ಕೊಪ್ಪಳ:
ಆ.31ಕ್ಕೆ ನಗರಸಭೆಗೆ ನಡೆದ ಚುನಾವಣೆಯಲ್ಲಿ ಒಬ್ಬರು ಅಭ್ಯರ್ಥಿ ಕೇವಲ ಅದೃಷ್ಟದ ಮುಖಾಂತರವೇ ಗೆದ್ದಿದ್ದಾರೆ.ನಗರಸಭೆ ಚುನಾವಣೆಗೆ ವಾರ್ಡ್ ನಂ 5ರಿಂದ ಸ್ಪರ್ಧಿಸಿದ್ದ ರೇಣುಕಾ ಪೂಜಾರಿ ಮತ್ತು ವಿದ್ಯಾ ಸುನಿಲ್ ಅವರು ಇಬ್ಬರೂ ಅಭ್ಯರ್ಥಿಗಳು ಸಮನಾಗಿ 233 ಮತಗಳನ್ನು ಗಳಿಸಿದರು. ಸಮನಾಗಿ ಮತ ಬಂದ ಕಾರಣಕ್ಕೆ ಮತೆಣಿಕೆ ಕಾರ್ಯದ ಮುಖ್ಯಾಧಿಕಾರಿ ಚೀಟಿ ಮೂಲಕ ವಿಜೇತರನ್ನು ಆಯ್ಕೆ ಮಾಡಲು ಚೀಟಿ ಹಾಕಿದರು. ಬಿಜೆಪಿಯ ವಿದ್ಯಾ ಸುನಿಲ್ ಅವರ ಅದೃಷ್ಟ ಚೆನ್ನಾಗಿದ್ದು ಅವರು ಚೀಟಿ ಪ್ರಕ್ರಿಯೆಯಲ್ಲಿ ಆಯ್ಕೆಯಾದರು.
ಇನ್ನೊಂದು ಕಡೆ ಮದ್ದೂರಿನ ಪುರಸಭೆಯ ವಾರ್ಡ್ 9 ರಿಂದ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿ ರತ್ನಾ ಅವರು ತಮ್ಮ ಪ್ರತಿಸ್ಪರ್ಧಿಯಷ್ಟೆ ಮತ ಗಳಿಸಿದ್ದರು ಹಾಗಾಗಿ ಚೀಟಿ ಹಾಕಲಾಯಿತು. ಅದರಲ್ಲಿ ರತ್ನಾ ಅವರು ವಿಜಯಿಯಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ