ಬಳ್ಳಾರಿ.:
ಬಳ್ಳಾರಿ ಜಿಪಂನ ಮನರೆಗಾ ಯೋಜನೆಯಡಿ ಹೊರಗುತ್ತಿಗೆ ಆಧಾರದ ಮೇರೆಗೆ ಕಾರ್ಯ ನಿರ್ವಹಿಸುತ್ತಿರುವ 75 ಸಮಾಲೋಚಕ ಸಿಬ್ಬಂದಿಯವರು ಕೊಡಗು ಪರಿಹಾರ ನಿಧಿಗೆ ತಮ್ಮ ಒಂದು ದಿನದ ಸಂಭಾವನೆ 51,554 ರೂ.ಗಳನ್ನು ಸಲಿಸುವ ಮೂಲಕ ಔದಾರ್ಯ ಮೆರೆದಿದ್ದಾರೆ.
ನಗರದ ಜಿಪಂ ಕಚೇರಿಯ ಆವರಣದಲ್ಲಿ ಪರಿಹಾರ ನಿಧಿಯ ಡಿಡಿಯನ್ನು ಮನರೆಗಾ ಡಿಸ್ಟ್ರೀಕ್ ಪ್ರೋಗ್ರಾಮ್ ಕೋ-ಆಡೀನೆಟರ್ ಹಾಗೂ ಜಿಪಂ ಸಿಇಒ ಆಗಿರುವ ಡಾ.ಕೆ.ವಿ.ರಾಜೇಂದ್ರ ಅವರಿಗೆ ಸಲ್ಲಿಸಲಾಯಿತು.
ಮನರೆಗಾ ಕೋಶದ ಸಮಾಲೋಚಕ ಸಿಬ್ಬಂದಿಯವರ ಈ ಸತ್ಕಾರ್ಯವನ್ನು ಪ್ರಶಂಸಿದ ಸಿ.ಇ.ಒ ಡಾ.ಕೆ.ವಿ.ರಾಜೇಂದ್ರ ಅವರು ನಿಜಕ್ಕೂ ಇದೊಂದು ಶ್ಲಾಘನೀಯ ಕಾರ್ಯ. ಸಮಾಲೋಚಕ ಸಿಬ್ಬಂದಿಯವರು ತಮ್ಮ ಒಂದು ದಿನದ ಸಂಭಾವನೆಯನ್ನು ಕೊಡಗು ಪರಿಹಾರ ನಿಧಿಗೆ ನೀಡುತ್ತಿರುವುದು ತುಂಬಾ ಸಂತೋಷದ ವಿಷಯವಾಗಿದೆ. ಇದು ಎಲ್ಲರಿಗೂ ಸ್ಪೂರ್ತಿಯಾಗಿ ಕೊಡಗಿನ ಸಂತ್ರಸ್ತರ ಬದುಕು ಬವಣೆಗಳಿಗೆ ಸ್ಪಂದಿಸುವ ಮನೋಭಾವ ಮೂಡಿಸಲಿ ಎಂದು ಅವರು ಆಶಿಸಿದರು.
ಈ ಸಂದರ್ಭದಲ್ಲಿ ಜಿಪಂ ಉಪಕಾರ್ಯದರ್ಶಿ ಹಾಗೂ ಮನರೆಗಾ ಯೋಜನೆಯ ಜಿಲ್ಲಾ ನೋಡಲ್ ಅಧಿಕಾರಿ ಮುಕ್ಕಣ್ಣ, ಎ.ಡಿ.ಪಿ.ಸಿ ಅಂಬರೇಶ, ಡಿ.ಐ.ಇ.ಸಿ ನಟರಾಜ, ಡಿ.ಐ.ಎಂ.ಎಸ್ ಶಿವಪ್ರಸಾದ, ಜಿಲ್ಲಾ ಸಮಾಜಿಕ ಲೆಕ್ಕ ಪರಿಶೋಧನಾ ಸಂಯೋಜಕ ಸೋಮಶೇಖರ್, ಐ.ಇ.ಸಿ ಜಿಲ್ಲಾ ಸಹಾಯಕ ಪಾಂಡು ಯಾದವ್, ವಿನಿ ಶಶಿಕಾಂತ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.