ಚಿರಂಜೀವಿ ಅಭಿಮಾನಿಗಳಿಂದ ಸಂತ್ರಸ್ತರಿಗೆ ನಿಧಿ ಸಂಗ್ರಹ

ಪಾವಗಡ

             ಸಿನಿಮಾದಲ್ಲಿ ನಟಿಸುವ ಚಿತ್ರನಟರು ಸಾಮಾಜಿಕವಾಗಿ ಕೈಗೊಂಡ ಕಾರ್ಯಕ್ರಮಗಳನ್ನು ಅಭಿಮಾನಿಗಳಾದವರು ಮುಂದುವರೆಸಿಕೊಂಡು ಹೋಗುವುದೆ ನಿಜವಾದ ಅಭಿಮಾನ ಎಂದು ಪಾವಗಡ ತಾಲ್ಲೂಕು ಮೆಗಸ್ಟಾರ್ ಚಿರಂಜೀವಿ ಅಭಿಮಾನಿ ಸಂಘದ ಗೌರವಾಧ್ಯಕ್ಷ ಡಿ.ಸಿ.ಸಿ. ಬ್ಯಾಂಕ್ ಸೀನಪ್ಪ ತಿಳಿಸಿದರು.

              ಬಧವಾರ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲಾ ಮೈದಾನದಲ್ಲಿರುವ ಮ್ಯಾರಥಾನ್ ಬಯಲುರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ತೆಲುಗು ಚಿತ್ರನಟ ಮಾಜಿ ಕೇಂದ್ರ ಸಚಿವ ಮೆಗಾಸ್ಟಾರ್ ಚಿರಂಜೀವಿಯ 63 ನೆ ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಕೊಡಗಿನ ನೆರೆ ಸಂತ್ರಸ್ತರಿಗೆ ನಿಧಿಸಂಗ್ರಹ ಹಾಗೂ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಚಿತ್ರನಟರು ನಿಜ ಜೀವನದಲ್ಲಿ ಮಾಡುವ ಸಾಮಾಜಿಕ ಕಾರ್ಯಕ್ರಮಗಳನ್ನು ಅನುಕರಣೆ ಮಾಡಿ ಎಂದು ತಿಳಿಸಿದರು.

              ಸಂಘದ ಅಧ್ಯಕ್ಷ ಮಾನಂಶಶಿಕಿರಣ್ ಮಾತನಾಡಿ, ಚಿರಂಜೀವಿಯವರು ಮದರ್‍ಥೇರೇಸಾ ಹೆಸರಿನ ಸ್ವಯಂಸೇವಾ ಸಂಸ್ಥೆಯಿಂದ ಉಚಿತ ನೇತ್ರ ಮತ್ತು ಉಚಿತ ರಕ್ತದಾನ ಶಿಬಿರಗಳನ್ನು ಹಮ್ಮಿಕೊಂಡು, ಬ್ಲಡ್ ಬ್ಯಾಂಕ್ ಸ್ಥಾಪಿಸಿ, ಅದರ ಮೂಲಕ ಸಾವಿರಾರು ರೋಗಿಗಳಿಗೆ ಪ್ರಾಣದಾತರಾಗಿದ್ದರೆ ಎಂದು ಕೊಂಡಾಡಿದರು.

              ಲಂಡನ್‍ನ ಡಾ. ಪ್ರಭಾಕರರೆಡ್ಡಿ ಮಾತನಾಡಿ, ಕೊಡಗಿನ ನೆರೆ ಸಂತ್ರಸ್ತರಿಗೆ ಪ್ರತಿಯೊಬ್ಬರು ಸಹಾಯಹಸ್ತ ನೀಡಬೇಕೆಂದು ಮನವಿ ಮಾಡಿಕೊಂಡರು.

               ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಎನ್.ಸಿ.ಸಿ. ಅಧಿಕಾರಿ ಧನಂಜಂiÀi, ಯುವಕಾಂಗೈ ಅಧ್ಯಕ್ಷ ಅನಿಲ್, ಸಂಘದ ಉಪಾಧ್ಯಕ್ಷ ಚಂದು, ಎಸ್.ಎಸ್.ಕೆ. ಕಾಲೇಜಿನ ಉಪನ್ಯಾಸಕ ವಿನಯ್, ಪತ್ರಕರ್ತ ಸತ್ಯಲೋಕೇಶ್, ರೋಟರಿಕ್ಲಬ್ ಅಧ್ಯಕ್ಷ ಮಹಮದ್‍ಇಮ್ರಾನ್ ಮಾತನಾಡಿದರು. ಎನ್.ಸಿ.ಸಿ. ವಿದ್ಯಾರ್ಥಿಗಳಿಂದ ಶಾಲಾ ಮೈದಾನದಲ್ಲಿ ಸಸಿ ನೆಡಲಾಯಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗೆ ಹಮ್ಮಿಕೊಂಡಿದ್ದ ಮ್ಯೂಸಿಕಲ್ ಚೇರ್ ಕ್ರೀಡಾ ಕೂಟದಲ್ಲಿ ಮೊದಲನೆ ಸ್ಥಾನ ಪಡೆದ ಸರ್ಕಾರಿ ಮಹಿಳಾ ಪ್ರಥಮದರ್ಜೇ ಕಾಲೇಜಿನ ವಿದ್ಯಾರ್ಥಿನಿ ಮೋನಿಕಾ ಮೊಬೈಲ್‍ನ್ನು ಮತ್ತು 2ನೆ ಸ್ಥಾನ ಪಡೆದ ಉಮಾ ಡ್ರೆಸ್‍ನ್ನು ಬಹುಮಾನವಾಗಿ ಪಡೆದರು. ಕಾರ್ಯಕ್ರಮದ ಅಂಗವಾಗಿ ಅನ್ನದಾನ ಮತ್ತು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

Recent Articles

spot_img

Related Stories

Share via
Copy link