ಹಗರಿಬೊಮ್ಮನಹಳ್ಳಿ:
ಪಟ್ಟಣದ ಎಂ.ವೈ.ಘೋರ್ಪಡೆ ಸಿಬಿಎಸ್‍ಇ ಶಾಲೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಪರಿಸರ ಕಳಜಿ ಮತ್ತು ಪರಿಸರ ಸಂರಕ್ಷಣೆಯ ಜವಾಬ್ದಾರಿಯಿಂದ ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸಲಾಗುತ್ತಿದೆ. ಅರಿವು ಮೂಡಿಸಲು ಬರಿ ಮಾತಿನಲ್ಲಿ ಇರದೇ ಅದರ ಕಾರ್ಯರೂಪಕ್ಕೆ ತರುವಲ್ಲಿ ನಮ್ಮ ಸಂಸ್ಥೆಯು ಪ್ರತಿ ವರ್ಷ ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸುವುದರ ಜೊತೆಗೆ ಪರಿಸರ ಜಾಗೃತಿ ಮೂಡಿಸುವ ಅಂಶಗಳನ್ನು ಬೋಧಿಸಲಾಗುತ್ತಿದೆ ಎಂದು ಆಡಾಳಿತಾಧಿಕಾರಿ ಶ್ರೀ ಹಫೀಜ್ ಶೇಕ್ ಕಾರ್ಯಕ್ರಮದ ಕುರಿತು ನುಡಿದರು.
ಗಣೇಶ ಹಬ್ಬ ಮತ್ತು ಹಬ್ಬಗಳ ಆಚರಣೆಗಳು ರಾಷ್ಟ್ರೀಯದೃಷ್ಟಿ, ಧಾರ್ಮಿಕದೃಷ್ಟಿಯ ಜೊತೆಗೆ ನಮ್ಮ ಪರಿಸರದ ಸಮತೋಲನ ಕಾಪಾಡಿಕೊಂಡು ಆರೋಗ್ಯ ಸಮೃದ್ಧಿಯ ನಾಂದಿಯಾಗಬೇಕಾಗಿದೆ. ಪಿಒಪಿ ಮತ್ತು ರಾಸಾಯನಿಕ ಮಿಶ್ರಿತ ಬಣ್ಣಗಳಿಂದ ಮಾಡಿದ ಗಣೇಶನ ಮೂರ್ತಿಗಳ ವಿಸರ್ಜನೆಯ ನಂತರ ಭಾವಿ, ಕೆರೆ, ನದಿಗಳು ಕಲುಷಿತವಾಗುವ ಜೊತೆಗೆ ಜಲಚರ ಪ್ರಾಣಿಗಳ ಸಂಕುಲಕ್ಕೆ ಮಾರಕವಾಗುವುದನ್ನು ತಡೆಯುವ ಕ್ರಮಗಳ ಬಗ್ಗೆ ನಮ್ಮ ಶಾಲೆಯ ಮಕ್ಕಳಿಗೆ ಮತ್ತು ಪಾಲಕರಿಗೆ ವಿಶೇಷ ಉಪನ್ಯಾಸ ನೀಡಲಾಗಿದೆ ಎಂದು ತಿಳಿಸಿದರು.
ಸಮೃದ್ಧವಾಗಿ ಬೆಳೆದ ಬೆಟ್ಟಗುಡ್ಡಗಳ ಮಡಿಲನಲಿ ಸಿರಿಧಾನ್ಯಗಳಿಂದ ಕೂಡಿದ ಮಣ್ಣಿನ ಗಣೇಶನ ಪ್ರತಿಷ್ಟಾಪಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಶ್ರೀಮತಿ ನಿಲಂ ಹೇಮ, ಶಿಕ್ಷಕರಾದ ಸುಭಾಷ್‍ಚಂದ್ರ, ಸಂತೋಷ್, ಜಂಬುಲಿಂಗ, ಶಿಕ್ಷಕಿಯರಾದ ಚಂದ್ರಮ್ಮ, ಶೋಭಾ, ಅಪ್ರೋಜ್, ಆಯಿಶಾ ಇದ್ದರು. ವಿದ್ಯಾರ್ಥಿನಿ ಎಂ. ಶಾಂತ ಸ್ವಾಗತಿಸಿ, ವಿದ್ಯಾರ್ಥಿ ಭರತ್ ವಂದಿಸಿದರು ಕನ್ನಡ ಶಿಕ್ಷಕರಾದ ಶಿವಶಂಕ್ರಯ್ಯ ನಿರೂಪಣೆ ಮಾಡಿದರು.