ಜಿಪಂ ಮಾಜಿ ಉಪಾಧ್ಯಕ್ಷ ಕೆ.ಸಿ.ಕೃಷ್ಣಮೂರ್ತಿ ನಿಧನ : ಅಪಾರ ಬಂಧು ಬಳಗದಿಂದ ಅಶ್ರುತರ್ಪಣ 

ಗುಬ್ಬಿ :

ಮಾಜಿ ಜಿಪಂ ಉಪಾಧ್ಯಕ್ಷ ಹಾಗೂ ಅಗ್ನಿವಂಶ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಸಿ.ಕೃಷ್ಣಮೂರ್ತಿ ( 60 ) ಅಪಘಾತದಲ್ಲಿ ಗಾಯಗೊಂಡು ಸೋಮವಾರ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ .

 ಕೋವಿಡ್-19 ಲಸಿಕೆ ಪಡೆಯಲು ಯಾರನ್ನೂ ಒತ್ತಾಯಿಸುವಂತಿಲ್ಲ : ಸುಪ್ರಿಂಕೋರ್ಟ್‌ ಮಹತ್ವದ ತೀರ್ಪು

ತಾಲ್ಲೂಕಿನ ಕಡೇಪಾಳ್ಯ ಗ್ರಾಮದ ಕೆ.ಸಿ.ಕೃಷ್ಣಮೂರ್ತಿ ಭಾನುವಾರ ರಾತ್ರಿ ಗುಬ್ಬಿಯಿಂದ ತಮ್ಮ ಗ್ರಾಮ ಕಡೇಪಾಳ್ಯಕ್ಕೆ ಬೈಕ್ ನಲ್ಲಿ ತೆರಳುವ ಮಾರ್ಗ ಮಧ್ಯೆ ಚಿಕ್ಕೋನಹಳ್ಳಿ ಗ್ರಾಮದ ಜ್ಯೋತಿನಗರ ಬಡಾವಣೆಯ ಸಮೀಪ ಕೇಶಿಪ್ ರಸ್ತೆಯಲ್ಲಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಈ ದುರ್ಘಟನೆ ನಡೆದಿದೆ . ತೀವ್ರ ಗಾಯಗೊಂಡ ಕೃಷ್ಣಮೂರ್ತಿ ಅವರನ್ನು ತುಮಕೂರಿನ ಸಿದ್ದಗಂಗಾ ಆಸ್ಪತ್ರೆಯಲ್ಲಿ ದಾಖಲು ಮಾಡಲಾಯಿತು . ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ .

ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮದಲ್ಲಿ ಸಚಿವ ಅಶ್ವಥ್ ನಾರಾಯಣ ಸೋದರ ಭಾಗಿ: ವಿ ಎಸ್ ಉಗ್ರಪ್ಪ ನೇರ ಆರೋಪ

 ಅಗ್ನಿವಂಶ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಮೃತರು ಅಗ್ನಿ ವಂಶ ತಿಗಳ ಸಮಾಜದ ಏಳಿಗೆಗೆ ಸತತ ಪರಿಶ್ರಮ ಪಟ್ಟಿದ್ದರು . ಜೆಡಿಎಸ್ ಪಕ್ಷದಲ್ಲಿ ರಾಜಕೀಯ ಆರಂಭಿಸಿ ಜಿಪಂ ಉಪಾಧ್ಯಕ್ಷರಾಗಿ ತಮ್ಮ ಸಮುದಾಯಕ್ಕೆ ರಾಜಕೀಯ ಶಕ್ತಿ ತುಂಬುವ ಕಾಯಕ ಮಾಡಿದ್ದರು .

ಸಾಮಾಜಿಕ , ಆರ್ಥಿಕ ಸುಸ್ಥಿತಿಗೆ ತಿಗಳ ಸಮುದಾಯ ಬಂದು ಮು SHARE ಪೀಳಿಗೆ ಶೈಕ್ಷಣಿಕವಾಗಿ ಪ್ರಗತಿ ಹೊಂದುವ ಅಭಿಲಾಷೆಯಲ್ಲಿ ಎವಿಕೆ ಸಮುದಾಯ ಭವನ ನಿರ್ಮಾಣ ಮಾಡಿ ಸಂಘದ ಅಭಿವೃದ್ಧಿಗೆ ಶ್ರಮಿಸಿದ್ದರು .

17ನೇ ದಿನವೂ ಮುಂದುವರಿದ ‘ಕೆಜಿಎಫ್ 2’ ಅಬ್ಬರ; ಯಶ್ ಎದುರು ಮಂಕಾದ ಅಜಯ್​ ದೇವಗನ್, ಟೈಗರ್ ಸಿನಿಮಾ

ಪಟ್ಟಣದ ಎವಿಕೆ ಸಮುದಾಯ ಭವನದಲ್ಲಿ ಮೃತರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು . ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ ಮೃತರ ಅಂತ್ಯ ಸಂಸ್ಕಾರ ಸಂಜೆ ಅವರ ತೋಟದಲ್ಲಿ ನಡೆಸಲಾಯಿತು .

ಪಿಎಸ್ಐ ನೇಮಕ ಅಕ್ರಮದಲ್ಲಿ ಮಂತ್ರಿಯ ಸಂಬಂಧಿ ಕೈವಾಡದ ಬಗ್ಗೆ ಡಿ.ಕೆ. ಶಿವಕುಮಾರ್ ಅವರ ಮಾಧ್ಯಮ ಪ್ರತಿಕ್ರಿಯೆ

ರೈತ ಸಂಘದಲ್ಲೂ ಸಕ್ರಿಯ ಸದಸ್ಯರಾಗಿ ಈ ಹಿಂದೆ ರೈತ ಹೋರಾಟದಲ್ಲಿ ಭಾಗಿಯಾಗಿದ್ದ ಮೃತರ ಅಂತಿಮ ದರ್ಶನ ಪಡೆದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು , ಪಕ್ಷದ ಪ್ರಮುಖರು ಹಾಗೂ ಸಾವಿರಾರು ಬೆಂಬಲಿಗರು ಶ್ರದ್ಧಾಂಜಲಿ ಸಮರ್ಪಿಸಿದರು . 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link