಾನ ಮತ್ತು ಸದಸ್ಯ ಸ್ಥಾನದಿಂದ ವಜಾಗೊಳಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ನೀಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ