ಮಂಗಳೂರು:
ಮುಂಡದಿಂದ ರುಂಡವನ್ನು ಪ್ರತ್ಯೇಕ ಮಾಡಿ ಮಹಿಳೆಯನ್ನು ಭೀಕರವಾಗಿ ಕೊಲೆ ಮಾಡಿರುವ ಮಂಗಳೂರಿನ ಅತ್ತಾವರ ಬಳಿ ನಡೆದಿದೆ.ದೇಹದಿಂದ ತಲೆಯನ್ನು ಕತ್ತರಿಸಿ ಮಹಿಳೆಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ತುಂಡರಿಸಿದ ದೇಹ ಗೋಣಿ ಚೀಲದಲ್ಲಿ ಪತ್ತೆಯಾದರೆ, ಹೆಲ್ಮೆಟ್ನಲ್ಲಿ ತಲೆ ಪತ್ತೆಯಾಗಿದೆ.
ದುಷ್ಕರ್ಮಿಗಳು ಮಹಿಳೆಯನ್ನು ಆತ್ಯಾಚಾರ ಮಾಡಿ ದೇಹವನ್ನು ನಗ್ನ ರೀತಿಯಲ್ಲಿ ಕೊಲೆ ಮಾಡಿರುದಾಗಿ ಶಂಕೆ ವ್ಯಕ್ತವಾಗಿದೆ. ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಹಿಳೆಯ ತಲೆ ಕದ್ರಿಯ ಕೆಪಿಟಿ ಸನಿಹದ ಎಂ.ಆರ್.ಪಿ.ಎಲ್ . ಪೆಟ್ರೋಲ್ ಬಂಕ್ ಸಮೀಪ ಗೂಡಂಗಡಿ ಪಕ್ಕ ಪತ್ತೆಯಾಗಿತ್ತು. ಪಕ್ಕದಲ್ಲೇ ಗೋಣಿ ಚೀಲದಲ್ಲಿ ದೇಹದ ಛಿದ್ರ ಛಿದ್ರವಾಗಿದ್ದ ಅಂಗಗಳು ಪತ್ತೆಯಾಗಿದ್ದವು.ಕೊಲೆಗೀಡಾದ ಮಹಿಳೆಯನ್ನು ಅತ್ತಾವರದ ಅಮರ್ ಆಳ್ವಾ ರಸ್ತೆಯ ನಿವಾಸಿ ಶ್ರೀಮತಿ ಶೆಟ್ಟಿ ಎಂದು ಗುರುತಿಸಲಾಗಿದೆ.
ಕೊಲೆಗೀಡಾದ ಶ್ರೀಮತಿ ಶೆಟ್ಟಿ ಅವರು ತನ್ನ ಪತಿಗೆ ವಿಚ್ಛೇದನೆ ನೀಡಿದ್ದು , ಅವರ ಪತಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.