ಚಿತ್ರದುರ್ಗ:
ಗ್ರಾಹಕರ ಜೊತೆ ನಿಮ್ಮ ವರ್ತನೆ ಯಾವ ರೀತಿ ಇರುತ್ತದೋ ಅದರ ಮೇಲೆ ಬ್ಯಾಂಕ್‍ನ ಶ್ರೇಯಸ್ಸು ಅವಲಂಭಿಸಿದೆ ಎಂದು ಜಿಲ್ಲಾಧಿಕಾರಿ ವಿನೋತ್‍ಪ್ರಿಯ ಹೇಳಿದರು.
ತ.ರಾ.ಸು.ರಂಗಮಂದಿರದಲ್ಲಿ ಭಾನುವಾರ ನಡೆದ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಚೇರಿ ಚಿತ್ರದುರ್ಗ ವಲಯೋತ್ಸವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸಿಬ್ಬಂದಿಗಳ ನಡುವೆ ಯಾವುದೇ ಅಧಿಕಾರದ ತಾರತಮ್ಯವಿರಬಾರದು ಪರಸ್ಪರರ ಸಹಕಾರ ಹಾಗೂ ಗ್ರಾಹಕರಿಗೆ ಒಳ್ಳೆ ಸೇವೆ ನೀಡಿದಾಗ ಮಾತ್ರ ಬ್ಯಾಂಕ್ ಅಭಿವೃದ್ದಿ ಹೊಂದಲಿದೆ. ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸಿ ಎಂದು ಸಿಬ್ಬಂದಿಗಳಿಗೆ ಕರೆ ನೀಡಿದರು.
ನಾನು ಕೂಡ ಗ್ರಾಮೀಣ ಬ್ಯಾಂಕ್‍ನಲ್ಲಿ ಉದ್ಯೋಗಿಯಾಗಿದ್ದೆ. ಆಗ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು ಬ್ಯಾಂಕ್‍ನ ಅಧಿಕಾರಿಗಳು ರಜೆ ಕೊಡುತ್ತಿರಲಿಲ್ಲ. ಆ ಸಮಯದಲ್ಲಿ ಸಾಕಷ್ಟು ಬೇಸರಪಟ್ಟುಕೊಂಡಿದ್ದೆ ಎಂದು ಹಿಂದಿನದನ್ನು ನೆನಪು ಮಾಡಿಕೊಂಡರು.
ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಛೇರ್ಮನ್ ಶ್ರೀನಿವಾಸ್ ಹೆಚ್.ಜೋಶಿ ಮಾತನಾಡುತ್ತ ಇದು ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‍ನ ಹ್ಯಾಟ್ರಿಕ್ ವಲಯೋತ್ಸವ. ಇನ್ನು ಮುಂದೆ ಪ್ರತಿ ವರ್ಷವೂ ನಿರಂತರವಾಗಿ ವಲಯೋತ್ಸವ ನಡೆಯುತ್ತಿರಬೇಕು. ಅದಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುವ್ಯದೆಂದು ಭರವಸೆ ನೀಡಿದರು.
ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಸಿಬ್ಬಂದಿಗಳ ಸಹಕಾರದ ಜೊತೆ ಸಿಬ್ಬಂದಿಗಳ ಕುಟುಂಬದ ತ್ಯಾಗವೂ ಇದರಲ್ಲಿ ಅಡಗಿದೆ. ಪ್ರಧಾನ ವ್ಯವಸ್ಥಾಪಕರು, ಸಹಾಯಕ ಪ್ರಧಾನ ವ್ಯವಸ್ಥಾಪಕರು, ಅಧಿಕಾರಿಗಳು, ಸಿಬ್ಬಂದಿ ಎನ್ನುವ ತಾರತಮ್ಯವಿಲ್ಲದೆ ಎಲ್ಲರೂ ಒಟ್ಟಿಗೆ ಕೈಜೋಡಿಸಿ ಪರಸ್ಪರ ಸಹಕಾರದಿಂದ ಕೆಲಸ ಮಾಡಿದಾಗ ಮಾತ್ರ ಬ್ಯಾಂಕಿನಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡಬಹುದು ಎಂದು ಹೇಳಿದರು.
ಸಿಬ್ಬಂದಿಗಳಿಗೆ ಕೆಲಸ ಮಾಡುವ ಹುಮ್ಮಸ್ಸು, ಉತ್ಸಾಹದ ಜೊತೆಗೆ ಬದ್ದತೆ ಇರಬೇಕು. ಪ್ರತಿ ವರ್ಷವೂ ವಲಯೋತ್ಸವ ಆಚರಿಸುವ್ಯುದರಿಂದ ಪರಸ್ಪರ ಪರಿಚಯ, ವಿಚಾರ ವಿನಿಮಯ ಮಾಡಿಕೊಳ್ಳಲು ನೆರವಾಗಲಿದೆಯಲ್ಲದೆ ನಾಯಕತ್ವದ ಗುಣ ಬೆಳೆಯುತ್ತದೆ ಎಂದು ಸಿಬ್ಬಂದಿಗಳಿಗೆ ತಿಳಿಸಿದರು
ವರ್ಷವಿಡಿ ಬ್ಯಾಂಕಿನಲ್ಲಿ ಕೆಲಸ ಮಾಡಿ ದಣಿಯುವ ಸಿಬ್ಬಂದಿಗಳಿಗೆ ಹಾಗೂ ಕುಟುಂಬದವರಿಗೆ ವರ್ಷಕ್ಕೊಮ್ಮೆ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಕ್ರೀಡೆಗಳನ್ನು ಏರ್ಪಡಿಸುವುದರಿಂದ ಮನಸ್ಸಿಗೆ ಮನರಂಜನೆ ಸಿಗುತ್ತದೆ. ಜೊತೆಗೆ ನಿಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿಕೊಳ್ಳಲು ಇದೊಂದು ಅವಕಾಶ ಎಂದು ಹೇಳಿದರು.
ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‍ನ ಪ್ರಧಾನ ವ್ಯವಸ್ಥಾಪಕ ರವೀಂದ್ರನಾಥ್, ಶೈಲೇಂದ್ರ ಉಡುಪ, ಸಹಾಯಕ ಪ್ರಧಾನ ವ್ಯವಸ್ಥಾಪಕ ಜಿ.ಆರ್.ಮಂಜುನಾಥ್, ನಬಾರ್ಡ್‍ನ ಮಾಲಿನಿ ಸುವರ್ಣ, ತಿಪ್ಪೇಸ್ವಾಮಿ, ಗೋಪಾಲಾಚಾರ್ ವೇದಿಕೆಯಲ್ಲಿದ್ದರು.ಸಾಂಸ್ಕತಿಕ ಕಾರ್ಯಕ್ರಮ ಹಾಗೂ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
