ಬಳ್ಳಾರಿ
ಕುರುಗೋಡು ತಾಲೂಕಿನ ಕಲ್ಲುಕಂಬ ಸರ್ಕಾರಿ ಪೌಡಶಾಲೆ ವಿದ್ಯಾರ್ಥಿಗಳು ತಾಲೂಕಿನ ಸಾಕ್ರೇಟ್ಸ್ ಹಾರ್ಟ ಶಾಲಾ ಆವರಣದಲ್ಲಿ ನಡೆದ 2018-19ನೇ ಸಾಲಿನ ಬಾಲಕ ಹಾಗೂ ಬಾಲಕಿಯರ ತಾಲ್ಲೂಕು ಮಟ್ಟದ ಖೋ ಖೋ ಆಟದಲ್ಲಿ ಪ್ರಥಮ ಸ್ಥಾನಗಳಿಸಿದ್ದಾರೆ ಸೋಮವಾರ ಸಾಕ್ರೇಟ್ಸ್ ಹಾರ್ಟ ಶಾಲಾ ಆವರಣದಲ್ಲಿ ಸುಮಾರು 15 ಕ್ಕೂ ಹೆಚ್ಚು ತಂಡಗಳು ಭಾಗವಹಿಸಿ ಕ್ರೀಡಾಸ್ಪೂರ್ತಿ ಮೆರೆದದ್ದು ವಿಶೇಷವಾಗಿತ್ತು.
ಆಟದ ಕೊನೇ ಕ್ಷಣದಲ್ಲಿ ಎಸ್.ಜಿ.ಕಾಲೇಜನ್ನು ಮಣಿಸುವ ಮೂಲಕ ಕಲ್ಲುಕಂಬ ಶಾಲೆಯ ಬಾಲಕರು ಪ್ರಥಮ ಸ್ಥಾನಗಳಿಸಿದರೆ,ಬಾಲಕಿಯರ ವಿಭಾಗದಲ್ಲಿ ಗಾಂಧಿತತ್ವ ಶಾಲೆಯನ್ನು ಮಣಿಸಿ ಕಲ್ಲುಕಂಬ ಶಾಲೆಯ ವಿದ್ಯಾರ್ಥಿಗಳು ಪ್ರಶಸ್ತಿಗೆ ಭಾಜನರಾದರು. ಈ ಸಂದರ್ಭದಲ್ಲಿ ಕಲ್ಲುಕಂಬ ಪ್ರೌಡಶಾಲೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ,ವಿಜ್ಞಾನ ವಿಭಾಗದ ಶಿಕ್ಷಕ ಜಗದೀಶ, ಕನ್ನಡ ವಿಭಾಗದ ಶಿಕ್ಷಕ ಅರುಣ್ ಹಾಗೂ ಕೋಚರ್ ದೊಡ್ಡಪ್ಪ ಹಾಗೂ ವಿದ್ಯಾರ್ಥಿಗಳು ಉಪಸ್ತಿತರಿದ್ದರು