ಗಾಂಧಿಜೀಯವರ ಸ್ತಬ್ಧಚಿತ್ರದ ರಥಯಾತ್ರೆಗೆ ಅದ್ದೂರಿ ಸ್ವಾಗತ

0
21

ಹರಿಹರ:

     ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನೋತ್ಸವದ ಅಂಗವಾಗಿ ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿದ್ದ ಮಹಾತ್ಮಾ ಗಾಂಧಿಜೀ ಅವರ ಪುತ್ಥಳಿ ಹಾಗೂ ದಂಡಿಯಾತ್ರೆಯ ಮೂರ್ತಿಯನ್ನೊಳಗೊಂಡ ಶಾಂತಿಮಾರ್ಗ ರಥಯಾತ್ರೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

    ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿ ಮೂಲಕ ನಗರಕ್ಕೆ ಆಗಮಿಸಿದ ರಥಯಾತ್ರೆಯನ್ನು ನಗರಸಭೆ ಅಧ್ಯಕ್ಷೆ ಆರ್. ಸುಜಾತ ಮಹಾತ್ಮ ಗಾಂ ಧಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿಸ್ವಾಗತಿಸಿದರು.

     ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನಾಚರಣೆಯ ಅಂಗವಾಗಿ ಸರ್ಕಾರ ಗಾಂಧಿ ಅವರ ತತ್ವ ಮತ್ತು ಸಿದ್ಧಾಂತಗಳ ಪ್ರಚಾರಕ್ಕಾಗಿ ಈ ರಥಯಾತ್ರೆಗೆ ಚಾಲನೆ ನೀಡಿದೆ. ಅ, 2 ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ರಥಯಾತ್ರೆಗೆ ಚಾಲನೆ ನೀಡಿದರು ಎಂದು ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಿ. ಅಶೋಕ ಕುಮಾರ್ ತಿಳಿಸಿದರು.

      ರಥಯಾತ್ರೆ ಶಾಂತಿ ಮಾರ್ಗ ಹಾಗೂ ಸತ್ಯ ಮಾರ್ಗ ಎಂಬ ಹೆಸರಿನಿಂದ ರಾಜ್ಯಾದ್ಯಾಂತ ಸಂಚರಿಸಲಿದೆ. ಶಾಂತಿ ಮಾರ್ಗ ರಥ ಯಾತ್ರೆ ಬೆಂಗಳೂರಿನಿಂದ ಪ್ರಾರಂಭವಾಗಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಧಾರವಾಡ ಮಾರ್ಗವಾಗಿ ಅ.26ಕ್ಕೆ ಬೀದರ್‍ನಲ್ಲಿ ಅಂತ್ಯಗೊಳ್ಳಲಿದೆ. ಸತ್ಯ ಮಾರ್ಗ ರಥಯಾತ್ರೆ ಬೆಂಗಳೂರಿನಿಂದ ಆರಂಭಗೊಂಡು ಮೈಸೂರು, ಉಡುಪಿ, ದಕ್ಷಿಣ ಕನ್ನಡ, ಮಂಗಳೂರು ಮಾರ್ಗವಾಗಿ ವಿಜಯಪುರದಲ್ಲಿ ಅ,26ಕ್ಕೆ ಅಂತ್ಯಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ನಗರಸಭೆ ಸದಸ್ಯ ಶಂಕರ್ ಖಟಾವಕರ್, ಮುಖಂಡರಾದ ಅಜಿತ್ ಸಾವಂತ್, ರಮೇಶ್ ಮಾನೆ, ರೇವಣ ಸಿದ್ಧಪ್ಪ ಹಾಗೂ ಇತರರು ಉಪಸ್ಥಿತರಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here