ಜಿಲ್ಲಾ ಮಟ್ಟಕ್ಕೆ ಆಯ್ಕೆ

ರಾಣಿಬೆನ್ನೂರ:

               ವಿದ್ಯಾರ್ಥಿಗಳು ನಾಲ್ಕು ಗೋಡೆಗಳ ಮಧ್ಯ ನಡೆಯುವ ಶಿಕ್ಷಣಕ್ಕಷ್ಟೇ ಸೀಮಿತವಾಗದೆ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಇದರಿಂದ ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಗುವುದು, ಮಾನಸಿಕ ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಕ್ರೀಡೆಗಳು ಅತ್ಯಂತ ಸಹಾಯಕಾರಿಯಾಗಿವೆ ಎಂದು ಲಕ್ಷ್ಮಣ ನಾಯಕ ಹೇಳಿದರು.
              ತಾಲೂಕಿನ ಸುಣಕಲ್‍ಬಿದರಿ ಗ್ರಾಮದಲ್ಲಿ ನಡೆದ ಪ.ಪೂ.ಕಾಲೇಜಗಳ ತಾಲೂಕಾ ಮಟ್ಟದ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡ ಕ್ರಿಡಾಪಟುಗಳನ್ನು ಸನ್ಮಾನಿಸಿ ಮಾತನಾಡಿದ ಅವರು. ಪ್ರಸ್ತುತ ದಿನಮಾನಗಳಲ್ಲಿ ಕ್ರೀಡಾ ಇಲಾಖೆಗಳು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
                ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾ ಪಟುಗಳಿಗೆ ಆಡಳಿತ ಮಂಡಳಿ ಸನ್ಮಾಸಿ ಗೌರವಿಸಿತು. ಪ್ರಾಚಾರ್ಯ ವ್ಹಿ.ಜಿ.ಕೊಟ್ನಿಕಲ್ಮಠ, ಉಪನ್ಯಾಸಕರಾದ ರಮೇಶ ತಳವಾರ, ಸುರೇಶ ದುರ್ಗದಸೀಮಿ, ಪಿ.ಎಸ್.ಗಾಯತ್ರಿ, ಗೀತಾ ಮಠದ, ನೇತ್ರಾವತಿ ಕೆಂಪಣ್ಣನವರ, ಸಹನಾ ಟಿ.ಎಸ್., ರಾಧಾ ಕುರಾಡೆ, ಉಷಾ ಮಾಳಗಿ ಸೇರಿದಂತೆ ಮತ್ತಿತರರು ಇದ್ದರು.

Recent Articles

spot_img

Related Stories

Share via
Copy link
Powered by Social Snap