ಕೊಟ್ಟೂರು:
ಪಟ್ಟಣ ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಕಡ್ಡಾಯವಾಗಿ ದಿನದ ಖರ್ಚಿನ ದಾಖಲೆಯನ್ನು ಚುನಾವಣಾ ವೆಚ್ಚದ ವಿಭಾಗಕ್ಕೆ ಸಲ್ಲಿಸಬೇಕು ಎಂದು ತಹಶೀಲ್ದಾರ ಕೆ. ಮಂಜುನಾಥ್ ತಿಳಿಸಿದರು.
ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಶುಕ್ರವಾರ ಪಟ್ಟಣ ಪಂಚಾಯ್ತಿಗೆ ಸ್ಪರ್ಧಿಸಿರುವ ಎಲ್ಲಾ ಅಭ್ಯರ್ಥಿಗಳಿಗೆ ಚುನಾವಣಾ ನೀತಿ ಸಂಹಿತಿ ಕುರಿತು ಮಾಹಿತಿ ನೀಡಿದರು.
ಮತದಾರರಿಗೆ ಆಮಿಷ ಒಡ್ಡುವುದು. ದೇವಸ್ಥಾನ, ಮಸೀದಿ, ಮಂದಿರದಲ್ಲಿ ಮತದಾರರನ್ನು ಕರೆಸಿ ಆಣೆ ಮಾಡಿಸುವುದರ ಬಗ್ಗೆ ದೂರು ಬಂದಲ್ಲಿ. ಕ್ರಮ ಕೈಗೊಳ್ಳಲಾಗುವುದು ಎಂದರು.
ಅಭ್ಯರ್ಥಿಗಳು ಪ್ರಚಾರ ಕರಪತ್ರವನ್ನು ಮುದ್ರಿಸಲು ಚುನಾವಣಾ ಅಧಿಕಾರಿಗಳಿಂದ ಅನುಮತಿ ಪಡೆಯಬೇಕು. ಒಂದು ಪ್ರತಿಯನ್ನು ಚುನಾವಣಾ ಅಧಿಕಾರಿಗೆ ಸಲ್ಲಿಸಬೇಕು.
ಮಾಜಿ ಪ.ಪಂ. ಸದಸ್ಯರು ತಮ್ಮ ಅಧಿಕಾರವಧಿಯಲ್ಲಿ ಆಗಿರುವ ಕಾಮಗಾರಿಗಳು ಮತ್ತು ಅಭಿವೃದ್ದಿ ಕಾರ್ಯಕ್ರಮಗಳ ಛಾಯಾಚಿತ್ರವನ್ನು ಮುದ್ರಿಸಿ ಕರಪತ್ರವನ್ನು ಹಂಚುವುದು ಅಪರಾಧವಾಗುತ್ತಿದೆ. ಅಂತಹದ್ದು ಕಂಡು ಬಂದಲ್ಲಿ, ದೂರು ನೀಡಿದರೆ, ಆ ಅಭ್ಯರ್ಥಿಯ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಚುನಾವಣಾ ವೆಚ್ಚ ಪರಿಶೀಲಾನಾಧಿಕಾರಿ ಸೂರ್ಯನಾರಾಯಣ, ಒಬ್ಬ ಅಭ್ಯರ್ಥಿ ಒಂದು ಲಕ್ಷ ರು. ಖರ್ಚು ಮಾಡಲು ಆವಕಾಶವಿದೆ. ಪ್ರತಿ ದಿನ ಖರ್ಚಾದ ಹಣಕ್ಕೆ ದಾಖಲೆ ನೀಡಬೇಕು. ಲೆಕ್ಕವನ್ನು ಅಭ್ಯರ್ಥಿ ಪರವಾಗಿ ಅವರ ಸ್ನೇಹಿತರು ಕೊಡಲು ಅವಕಾಶವಿದೆ ಎಂದರು.
ಚುನಾವಣಾ ವೀಕ್ಷಕಿ ಬಿ. ಶೋಭಾ, ತಹಶೀಲ್ದಾರ ಕೆ.ಮಂಜುನಾಥ ಮತ್ತು ಚುನಾವಣಾಧಿಕಾರಿಗಳೊಂದಿಗೆ ಮತಕೇಂದ್ರಗಳಿಗೆ ತೆರಳಿ ಪರಿಶೀಲಿಸಿದರು.
ಚುನಾವಣಾಧಿಕಾರಿಗಳಾದ ಪ್ರಕಾಶ, ಸುಧೀರ, ಸಹಾಯಕ ಚುನಾವಣಾಧಿಕಾರಿಗಳಾದ ಗೊಂದಿ ಮಂಜುನಾಥ, ನಾಗನಗೌಡ ಮತ್ತು ಪಿಎಸ್ಐ ತಿಮ್ಮಣ್ಣ ಚಾಮನೂರು ಇದ್ದರು. .ಕಾಂಗ್ರೇಸ್, ಬಿಜೆಪಿ, ಜೆಡಿಎಸ್, ಪಕ್ಷೇತರ ಅಭ್ಯರ್ಥಿಗಳು ಹಾಗೂ ಏಜೆಂಟರು ಹಾಜರಿದ್ದರು.
ಕೊಟ್ಟೂರಿನ ತಹಶೀಲ್ದಾರ ಕಚೇರಿಯಲ್ಲಿ ಶುಕ್ರವಾರ ಕರೆದಿದ್ದ ಚುನಾವಣಾ ಆಭ್ಯರ್ಥಿಗಳ ನೀತಿ ಸಂಹಿತಿ ಸಭೆಯಲ್ಲಿ ತಹಶೀಲ್ದಾರ ಕೆ. ಮಂಜುನಾಥ ಮತ್ತು ಚುನಾವಣಾ ವೆಚ್ಚ ಪರಿಶೀಲನಾ ಅಧಿಕಾರಿ ಸೂರ್ಯನಾರಾಯಣ ಅಭ್ಯರ್ಥಿಗಳ ಪ್ರಶ್ನೆಗೆ ಉತ್ತರಿಸಿದರು. ಚುನವಣಾ ವೀಕ್ಷಕರಾದ ಬಿ. ಶೋಭಾ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ