ಹಗರಿಬೊಮ್ಮನಹಳ್ಳಿ:
ಲೋಕಸಭಾ ಚುನಾವಣೆಯ ಕಣದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪನವರ ಪರ ಶಾಸಕ ಎಸ್.ಭೀಮಾನಾಯ್ಕ್ ಚುನಾವಣೆ ಮಾಡುವುದಾದರೆ ಮಾಡಲಿ ಇಲ್ಲವಾದರೆ ಮನೆಯಲ್ಲಿ ತೆಪ್ಪಗಿರಲಿ, ಅಭ್ಯರ್ಥಿ ಉಗ್ರಪ್ಪರ ಉಪಚುನಾವಣೆಗಿಂತ ಸಾವಿರ ಮತಗಳನ್ನು ಹೆಚ್ಚು ಪಡೆಯುವ ಮೂಲಕ ಅವರ ಗೆಲುವಿಗಾಗಿ ಕಾಂಗ್ರೆಸ್‍ನ ನಾವು ಶ್ರಮಿಸುತ್ತೇವೆ ಎಂದು ಮಾಜಿ ಶಾಸಕ ಸಿರಾಜ್‍ಶೇಕ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಹಳೇ ಊರಿನ ಸೈಯಾದ್ ಯೂಸೂಪ್ ಶಾಮಿಲ್‍ನಲ್ಲಿ ಸೇರಿದ್ದ, ಕೂಡ್ಲಿಗಿ ಕ್ಷೇತ್ರದ ಮಾಜಿ ಶಾಸಕ ಸಿರಾಜ್ ಶೇಕ್ ಅವರ ನೂರಾರು ಬೆಂಬಲಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಕರೆಯಲಾಗಿದ್ದ, ಪತ್ರಿಕಾಗೋಷ್ಠಿಯಲ್ಲಿ ಮೇಲಿನಂತೆ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಸೂರೇಶ್ ರಾಥೋಡ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷರಾದ ಸಿರಾಜ್‍ಶೇಕ್‍ರವರು ಈ ವಿಧಾನಸಭಾ ಕ್ಷೇತ್ರದ ಒಂದು ಶಕ್ತಿ, ಅವರ ಬಗ್ಗೆ ಶಾಸಕ ಎಸ್.ಭೀಮಾನಾಯ್ಕ ಅಪಪ್ರಚಾರಮಾಡುವುದು ಮತ್ತು ಹೇಳಿಕೆಗಳನ್ನು ಕೊಡುವುದು ಕೈಬಿಟ್ಟು ಲೋಕಸಭಾ ಅಭ್ಯರ್ಥಿ ವಿ.ಎಸ್.ಉಗ್ರಪ್ಪನವರ ಪರ ಗೆಲುವಿಗೆ ಎಲ್ಲರೂ ಸೇರಿ ಶ್ರಮಿಸೋಣ ಎಂದ ಅವರು, ಸಿರಾಜ್‍ಶೇಕ್‍ರವರು ಒಂದುವೇಳೆ ಪಕ್ಷವಿರೋಧಿ ಚಟುವಟಿಕೆ ಮಾಡಿದ್ದೇ ಆಗಿದ್ದರೆ, ಕ್ಷೇತ್ರದಲ್ಲಿ ಭೀಮಾನಾಯ್ಕರವರು ಗೆಲುವು ಕಷ್ಟವಾಗುತ್ತಿತ್ತು ಎಂದು ಸ್ಪಷ್ಟಪಡಿಸಿದರು.
ಡಣಾಪುರ ಗ್ರಾ.ಪಂ.ಅಧ್ಯಕ್ಷರಾದ ಗಾಳೆಪ್ಪ ಮಾತನಾಡಿ, ಶಾಸಕರಾದವರು ಅಧಿಕಾರಕ್ಕಾಗಿ ತಾವೇನುಮಾಡಬೇಕು ಅದನ್ನೆಲ್ಲಾ ಮಾಡಿ, ಈಗ ಕಾಂಗ್ರೆಸ್ ಪಕ್ಷಕ್ಕೆ ಬಂದು ಗೆದ್ದಿರುವುದನ್ನು ಮರೆತಂತಿದ್ದಾರೆ ಎಸ್.ಭೀಮಾನಾಯ್ಕ. ಕ್ಷೇತ್ರದ ಅಭಿವೃದ್ಧಿ ಮತ್ತು ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದು ಬಿಟ್ಟು ಈ ರೀತಿ ಪಕ್ಷದ ನಾಯಕರ ವಿರುದ್ಧ ಹೆಳಿಕೆಗಳನ್ನು ನೀಡುತ್ತಾ ಹೋದರೆ ದೊಡ್ಡಮನುಷ್ಯರಾಗುವುದಿಲ್ಲವೆಂದು ಲೇವಡಿ ಮಾಡಿದರು.
ಮುಸ್ಲಿಂ ಸಮುದಾಯದ ಅಧ್ಯಕ್ಷರಾದ ಮರಿಯಮ್ಮನಹಳ್ಳಿಯ ಇಮಾಮ್ ಸಾಬ್ ಈ ಮಧ್ಯೆ ಧ್ವನಿ ಗೂಡಿಸಿ ಮಾತನಾಡಿ, ಜಿಲ್ಲೆಯಲ್ಲಿ 4ಲಕ್ಷ ಸಮುದಾಯದ ಮತಗಳಿವೆ. ಅಲ್ಲದೆ, ಜಿಲ್ಲೆಯಲ್ಲಿ ಸಮುದಾಯದವರು ಯಾರು ಶಾಸಕರಾಗಿಲ್ಲ, ಕಾಂಗ್ರೆಸ್ ಪಕ್ಷದ ಯಾವುದೇ ಪ್ರಮುಖ ಹುದ್ದೆಯಲ್ಲಿಲ್ಲ. ಸಿರಾಜ್ ಶೇಕ್ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವುದೇ ತಪ್ಪೇ ಅದು ಅವರ ಸಾಧನೆ ಮತ್ತು ಸಮಘಟನೆಯ ಶಕ್ತಿಯನ್ನು ತಿಳಿದು ಪಕ್ಷದ ಹೈಕಮಾಂಡ್ ನೀಡಿರುವ ಹುದ್ದೆಯಾಗಿದೆ. ಇದನ್ನು ಸಹಿಸಿಕೊಳ್ಳದ ಶಾಸಕ ಎಸ್.ಭೀಮಾನಾಯ್ಕ ಪಕ್ಷ ಮೂಲಿಗುಂಪುಮಾಡುವ ಕುತಂತ್ರತೆಯನ್ನು ಹೊಂದಿದ್ದಾರೆ ಎಂದು ಟೀಕಿಸಿದರು.
ಮರಿಯಮ್ಮನಹಳ್ಳಿ ಪ್ರಕಾಶ್ ಮತ್ತು ದಶಮಾಪುರದ ಜಗದೀಶ ಮಾತನಾಡಿ, ಕಾಂಗ್ರೆಸ್‍ನಲ್ಲಿ ಭಿನ್ನಾಭಿಪ್ರಾಯ ಮತ್ತು ಭಿನ್ನಮತಬೇಡ, ಈ ರೀತಿಯ ಸಿರಾಜ್‍ಶೇಕ್ ಮೇಲೆ ಆರೋಪಮಾಡುವ ಮೊದಲು ತಾವು ಎಲ್ಲಿಂದ ಎಲ್ಲಿಯವರೆಗೆ ಎಷ್ಟು ಪಕ್ಷಗಳನ್ನು ಬದಲಾಯಿಸಿ ಮತ್ತೇ ಎಲ್ಲಿಗೆ ಬಂದಿದ್ದೀರಿ ಎಂಬುವ ಪ್ರಜ್ಞೆ ಇರಬೇಕು. ಬಾಯಿಗೆ ಬಂದಂತೆ ಸಿರಾಜ್‍ಶೇಕ್ ಮೇಲೆ ಆರೋಪಿಸಿ ಬ್ಲಾಕ್‍ಮೇಲ್ ಮಾಡುವ ತಂತ್ರಗಾರಿಕೆ ಬಿಡಿ, ಪಕ್ಷದ ಅಭ್ಯರ್ಥಿಗೆ ಹೆಚ್ಚುಮತ ತಂದುಕೊಡುವ ನಿಟ್ಟಿನಲ್ಲಿ ಪ್ರಯತ್ನಿಸಿ, ಇಲ್ಲ ಸುಮ್ಮನಿದ್ದುಬಿಡಲು ಭೀಮಾನಾಯ್ಕ್‍ಗೆ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಬ್ಲಾಕ್ ಮಾಜಿ ಅಧ್ಯಕ್ಷ ನಾಗರಾಜ್ ಜನ್ನು, ಸೈಯದ್ ಯೂಸೂಪ್, ಪತ್ರೇಶ್ ಹಿರೇಮಠ್, ಕುರುಬರ ವೆಂಕಟೇಶ್, ಏಕಾಂಬ್ರೆಸ್ ನಾಯ್ಕ, ಕಡಲಬಾಳು ವೆಂಕಟೇಶ್, ನಟರಾಜ ಬಂಗಾರಿ, ಆಟೋ ರಜಕ್, ಮಂಡಾಳ ಬಟ್ಟಿ ರೆಹಮಾನ್, ಎಣ್ಣಿ ಭಾಷ, ಮೆಕಾನಿಕ್ ಕರಿಂಸಾಬ್, ಎಣ್ಣಿದಾದಾಪೀರ್, ಸಿ.ಹುಲುಗಪ್ಪ ಮತ್ತಿತರರಿದ್ದರು.
“ಈ ಕ್ಷೇತ್ರದಲ್ಲಿ ಮೊದಲಬಾರಿಗೆ ಗೆದ್ದ ಭೀಮಾನಾಯ್ಕ ಯಾರ ಕೃಪಾಶೀರ್ವಾದಕ್ಕಾಗಿ ಮೊರೆಹೋಗಿದ್ದರು ಎಂಬುದನ್ನು ಮನಸಾಕ್ಷಿಯನ್ನೊಮ್ಮೆ ಕೇಳಿಕೊಳ್ಳಲಿ, ಬಿಜೆಪಿ ವಿರುದ್ಧ ಪುರಸಭೆ ಆಡಳಿತವನ್ನಿಡಿಯಲು ಜೆಡಿಎಸ್‍ನಲ್ಲಿದ್ದ ಶಾಸಕ ಸಿರಾಜ್ ಶೇಕ್‍ರೊಂದಿಗೆ ಮೈತ್ರಿ ಮಾಡಿಕೊಂಡಿರಲಿಲ್ಲವೇ? ಈಗ ಸಿರಾಜ್ ಶೇಕ್‍ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ. ಕ್ಷೇತ್ರಕ್ಕೆ ಅವರದೇ ಆದ ಅಪಾರವಾದ ಕೊಡುಗೆಯನ್ನು ನೀಡುವ ಮೂಲಕ ಜನಮನ್ನಣೆಯನ್ನು ಸಿರಾಜ್ ಶೇಕ್‍ಗಳಿಸಿದ್ದು ಈಗ ಅವರನ್ನು ಕೆಣಕುವುದು ಬಿಟ್ಟು ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಲಿ.”-ಸಂಪತ್‍ಕುಮಾರ್‍ನಾಯ್ಕ. ಕಾಂಗ್ರೆಸ್ ಪ್ರಚಾರ ಸಮಿತಿ ಕ್ಷೇತ್ರದ ಅಧ್ಯಕ್ಷ.