ಛತ್ತೀಸ್ ಗಢದ ಚುನ್ ಚುನಾದ ಮತಗಟ್ಟೆ ಬಳಿ ಸ್ಫೋಟ

ರಾಯ್ ಪುರ್:

   ಬಲರಾಂಪುರ ಜಿಲ್ಲೆಯ ಚುನ್ ಚುನಾದ ಮತಗಟ್ಟೆ ಬಳಿ ಬೆಳಗ್ಗೆ ಕಡಿಮೆ ತೀವ್ರತೆಯ ಬಾಂಬ್ ಸ್ಫೋಟ ಸಂಭವಿಸಿದೆ. ಆದರೆ, ಯಾವುದೇ ಹಾನಿಯಾಗಿಲ್ಲ. ಬಲರಾಂಪುರ್ ಜಿಲ್ಲೆಯ ಬಂದರ್ ಚುವಾ ಗ್ರಾಮದಲ್ಲಿ ಮತದಾನ ಪ್ರಕ್ರಿಯೆಗೆ ಯಾವುದೆ ಅಡ್ಡಿಯುಂಟಾಗಿಲ್ಲ ಇದರಿಂದ ಧೃತಿಗೆಡದ ಚುನಾವಣಾಧಿಕಾರಿಗಳು, ಮತಕೇಂದ್ರವನ್ನು ಬದಲಾಯಿಸಿ, ಮತದಾನಕ್ಕೆ ಅನುವು ಮಾಡಿಕೊಟ್ಟಿದ್ದಾರೆ. 

ಚುನಾ ಮತಗಟ್ಟೆ ಹಾಗೂ ಪುದಂಗ್ ಮತಗಟ್ಟೆ ಬಳಿ ಕಡಿಮೆ ತೀವ್ರತೆಯುಳ್ಳ ಬಾಂಬ್ ಸ್ಫೋಟವಾಗಿದ್ದು,  ಸ್ಫೋಟದ ನಂತರವೂ ಮತದಾರರು ಭಯಭೀತರಾಗದೆ ಬದಲಿ ಮತಕೇಂದ್ರದತ್ತ ಸಾಗಿ ಮತದಾನ ಮಾಡುತ್ತಿದ್ದಾರೆ ಎಂದು ವರದಿ ಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

 

Recent Articles

spot_img

Related Stories

Share via
Copy link
Powered by Social Snap