ಬೆಂಗಳೂರು:
ಬೆಳಗಾವಿ ರಾಜಕಾರಣದ ಕಿಂಗ್ ಎನ್ನಿಸಿರುವ ಜಾರಕಿಹೊಳಿ ಕುಟುಂಬವನ್ನು ಕಡೆಗಣಿಸಿ ಈಗ ರಮೇಶ್ ಜಾರಕಿಹೊಳಿ ನನ್ನ ಸ್ನೇಹಿತ. ಅವರ ಮನೆಗೆ ಹೋಗಿ ಮಾತನಾಡುತ್ತೇನೆ. ಅವರ ಸಂಕಷ್ಟದ ವೇಳೆ ನಾನು ಬಂಡೆ ರೀತಿ ನಿಂತಿದ್ದೆ. ನಾನು ಈಗಲೂ ರಮೇಶ್ ಜಾರಕಿಹೊಳಿ ಜತೆ ಇದ್ದೀನಿ. ಭಕ್ತನಿಗೂ ಭಗವಂತನಿಗೂ ಯಾವ ರೀತಿ ಸಂಬಂಧ ಇದೆ ಎಂಬುದು ಅವರಿಬ್ಬರಿಗೆ ಗೊತ್ತಿರುತ್ತೆ ಎಂದು ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸದಾಶಿವನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಡಿಸಿಎಂ ಡಾ.ಜಿ.ಪರಮೇಶ್ವರ್ ಅವರು ನನ್ನನ್ನು ಭೇಟಿಯಾಗಿದ್ದು 2019ರ ಲೋಕಸಭಾ ಚುನಾವಣೆಗೆ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬೇಕು. ಪ್ರವಾಸ ಹೇಗೆಲ್ಲಾ ಆಯೋಜಿಸಬೇಕು ಎಂದು ಚರ್ಚೆ ಮಾಡುವುದಕ್ಕೆ ಅಷ್ಟೆ. ಅದನ್ನು ಹೊರತು ಪಡಿಸಿ ನಾವು ಮಾತನಾಡಿದ್ದನ್ನೆಲ್ಲಾ ಹೇಳುವುದಕ್ಕಾಗುತ್ತಾ ಎಂದರು.
ಇಲ್ಲಿಯವರೆಗೂ ನಮ್ಮ ಪಕ್ಷದ ಎಷ್ಟು ಜನರಿಗೆ ಏನ್ ಆಫರ್ ಕೊಟ್ಟಿದ್ದಾರೆ ಅಂತ ಬಿಜೆಪಿ ಅವರನ್ನೇ ಹೋಗಿ ಕೇಳಿ. ರಾಜಕೀಯದಲ್ಲಿ ಪಾನ್ ಯಾವಾಗ ಮೂವ್ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.
ಎಷ್ಟು ಜನ ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿ, ಅವೆಲ್ಲ ಬೇಡ, ಅವನ್ನೆಲ್ಲ ದೊಡ್ಡವರು ನೋಡಿಕೊಳ್ಳುತ್ತಾರೆ. ನಾನು ಪಕ್ಷದ ಕಾರ್ಯಕರ್ತ ಅಷ್ಟೆ ಎಂದು ಜಾರಿಕೊಳ್ಳುವ ಯತ್ನ ಮಾಡಿದ್ದಾರೆ