ಜನರಲ್ಲಿ ಪರಸ್ಪರ ಮಾನವೀಯ ಮೌಲ್ಯಗಳು ಬೆಳೆಯಬೇಕು : ಕಲಾವಿದ ನಾದಮಣಿನಾಲ್ಕೂರು

ಹಿರಿಯೂರು:

              ಅಭಿವೃದ್ಧಿಪತದ್ದತ್ತ ಓಡುತ್ತಿರುವ ಇಂದಿನ ಸಮಾಜದ ಜನರಲ್ಲಿ ಮಾನವೀಯ ಮೌಲ್ಯಗಳು ದೂರವಾಗುತ್ತಿರುವುದು ನಿಜಕ್ಕೂ ವಿಶಾದಕರಸಂಗತಿ, ಈ ನಿಟ್ಟನಲ್ಲಿ ಸಮಾಜದಲ್ಲಿ ಶಾಂತಿ ನೆಮ್ಮದಿ ವಾತಾವರಣ ನಿರ್ಮಾಣವಾಗಬೇಕಾದರೆ ಜನರಲ್ಲಿ ಪರಸ್ಪರ ಮಾನವೀಯ ಮೌಲ್ಯಗಳು ಬೆಳೆಯಬೇಕು ಎಂಬುದಾಗಿ ಕತ್ತಲಹಾಡು ಖ್ಯಾತಿಯ ಕಲಾವಿದ ನಾದಮಣಿನಾಲ್ಕೂರು ಹೇಳಿದರು.

             ನಗರದ ರೋಟರಿ ಸಭಾಭವನದಲ್ಲಿ ರೋಟರಿ ಕ್ಲಬ್, ಕನ್ನಡ ಸಾಹಿತ್ಯ ಪರಿಷತ್, ಕಲಾಸಕ್ತ ಬಳಗದ ವತಿಯಿಂದ ಆಯೋಜಿಸಿದ್ದ ಕತ್ತಲಹಾಡು ಕಾರ್ಯಕ್ರಮದಲ್ಲಿ ಮಾನವೀಯ ಮೌಲ್ಯಗಳನ್ನು ಬೆಸೆಯುವ ಹಾಡುಗಳನ್ನು ಕತ್ತಲಿನಲ್ಲಿ ಹಾಡುವ ಸಂದರ್ಭದಲ್ಲಿ ಅವರು ಮಾತನಾಡಿದರು.

             ಇಂದಿನ ಸ್ಪಧಾತ್ಮಕ ಪ್ರಪಂಚದಲ್ಲಿ ಬದುಕು ಶರವೇಗದಲ್ಲಿ ಮುನ್ನುಗ್ಗುತ್ತಿದ್ದೆ ಉಪಗ್ರಹಗಳನ್ನು ಹಾರಿಬಿಟ್ಟಿದ್ದೇವೆ, ಆದರೆ ಪ್ರೀತಿ ವಿಶ್ವಾಸಗಳು ಮೊಬೈಲ್‍ಗಳಲ್ಲಿ ಮಾತ್ರ ಸೀಮಿತವಾಗುತ್ತಿವೆ, ಇಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ ಜೀವನ ಮೌಲ್ಯಗಳ ಕಡೆಗೆ ಎಲ್ಲರೂ ಗಮನ ಹರಿಸಬೇಕು ಅಲ್ಲದೆ ಜಾತೀಯತೆ ದೂರಾಗಬೇಕು ಮಾನವೀಯ ಮೌಲ್ಯಗಳು ಹತ್ತಿರವಾಗಬೇಕು ಎಂದರು.

               ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಹೆಚ್.ಆರ್.ಶಂಕರ್ ಮಾತನಾಡಿ, ಕರ್ನಾಟಕದ ಯಾತ್ರೆಯ ಭಾಗವಾಗಿ ಹಿರಿಯೂರಿಗೆ ಆಗಮಿಸಿದ ತತ್ವಪದಕಾರರಾದ ನಾದಮಣಿ ನಾಲ್ಕೂರುರವರು ಅಸಮಾನತೆ ಮೇಲು-ಕೀಲು, ಎಡ-ಬಲ, ಮುಟ್ಟು ಹೀಗೆ ಹಲವಾರು ಜನಪದ ಶೈಲಿಯ ತತ್ವಪದ ಹಾಡುಗಳ ಜನರ ಮನಸೂರೆಗೊಂಡಿವೆ ಎಂದು ಹೇಳಿದರು.

               ರೋಟರಿ ಕ್ಲಬ್ ಅಧ್ಯಕ್ಷರಾದ ಎಂ.ಎಸ್.ರಾಘವೇಂದ್ರ ಮಾತನಾಡಿ ಅನುಭವಗಳ ಮೂಲಕ ಅನುಭಾವದಿಂದ ಯುವ ಜನತೆಯ ಜವಾಬ್ದಾರಿಗಳು ಪರಿಸರ ಅವನತಿ ಅತಿವೃಷ್ಟಿ, ಅನಾವೃಷ್ಟಿ, ಭೂಕುಸಿತ ಭೂಕಂಪ, ಮಹಿಳೆಯರ ಹೊಣೆ, ಜಾತಿ, ಧರ್ಮ, ಬುಡಕಟ್ಟುಗಳನ್ನು ಮೀರಿ ಸೌಹಾರ್ದತೆಯ ಬದುಕು ಸಾಗಿಸಲು ಹಾಡುಗಾರಿಕೆ ಸ್ಪೂರ್ತಿಯಾಗುತ್ತದೆ. ಇಂದು ನಾದಮಣಿ ನಾಲ್ಕೂರು ರವರು ಹಿರಿಯೂರಿಗೆ ಆಗಮಿಸಿ ಅತ್ಯುತ್ತಮವಾದಂತಹ ಕಾರ್ಯಕ್ರಮವನ್ನು ನೀಡಿದ್ದಾರೆ ಎಂದು ಹೇಳುತ್ತಾ ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು.

                ಕಾರ್ಯಕ್ರಮದಲ್ಲಿ ಸಂಘಟಕರು ರಾಜ್ಯ ಪ್ರಶಸ್ತಿ ಪುರಸ್ಕøತರಾದ ಚಮನ್‍ಷರೀಫ್, ಸಕ್ಕರರಂಗಸ್ವಾಮಿ, ಎಂ.ಎಲ್.ಗಿರಿಧರ್, ಪಿ.ಎಸ್.ಐ ಮಂಜುನಾಥ್, ಎಂ.ರವೀಂದ್ರನಾಥ್, ಹರ್ತಿಕೋಟೆಮಹಾಸ್ವಾಮಿ, ಶಶಿಕಲಾ ರವಿಶಂಕರ್, ನಳಿನ ತ್ರಿಯಂಬಕೇಶ್ವರ್, ಸೌಮ್ಯ ಪ್ರಶಾಂತ್, ತ್ರಿವೇಣಿ, ಎಲ್.ಆನಂದಶೆಟ್ಟಿ, ವೈ.ಎಸ್.ಉಮಾಶಂಕರ್, ನಾಗಭೂಷಣ್, ಕೇಶವಮೂರ್ತಿ, ಕೆ.ಸಿ.ಹೊರಕೇರಪ್ಪ, ಕೆ.ಎಂ.ಜಗನಾಥ್, ಚಂದ್ರಯ್ಯಬೆಳವಡಿ, ಎಂ.ಕಿರಣ್‍ಮಿರಜ್ಕರ್, ಅಮೃತಲಕ್ಷ್ಮಿ, ಎಂ.ಬಿ.ಲಿಂಗಪ್ಪ, ಕೃಷ್ಣಮೂರ್ತಿ, ಪಾಪಣ್ಣ, ಮುರಾರ್ಜಿ, ಮ್ಯಾಕ್ಲೂರಹಳ್ಳಿ ತಿಮ್ಮಯ್ಯ ಎಂ.ಎಸ್.ಗೌತಮ್, ಹಾಗೂ ಅನೇಕ ಕಲಾಸಕ್ತರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾನವೀಯ ಮೌಲ್ಯಗಳನ್ನು ಬೆಸೆಯುವ ಅನೇಕ ಹಾಡುಗಳನ್ನು ಹಾಡಿ ರಂಜಿಸಿದರು.

Recent Articles

spot_img

Related Stories

Share via
Copy link