ಛಲವಾದಿ ಜನಾಂಗ ಸಂಘಟನೆ ಸದೃಢವಾಗಿ ಬೆಳೆಯಬೇಕು:ಶಾಂತವೀರ ಸ್ವಾಮೀಜಿ

ಸಿರಾ:

               ರಾಜ್ಯದಲ್ಲಿ ಪ್ರಬಲ ರಾಜಕೀಯ ಶಕ್ತಿಯನ್ನು ಹೋಂದಿರು ಛಲವಾದಿ ಜನಾಂಗ ಸಂಘಟನೆಮಾಡುವಲ್ಲಿ ವಿಫಲವಾಗಿದೆ,ಸಿರಾ ತಾಲ್ಲೂಕಿನ ಚನ್ನೇನಹಳ್ಳಿಯ ಛಲವಾದಿ ಜಗದ್ಗುರು ಪೀಠ ಈ ಸಮಾಜವನ್ನು ಸಂಘಟನೆ ಮಾಡಲು ಮಠ ಸದೃಢವಾಗಿ ಬೆಳೆಯಬೇಕು ಎಂದು ಹೊಸದುರ್ಗ ಕುಂಚಿಟಿಗರ ಮಾಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶಾಂತವೀರ ಸ್ವಾಮೀಜಿ ಹೇಳಿದರು,

                   ಸಿರಾ ತಾಲ್ಲೂಕಿನ ಚನ್ನೇನಹಳ್ಳಿ ಗ್ರಾಮದ ಛಲವಾದಿ ಜಗದ್ಗುರು ಪೀಠದಲ್ಲಿ ಭಾನುವಾರ ನಡೆದ ಭಕ್ತಿಸಂಗಮ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡುತ್ತ.ಈ ಸಮಾಜ ರಾಜಕೀಯವಾಗಿ ಉನ್ನತ ಸ್ಥಾನದಲ್ಲಿದೆ.ಅದರೆ ಜನಾಂಗ ಸಂಘಟನೆಯಲ್ಲಿ ಹಿಂದುಳಿದಿದೆ,ಸಮಾಜದ ಏಳಿಗೆಗಾಗಿ ಗುರು ಮತ್ತು ಗುರುಪೀಠ ಬೇಕು,ಗುರುಪೀಠದಿಂದ ಜನಾಂಗದ ಧಾರ್ಮಿಕ ಶಿಕ್ಷಣ ನೀಡುವಮೂಲಕ ಬೆಳೆಯ ಬೇಕು,ದೇಶಕ್ಕೆ ಸಂಮಿಧಾನ ಕೋಟ್ಟಂತ್ತ ಈ ಜನಾಂಗ ಸಂಘಟನೆಯಾಗದೆ ಸ್ವರಗುತ್ತಿದೆ,ಈ ಮಠವನ್ನು ಕಟ್ಟಿಬೆಳೆಸುವ ಜವಾಬ್ದಾರಿ ಎಲ್ಲಾ ಛಲವಾದಿ ಜನಾಂಗ ಮೇಲಿದೆ ಎಂದರು

                ಛಲವಾದಿ ಜಗದ್ಗುರು ಪೀಠ ಶ್ರೀಬಸವಲಿಂಗಮೂರ್ತಿ ಶರಣರು ಮಾತನಾಡಿ ನಮ್ಮ ಜನರು ಸ್ವಾಭಿಮಾನಿಗಳು ಹಠವಾದಿಗಳು,ಬುದ್ದಿವಂತರು,ವಿಧ್ಯವಂತರು ನೀವುಗಳು ಈ ಮಠವನ್ನು ಕಟ್ಟಿಬೆಳೆಸುವ ಜವಾಭ್ದಾರಿ ನಿಮ್ಮಮೇಲಿದೆ,ಎಲ್ಲಾ ವರ್ಗದ ಜಾತಿಗಳಲ್ಲಿ ಮಠಗಳಿವೆ ನಮ್ಮ ಜನಾಂಗದಲ್ಲಿ ಇಲ್ಲಿಯ ವರೆಗೆ ಒಂದೆ ಒಂದು ಜಗದ್ಗುರುಪೀಠ ಇಲ್ಲದೇ ನಮ್ಮ ಜನ ಸ್ವಾರಗುತ್ತಿದ್ದ್ರು,ಇನ್ನುಮುಂದೇಯಾದರು ಎಲ್ಲಾ ಛಲವಾದಿಗಳು ಹೊಂದಾಗಿ ಮಠ ಕಟ್ಟೋಣ ಎಂದರು.

               ಶಾಸಕರಾದ ಬಿ.ಸತ್ಯನಾರಾಯಣ್,ಐಮಂಗಲ ಬಸವಶಿವಶರಣ ಹರಳಯ್ಯ ಗುರುಪೀಠ ಶ್ರೀಹರಳಯ್ಯಸ್ವಾಮಿಜಿ,ಚಿತ್ರದುರ್ಗದ ಬಂಜಾರ ಗುರುಪೀಠದ ಶ್ರೀಸರ್ದಾರ್ ಸೇವಲಾಲ್ ಸ್ವಾಮಿಜಿ,ಮಾತನಾಡಿದರು.ಕಾರ್ಯಕ್ರಮದಲ್ಲಿ ಜಿಪಂನ ಮಾಜಿ ಉಪಾಧ್ಯಕ್ಷ ಮುಡಿಮಡು ರಂಗಸ್ವಾಮಿ,ಛಲವಾದಿ ಸಂಘದ ತಾಲ್ಲೂಕು ಅಧ್ಯಕ್ಷ ಜಯರಾಮು,ಮಹಾಲಕ್ಷ್ಮಿ,ತಿಪ್ಪೇಸ್ವಾಮಿ,ಯಲಪೇನಹಳ್ಳಿಯ ಜಯರಾಮು,ಶಂಕರ್ ಹಾರೋಗೆರೆ ಉಪಸ್ಥಿತರಿದ್ದರು,

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap