ಜಿಲ್ಲೆಯಾದ್ಯಂತ ಮಿಂಚಿನ ಮತದಾರರ ನೋಂದಣಿ

ಹಾವೇರಿ

       ಜಿಲ್ಲೆಯಾದ್ಯಂತ ಮತದಾರರ ಪಟ್ಟಿಯಲ್ಲಿ ನೊಂದಣಿಯಾಗದೆ ಉಳಿದವರು 18 ವರ್ಷ ತುಂಬಿದ ಇನ್ನು ಮತದಾರರ ಪಟ್ಟಿಯಲ್ಲಿ ನೊಂದಾಯಿಸಿಕೊಳ್ಳದ ಯುವಕ, ಯುವತಿಯರಿಗಾಗಿ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮಾರ್ಚ್ 2 ಮತ್ತು 3 ರಂದು ಜಿಲ್ಲೆಯಾದ್ಯಂತ ಮಿಂಚಿನ ನೋಂದಣಿ ಕಾರ್ಯ ಹಮ್ಮಿಕೊಂಡಿದ್ದು ಇದರ ಸದುಪಯೋಗಪಡಿಸಿಕೊಳ್ಳಲು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಕೃಷ್ಣಾ ಬಾಜಪೇಯಿ ಅವರು ಕರೆ ನೀಡಿದ್ದಾರೆ,

      ರಾಣೇಬೆನ್ನೂರ ನಗರದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಯುವಕ, ಯುವತಿಯರು ಮತದಾರರಿಗೆ ಹೊಸದಾಗಿ ನೋಂದಾಯಿಸಿಕೊಳ್ಳಲು ಅರ್ಜಿ ನಮೂನೆ 6ನ್ನು ವಿತರಿಸಿ ಅವರು ಮಾತನಾಡಿದರು.

        ಜಿಲ್ಲೆಯ ಎಲ್ಲ ಮತಗಟ್ಟೆ ಕೇಂದ್ರಗಳಲ್ಲಿ, ತಹಶೀಲ್ದಾರ ಕಚೇರಿಗಳಲ್ಲಿ, ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಗಳಲ್ಲಿ ಮಿಂಚಿನ ಮತದಾರರ ನೋಂದಣಿ ವಿಶೇಷ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ. ಈವರೆಗೆ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದಿದ್ದರೆ ಸೇರ್ಪಡೆಗೆ ಅವಕಾಶಮಾಡಿಕೊಡಲಾಗಿದೆ. ಎರಡು ಭಾವಚಿತ್ರಗಳೊಂದಿಗೆ ನಿಗಧಿತ ಅರ್ಜಿ ನಮೂನೆ ತುಂಬಿ ಹೊಸ ಮತದಾರರಾಗಿ ಪಟ್ಟಿಗೆ ಸೇರಿಸುವಂತೆ ಮನವಿ ಮಾಡಿಕೊಂಡರು.

        ಕೌಶಲ್ಯಗಳಿಸಿ: ಜಿಲ್ಲಾಧಿಕಾರಿ ಕೃಷ್ಣಾ ಬಾಜಪೇಯಿ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ನಿರುದ್ಯೋಗಿ ಯುವಕರಿಗೆ ಉದ್ಯೋಗ ಅವಕಾಶಗಳನ್ನು ಪಡೆಯಲು ಅನುಕೂಲವಾಗುವಂತೆ ಉದ್ಯೋಗಮೇಳವನ್ನು ಆಯೋಜಿಸಲಾಗಿದೆ. ತಮ್ಮಲ್ಲಿಗೆ ವಿವಿಧ ಉದ್ಯೋಗದಾತ ಕಂಪನಿಗಳನ್ನು ಆಹ್ವಾನಿಸಿ ನೇರ ನೇಮಕಾತಿ ಮೂಲಕ ತಮಗೆ ಇಷ್ಟವಾದ ಹುದ್ದೆಗಳನ್ನು ಹೊಂದಲು ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಹತೆಯ ಜೊತೆಗೆ ಉದ್ಯೋಗ ಹಿಡಿಯುವ ಕೌಶಲ್ಯವನ್ನು ರೂಢಿಸಿಕೊಂಡು ಇಂತಹ ಉದ್ಯೋಗ ಮೇಳಗಳ ಸದುಪಯೋಗ ಪಡೆಸಿಕೊಳ್ಳುವಂತೆ ಕರೆ ನೀಡಿದರು.

       114 ಜನರಿಗೆ ನೇಮಕಾತಿ: ರಾಣೇಬೆನ್ನೂರ ನಗರದ ಬಿಎಜೆಎಸ್‍ಎಸ್ ಮಹಾವಿದ್ಯಾಲಯದ ಆವರಣದಲ್ಲಿ ಜರುಗಿದ ಉದ್ಯೋಗ ಮೇಳದಲ್ಲಿ ವಿವಿಧ 18 ಕಂಪನಿಗಳು ಭಾಗವಹಿಸಿದ್ದವು. ವಿವಿಧ ಶೈಕ್ಷಣಿಕ ಹಿನ್ನೆಲೆಯ 584 ಅಭ್ಯರ್ಥಿಗಳು ಸಂದರ್ಶನ ಎದುರಿಸಿದ್ದು ಈ ಪೈಕಿ 114 ಜನರಿಗೆ ಸ್ಥಳದಲ್ಲಿ ನೇಮಕಾತಿ ಆದೇಶ ನೀಡಲಾಯಿತು. 250 ಅಭ್ಯರ್ಥಿಗಳ ಉದ್ಯೋಗ ಆಯ್ಕೆ ಪಟ್ಟಿಯನ್ನು ಮಾಡಲಾಗಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿ ರುದ್ರೇಗೌಡ ಅವರು ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link