ಬೆಂಗಳೂರು:
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಉತ್ತಮ ಪ್ರದರ್ಶನವನ್ನು ‘ಜನತಾ ಜನಾರ್ಧನ’ನ ಗೆಲುವು ಎಂದು ಬಣ್ಣಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯದಲ್ಲಿ ಬಿಜೆಪಿಯ ‘ಕೆಟ್ಟ ಆಡಳಿತ’ದ ವಿರುದ್ಧ ಜನರು ‘ಉಗ್ರವಾಗಿ’ ಮತ ಚಲಾಯಿಸಿದ್ದಾರೆ ಎಂದು ಹೇಳಿದರು.
ನೂತನವಾಗಿ ಆಯ್ಕೆಯಾಗಿರುವ ಎಲ್ಲಾ ಕಾಂಗ್ರೆಸ್ ಶಾಸಕರು ಇಂದು ಸಂಜೆಯೊಳಗೆ ಬೆಂಗಳೂರಿಗೆ ಆಗಮಿಸುವಂತೆ ತಿಳಿಸಲಾಗಿದ್ದು, ಸರ್ಕಾರ ರಚನೆಯ ಸೂಕ್ತ ಪ್ರಕ್ರಿಯೆಯನ್ನು ಅನುಸರಿಸಲಾಗುವುದು ಎಂದರು.
‘ನಾವು ಎಲ್ಲರಿಗೂ ಇಂದು ಸಂಜೆಯೊಳಗೆ ಬನ್ನಿ ಎಂದು ಸಂದೇಶವನ್ನು ಕಳುಹಿಸಿದ್ದೇವೆ. ಅವರೆಲ್ಲರೂ ಇಂದು ಸಂಜೆಯೊಳಗೆ ಇಲ್ಲಿಗೆ ಬರುತ್ತಾರೆ ಮತ್ತು ಅವರು ಬಂದ ನಂತರ ಅವರಿಗೆ ಸರಿಯಾದ ಸಮಯದಲ್ಲಿ ಸೂಚನೆ ನೀಡಲಾಗುವುದು. ಅದರ ನಂತರ, ಹೈಕಮಾಂಡ್ ವೀಕ್ಷಕರನ್ನು ಕಳುಹಿಸುತ್ತದೆ. ನಂತರ ಸರ್ಕಾರ ರಚನೆಗೆ ಸರಿಯಾದ ಪ್ರಕ್ರಿಯೆಗಳನ್ನು ಅನುಸರಿಸಲಾಗುತ್ತದೆ’ ಎಂದು ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಗೆದ್ದವರನ್ನು ಅಭಿನಂದಿಸಿದ ಎಐಸಿಸಿ ಅಧ್ಯಕ್ಷರು, ಒಳ್ಳೆಯ ಕೆಲಸಕ್ಕೆ ಜನ ಬೆಂಬಲ ನೀಡುತ್ತಾರೆ; ಗೆದ್ದರೂ ಸೋತರೂ ಅವರ ಮಧ್ಯೆಯೇ ಇದ್ದು ಪ್ರಜಾಪ್ರಭುತ್ವದಲ್ಲಿ ಕೆಲಸ ಮಾಡಬೇಕು. ಕಾಂಗ್ರೆಸ್‌ನ ಸಂಪೂರ್ಣ ರಾಜ್ಯ ನಾಯಕತ್ವ ಮತ್ತು ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರನ್ನು ಶ್ಲಾಘಿಸಿದ ಅವರು, ‘ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಕೆಲಸ ಮಾಡಿದ್ದರಿಂದ ನಮಗೆ ಈ ಫಲಿತಾಂಶ ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ