ಬಳ್ಳಾರಿ:
ದೇಶದೆಲ್ಲೆಡೆ ಅಧರ್ಮ ತಾಂಡವಾಡುತ್ತಿತ್ತು, ಅನ್ಯಾಯ ಅಕ್ರಮಗಳು ಎಲ್ಲೆಡೆ ಸಾಮಾನ್ಯವಾಗಿತ್ತು, ಇಂತಹ ಧರ್ಮ ನಾಶಮಾಡುತ್ತಿದ್ದವರನ್ನು ನೋಡಿಯೇ ಸಂಗಮ ವಂಶ ಹುಟ್ಟುವುದರೊಂದಿಗೆ ಧರ್ಮ ಸಂಸ್ಥಾಪನೆ ಸಿದ್ಧಿಮಾಡಿ ತೋರಿಸಿತು ಎಂದು ಶಾಸನ ಹೇಳುತ್ತದೆ. ಇದು ನನ್ನಮಾತಲ್ಲ, ಲಿಖಿತ ಶಾಸನದಲ್ಲಿ ನೋಡಬಹುದೆಂದು ಖ್ಯಾತ ಇತಿಹಾಸ ಸಂಶೋಧಕ ಡಾ.ಎಂ. ಚಿದಾನಂದಮೂರ್ತಿ ತಿಳಿಸಿದರು.
ಹಂಪಿಯ ಶ್ರೀಕೊಟ್ಟೂರು ಸ್ವಾಮಿ ಮಠದ ಆವರಣದಲ್ಲಿ ವಿಜಯ ಕಲ್ಯಾಣ ಕೃತಿ ಬಿಡುಗಡೆಗೊಳಿಸಿ ಶುಕ್ರವಾರ ಸಂಜೆ ಮಾತನಾಡಿದರು. ಹಿಂದೂ ಧರ್ಮದ, ಸಂಸ್ಕøತಿ, ಸಾಮಾಜದ ಸಂಸ್ಕರಣೆಗಾಗಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾಗಿ, ಭಾರತೀಯ ಪರಿಕಲ್ಪನೆಗೆ ಪುಷ್ಠಿ ನೀಡಿ ಈ ದೇಶ ಉಳಿಯಿತು. ಒಂದು ವೇಳೆ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾಗದಿದ್ದರೆ ಭಾರತದ ದೇಶ ಅಸ್ಮತೆಯನ್ನೆ ಕಳೆದುಕೊಳ್ಳುತ್ತಿತ್ತು ಎಂದು ಹೇಳಿದರು.
ಕೊಟ್ಟೂರು ಸಂಸ್ಥಾನ ಮಠದ ಡಾ.ಸಂಗನಬಸವ ಸ್ವಾಮೀಜಿ ನಿಜರ್ಥದಲ್ಲಿ ಕಟ್ಟಿ, ಧರ್ಮ, ಸಂಸ್ಕøತಿ ರಕ್ಷಣೆಗೆ ಸಂಗಮ ವಂಶದಂತೆ ಧರ್ಮ ರಕ್ಷಿಸುವ ಕೆಲಸದಲ್ಲಿ ಮುನ್ನಡೆಯಲ್ಲಿ ಎಂದು ಆಶಿಸಿದ ಚಿಮೂ, ಎರಡೂವರೆ ದಶಕದ ರಾಜ್ಯಬಾರ ಮಾಡಿದ ಪ್ರೌಢ್ಯದೇವರಾಯ ಚರಿತ್ರೆಕಾರರು ಆತನನ್ನು ಹಾಗೂ ಆತನ ಸಾಧನೆಯನ್ನು ಮರೆಮಾಚಿದ್ದರೆ. ಆತನ ಕಾಲದಲ್ಲಿ ನಡೆದ ಧಾರ್ಮಿಕ ಕಾರ್ಯಗಳು ದೇಶದ ಬೇರೆಲ್ಲಿಯೂ ನಡೆದಿಲ್ಲ ಎಂದರು.
ಸಂಪಾದಕ ಡಾ. ಮೃತ್ಯುಂಜಯ ರುಮಾಲೆಯ ಸಂಪಾದಿತ ಕೃತಿ ಹಂಪಿಯ ಹರಿಹರನ 12 ಸಂಕೀರ್ಣ ರಗಳೆಗಳು ಕೃತಿ ಬಿಡುಗಡೆಗೊಂಡಿತು