ಬ್ಯಾಡಗಿ:
ಪದವಿ ಪೂರ್ವ ಶಿಕ್ಷಣ ಇಲಾಖೆಯ ತಾಲೂಕ ಮಟ್ಟದ ಕ್ರೀಡಾಕೂಟದ ಬಾಲಕರ ವಿಭಾಗದ ಥ್ರೋಬಾಲ್ ಹಾಗೂ ಅಥ್ಲೆಟಿಕ್ಸ ಕ್ರೀಡೆಗಳಲ್ಲಿ ಶಿಡೇನೂರಿನ ಡಾ.ಬಿ.ಆರ್.ಅಂಬೇಡ್ಕರ ಮಹಾವಿದ್ಯಾಲಯ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಅರ್ಹತೆ ಪಡೆಯಿತು. ವಿಜೇತ ಕ್ರೀಡಾಪಟುಗಳೊಂದಿಗೆ ಪ್ರಾಚಾರ್ಯ ಎಚ್.ಬಿ.ಲಿಂಗಯ್ಯ, ಕೋಚ್ ಮಂಜುಳ ಬಣಕಾರ, ಉಪನ್ಯಾಸಕರಾದ ಎಸ್.ಎಂ.ಕೋಡಬಾಳ, ಬಿ.ಆರ್.ಕಡೇಮನಿ ಉಪಸ್ಥಿತರಿದ್ದಾರೆ.