ಕೊರಟಗೆರೆ
ರಾತ್ರಿ ಹಗಲು ಎನ್ನದೇ ಕಷ್ಟಪಟ್ಟು ಹತ್ತಾರು ವರ್ಷ ಸತತ ಪರಿಶ್ರಮದಿಂದ ಪೋಷಣೆ ಮಾಡಿ ಬೆಳೆಸಲಾಗಿದ್ದ ಲಕ್ಷಾಂತರ ಮೌಲ್ಯದ ಅಡಿಕೆ, ಬಾಳೆ ಮತ್ತು ತೆಂಗಿನ ತೋಟಕ್ಕೆ ಘನತ್ಯಾಜ್ಯ ವಸ್ತು ಘಟಕದಲ್ಲಿ ಬೆಂಕಿ ಕಾಣಿಸಿಕೊಂಡು ಬೆಂಕಿಯ ಜ್ವಾಲೆಯು ರೈತರ ಬೆಳೆಗಳಿಗೆ ಆವರಿಸಿದ ಪರಿಣಾಮ ಗಡಿಭಾಗದ ರೈತ ಕುಟುಂಬಗಳು ಬೀದಿಗೆ ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿ ರೈತ ರಂಗಪ್ಪ ವಿಷ ಕುಡಿದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತೀರುವ ಘಟನೆ ವರಧಿಯಾಗಿದೆ.
ತಾಲೂಕಿನ ಕೋಳಾಲ ಹೋಬಳಿ ವ್ಯಾಪ್ತಿಯ ಕಾಟೇನಹಳ್ಳಿ ಸಮೀಪ ಕಳೆದ 10ವರ್ಷದ ಹಿಂದೆ ನಿರ್ಮಾಣವಾದ ಘನತ್ಯಾಜ್ಯ ವಸ್ತುಗಳ ವಿಲೇವಾರಿ ಮತ್ತು ತಯಾರಿಕೆ ಘಟಕ ಸ್ಥಳೀಯರ ವಿರೋಧದಿಂದ ಕಳೆದ ಆರು ವರ್ಷಗಳ ಹಿಂದೆ ಸ್ಥಗೀತವಾಗಿದೆ. ಆದರೇ ಕಳೆದ ಮೂರು ವರ್ಷಗಳಿಂದ ಕಾರ್ಖಾನೆಯೊಳಗೆ ನೂರಾರು ಲೋಡ್ ವೇಸ್ಟ್ ಪ್ಲಾಸ್ಟಿಕ್, ಎಲೆಕ್ಟ್ರಾನಿಕ್ ಮಿಷಿನ್, ವೈರ್, ಮೇಡಿಕಲ್ ತ್ಯಾಜ್ಯವನ್ನು ಶೇಖರಣೆ ಮಾಡಿ ಇಡಲಾಗಿದೆ.
ಕಳೆದ ಆರು ವರ್ಷದ ಹಿಂದೆ ಸ್ಥಗೀತವಾದ ಕಾರ್ಖಾನೆಯನ್ನು ಮತ್ತೇ ಪ್ರಾರಂಭ ಮಾಡಲು ಕಾರ್ಖಾನೆಯಲ್ಲಿ ಶೇಖರಣೆ ಮಾಡಲಾಗಿದ್ದ ಘನತ್ಯಾಜ್ಯ ವಸ್ತು ಮತ್ತು ಇ-ವೇಸ್ಟ್ನ್ನು ಕಾರ್ಖಾನೆ ಆವರಣದಲ್ಲಿ ಸುರಿಯಲಾಗಿದೆ. ವರಮಹಾಲಕ್ಷ್ಮೀ ಹಬ್ಬದ ದಿನ ತ್ಯಾಜ್ಯಕ್ಕೆ ಕಿಡಿಗೇಡಿಗಳು ರಾತ್ರೋರಾತ್ರಿ ಬೆಂಕಿ ಇಟ್ಟಿದ್ದಾರೆ. ಬೆಂಕಿ ಯಜ್ವಾಲೆಯಿಂದ ಬಿಡುಗಡೆಯಾದ ವಿಷಾನೀಲ ಅಡಿಕೆ, ತೆಂಗು, ಬಾಳೆ ತೋಟ ಸೇರಿ ಮುಸುಕಿನ ಜೋಳ, ಬದನೆ ಗಿಡಗಳಿಗೆ ಆವರಿಸಿದ ಪರಿಣಾಮ ರೈತರಿಗೆ ಲಕ್ಷಾಂತರರೂ ನಷ್ಟವಾಗಿದೆ.
ಸ್ಥಳೀಯರ ವಿರೋಧದಿಂದ ಸ್ಥಗೀತವಾಗಿರುವ ಕಾರ್ಖಾನೆಯ ಮಾಲೀಕ ಬೆಂಗಳೂರಿನ ಎಂ.ಸಿ.ಚಂದ್ರಶೇಖರ್ನಿಂದ ತುಮಕೂರು ಮೂಲದ ಎಸ್.ಶಿವಕುಮಾರ್ ಎಂಬುವರು ಕ್ರಯಕ್ಕೆ ಪಡೆದು ಸದರಿ ಸ್ವತ್ತಿನಲ್ಲಿ ಅಲ್ಯೂಮಿನಿಯಂ ಉತ್ಪನ್ನಗಳನ್ನು ತಯಾರಿಸಲು ಪರವಾನಗಿ ಪಡೆಯಲು ಗ್ರಾಪಂಗೆ ಅರ್ಜಿ ಸಲ್ಲಿಸಿದ್ದಾರೆ. ಕಾರ್ಖಾನೆ ನಡೆಸುವ ಮಾಲೀಕನಿಗೆ ಕೈಗಾರಿಕೆ ಮತ್ತು ವಾಯುಮಾಲಿನ್ಯ ಇಲಾಖೆಯಿಂದ ಪರವಾನಗಿ ಪಡೆದು ನೀಡುವಂತೆ ಗ್ರಾಪಂ ಸೂಚಿಸಿ ಪರವಾನಗಿಯನ್ನು ತಡೆಹಿಡಿದಿದ್ದಾರೆ.
ಬೆಂಗಳೂರು, ದೇವನಹಳ್ಳಿ, ದೊಡ್ಡಬಳ್ಳಾಪುರ, ದಾಬಸ್ಪೇಟೆ ಸಮೀಪದ ಪ್ಯಾಕ್ಟರಿಯಲ್ಲಿನ ಇ-ವೇಸ್ಟ್ ಮತ್ತು ಘನತ್ಯಾಜ್ಯ ವಸ್ತುಗಳನ್ನು ಕೋಳಾಲ ಬಳಿಯ ಕಾಟೇನಹಳ್ಳಿ ಗ್ರಾಮದ ಕೆರೆಗಳ ಸಮೀಪ ಮತ್ತುರಸ್ತೆ ಬದಿಗಳಲ್ಲಿ ಸುರಿದಿರುವ ಪರಿಣಾಮ ದುರ್ವಾಸನೆ ಬೀರುತ್ತೀದೆ. ಕೆರೆಯಲ್ಲಿ ನೀರು ಕುಡಿದ ಜಾನುವಾರುಗಳಿಗೆ ವಿವಿಧ ರೀತಿಯ ಖಾಯಿಲೆಗಳು ಅಂಟಿಕೊಳ್ಳುತ್ತೀವೆ. ಇನ್ನೂ ಬೆಂಕಿ ಇಟ್ಟಿರುವ ಕಾರ್ಖಾನೆಯ ಸಮೀಪ ರೈತರ ಬೆಳೆನಷ್ಟ ವಿಕ್ಷಣೆಗೆ ಅಧಿಕಾರಿಗಳು ಹೋದರೆ ಮತ್ತೇ ಆಸ್ಪತ್ರೆಗೆದಾಖಲು ಆಗುವಷ್ಟು ದುರ್ವಾಸನೆ ಬೀರುತ್ತೀದೆ.
ರೈತರ ತೋಟ ಮತ್ತು ಜಮೀನಿನ ಸಮೀಪ ಘನತ್ಯಾಜ್ಯ ಪ್ಯಾಕ್ಟರಿ ತೆರೆಯಲು ಅನುಮತಿ ಇಲ್ಲದೇ ರೈತರಿಗೆ ಮಾರಕವಾದ ಪ್ಯಾಕ್ಟರಿ ಮಾಲೀಕರ ವಿರುದ್ದ ಈಗಾಗಲೇ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರು, ದೊಡ್ಡಬಳ್ಳಾಪುರ ಮತ್ತು ತುಮಕೂರು ಮೂಲದ ಉದ್ಯಮಿಗಳು ಹಣ ಸಂಪಾದನೆ ಮಾಡುವ ಏಕೈಕ ದುರುದ್ದೇಶದಿಂದ ರೈತನ ಜೀವನದ ಜೊತೆಯೇ ಚೆಲ್ಲಾಟವಾಡಿ ಈಗ ಕಾಣೆಯಾಗಿದ್ದಾರೆ. ಕಾರ್ಖಾನೆ ತೆರೆಯಲು ಅನುಮತಿ ಇಲ್ಲದೇ ರೈತರಿಗೆ ನಷ್ಟ ಉಂಟುಮಾಡಿದ ಉದ್ಯಮಿಗಳ ವಿರುದ್ದ ಸೂಕ್ತ ಕ್ರಮ ಕೈಗೊಂಡು ನಷ್ಟವಾದ ರೈತರಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕಾಗಿದೆ.
ಬೆಂಕಿಯ ಜ್ವಾಲೆಯಿಂದ ರೈತರ ತೋಟ ಮತ್ತು ಖುಷ್ಕಿ ಬೆಳೆಗಳು ನಾಶವಾಗಿರುವ ಬಗ್ಗೆ ರೈತರು ಪರಿಹಾರಕ್ಕಾಗಿ ದೂರು ನೀಡಿದ್ದಾರೆ. ಖಾಸಗಿ ಕಾರ್ಖಾನೆ ಮೇಲೆ ದೂರು ನೀಡಿರುವ ಪರಿಣಾಮ ತನಿಖೆ ಕೈಗೊಳ್ಳುವಂತೆ ಕೋಳಾಲ ಪೊಲೀಸ್ಠಾಣೆ ಸೂಚನೆ ನೀಡಿದ್ದೇನೆ. ಖಾಸಗಿ ಕಾರ್ಖಾನೆಯಿಂದ ನಷ್ಟವಾಗಿರುವ ಬೆಳೆಗಳಿಗೆ ಸರಕಾರದಿಂದ ಪರಿಹಾರ ನೀಡಲು ಅವಕಾಶವಿಲ್ಲ ಎಂದು ತಹಶಿಲ್ದಾರ್ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








