ಹೊಸದುರ್ಗ
ರೈತ ಸಮೃದ್ಧವಾಗುವವರೆಗೆ ನೂತನ ದೇವಸ್ಥಾನ ಕಟ್ಟುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿ, ಸಸಿ ನೆಡುವ ಕೆಲಸ ಮಾಡಿ ಇಲ್ಲದಿದ್ದರೆ ಮುಂದಿನ ಪೀಳಿಗೆ ನೀರಿಗಾಗಿ ಯುದ್ಧ ಮಾಡುವ ಸಂದರ್ಭ ಬಂದರು ಆಶ್ಚರ್ಯವಿಲ್ಲ ಎಂದು ಕುಂಚಿಟಿಗ ಮಠದ ಡಾ.ಶ್ರೀ ಶಾಂತವೀರ ಸ್ವಾಮೀಜಿ ಹೇಳಿದರು.
ತಾಲೂಕಿನ ನಾಗರಕಟ್ಟೆ ಗ್ರಾಮದಲ್ಲಿ ನಡೆದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಕಳಸಾರೋಹಣ ಹಾಗೂ ಧಾರ್ಮಿಕ ಸಮಾರಂಭದಲ್ಲಿ ದಿವ್ಯ ಸಾನಿದ್ಯ ವಯಿಸಿ ಮಾತನಾಡಿದರು.
ದೇವಸ್ಥಾನ ಗಂಟೆಯಿಂದ ಓಂಕಾರ ನಾದ, ಶಾಲೆ ಗಂಟೆಯಿಂದ ಅಕ್ಷರ ನಾದ ಬರುವುದು ಲೋಕರೂಢಿ. ಭಾರತ ಜನಸಂಖ್ಯೆ ಅನುಗುಣವಾಗಿ ಶಾಲೆಗಳನ್ನು ತೆರೆಯಬೇಕಾದ ಜನ ದೇವಸ್ಥಾನ ಕಟ್ಟುವುದನ್ನು ಸರಾಗವಾಗಿ ಮಾಡಿಕೊಂಡಿದ್ದಾರೆ. ಗ್ರಾಮದ ಕೆರೆ ಕಟ್ಟೆ ಸಂರಕ್ಷಣೆ ಮಾಡಿ ಗ್ರಾಮದ ಗೋಮಾಳ ಕಾವಲುಗಳನ್ನು ಕಾಪಾಡುವ ಯೋಚನೆಗಳು ಮಾಡದಿರುವುದೇ ಕಲಿಯುಗದಲ್ಲಿ ನೀರಿನ ಕೊರತೆಯಾಗಲು ಕಾರಣ. ಗ್ರಾಮಗಳು ಸುಧಾರಣೆಯಾದರೆ ಮಾತ್ರ ದೇಶ ಸಂತೋಷದಿಂದ ಇರುತ್ತದೆ ಎಂದು ಹೇಳಿದರು.
ಕನಕ ಗುರುಪೀಠದ ಶ್ರೀ ಈಶ್ವರನಾಂದಪುರಿ ಸ್ವಾಮೀಜಿ ಮಾತನಾಡಿ ಮಕ್ಕಳಲ್ಲ ತಂದೆ ತಾಯಿ ಗುರು ಹಿರಿಯರನ್ನು ಗೌರವದಿಂದ ಕಾಣುವ ಸಂಪ್ರದಾಯವನ್ನು ಬೆಳಸಬೇಕು. ಇತ್ತೀಚೆಗೆ ವೃದ್ದರನ್ನು ನಿರ್ಲಕ್ಷ ಮಾಡುವವರೆ ಅಧಿಕವಾಗಿರುವುದು ನೋವಿನ ಸಂಗತಿ ಎಂದು ಹೇಳಿದರು.
ಸಮಾರಂಭದಲ್ಲಿ ನಂದಿಪುರದ ನಂದಿಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಶಾಸಕ ಗೂಳಿಹಟ್ಟಿ ಶೇಖರ್ ಅಧ್ಯಕ್ಷತೆ ವಹಿಸಿದ್ದರು. ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ಮಾಜಿ ಶಾಸಕ ಟಿ.ಹೆಚ್ ಬಸವರಾಜ್, ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ಕೆ.ಎಸ್. ನವೀನ್, ಹಿರಿಯ ಪತ್ರಕರ್ತ ದೀಪಕ್ ತಿಮ್ಮಯ್ಯ, ಮುಖಂಡರಾದ ಹೆಬ್ಬಳ್ಳಿ ಮಲ್ಲಿಕಾರ್ಜುನ, ಗುರುಸ್ವಾಮಿ, ಗ್ರಾಮಸ್ಥರಾದ ಮಲ್ಲಪ್ಪ, ಲೋಕೇಶ್ವರಪ್ಪ, ರುದ್ರಪ್ಪ, ನಿವೃತ್ತ ಸಾಹಿತಿ ನುಲೇನೂರು ಬಸವರಾಜಪ್ಪ, ರಾಜಾಹುಲಿ, ಎಂ.ಸಿ ಮಲ್ಲಿಕಾರ್ಜುನ್, ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ದೇವಸ್ಥಾನದ ಪಾದಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
