ಜೀವವಿಮಾ ಪ್ರತಿನಿಧಿಗಳ ಪ್ರತಿಭಟನೆ

ಬ್ಯಾಡಗಿ:

              ತಮ್ಮ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಲ್ಲಿನ ಜೀವವಿಮಾ ಪ್ರತಿನಿಧಿಗಳು ಸ್ಥಳೀಯ ಜೀವವಿಮಾ ಕಾರ್ಯಾಲಯದ ಎದುರು ಪ್ರತಿಭಟನೆ ಮಾಡಿದರು.
              ಈ ಸಂದರ್ಭದಲ್ಲಿ ತಾಲೂಕಾ ಜೀವವಿಮಾ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ನಾಗರಾಜ ಗುತ್ತಲ ಮಾತನಾಡಿ ಅಖಿಲ ಭಾರತ ವಿಮಾ ಪ್ರತಿನಿಧಿಗಳ ಒಕ್ಕೂಟವು ಕರೆ ನೀಡಿದ್ದ ನಿಮಿತ್ಯವಾಗಿ ಸೆ.1 ರಿಂದ 15 ರವರೆಗೆ ದೇಶಾದ್ಯಾಂತ ನಮ್ಮ ಕೆಲವೊಂದು ಬೇಡಿಕೆಗಳನ್ನು ಇಟ್ಟುಕೊಂಡು ನಮ್ಮ ಎಡಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ನಿಗಮದ ಕಾರ್ಯಕ್ರಮಗಳಲ್ಲಿ ಭಾಗವಹಿಸದೇ ಬಹಿಷ್ಕರಿಸಿ ಹೋರಾಟ ನಡೆಸುತ್ತಿದ್ದೇವೆ. ನಮ್ಮ ಈ ಹೋರಾಟ ಸಾರ್ವಜನಿಕರ ಮತ್ತು ಪಾಲಿಸಿದಾರರ ಪರವಾಗಿದೆ ಎಂದರು.
ಮಾಲತೇಶ ಯಲಿ ಮಾತನಾಡಿ ನಷ್ಟದಲ್ಲಿರುವ ಐಡಿಬಿಐ ಬ್ಯಾಂಕ್ ಖರಿಧೀಸುವ ಬದಲಾಗಿ ಜೀವವಿಮಾ ಪ್ರತಿನಿಧಿಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡುವ ಮೂಲಕ ಅವರುಗಳಿಗೆ ಪ್ರೋತ್ಸಹ ನೀಡಿ ಅವರಿಂದ ಇನ್ನೂ ದೊಡ್ಡ ದೊಡ್ಡ ಮೊತ್ತದ ಪಾಲಿಸಿಗಳನ್ನು ತರಲು ಪ್ರೆರೇಪಿಸುವಂತೆ ಒತ್ತಾಯಿಸಿದರು.
               ಚಂದ್ರು ಹುದ್ದಾರ ಮಾತನಾಡಿ ಜೀವವಿಮಾ ಗ್ರಾಹಕರಿಗೆ ತಮ್ಮ ಪ್ರಿಮಿಯಂ ಕಂತಿನಲ್ಲಿ ಜಿಎಸ್‍ಟಿಯನ್ನು ಸೇರಿಸುತ್ತಲಿರುವುದನ್ನು ಖಂಡಿಸಿದ ಅವರು ಹೀಗಾದಲ್ಲಿ ಮುಂದಿನ ದಿನಮಾನಗಳಲ್ಲಿ ಗ್ರಾಹಕರು ಜೀವವಿಮಾ ಪಾಲಿಸಿಯನ್ನು ಕೊಂಡುಕೊಳ್ಳಲು ಮುಂದೆ ಬರಲಾರರು. ಆದ್ದರಿಂದ ಈ ಕೂಡಲೇ ಜಿಎಸ್‍ಟಿಯನ್ನು ಗ್ರಾಹಕರಿಗೆ ಹಾಕದೇ ವಿಮಾ ಕಂಪನಿಯೇ ಭರಿಸಬೇಕೆಂದು ಆಗ್ರಹಿಸಿದರು.
               ಮಹಾದೇವಪ್ಪ ಕುರಬರ ಮಾತನಾಡಿ ಐಆರ್‍ಡಿಎಐ ಏನೇ ನಿರ್ಧೇಶನ ನೀಡಿದರೂ ಅದನ್ನು ಪ್ರತಿನಿಧಿಗಳೇ ನೀಡಬೇಕು. ನಾವು ಕೇಂದ್ರ ಸರಕಾರಕ್ಕೆ ಮತ್ತು ನಿಗಮದ ವಿಭಾಗೀಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ನಮ್ಮ ಯಾವುದೇ ಮನವಿಗೆ ಸ್ಪಂದಿಸದೇ ಇರುವದರಿಂದಾಗಿ ಶಾಂತಿಯುತವಾಗಿ ಕಪ್ಪು ಬಟ್ಟೆ ಧರಿಸಿ ಹೋರಾಟ ಮಾಡುತ್ತಲಿದ್ದೇವೆ. ನಮ್ಮ ಹೋರಾಟಕ್ಕೆ ಸರಿಯಾದ ಸ್ಪಂದನೆ ಸಿಗದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು
               ಪ್ರತಿಭಟನೆಯಲ್ಲಿ ತಾಲೂಕಾ ಒಕ್ಕೂಟದ ಉಪಾಧ್ಯಕ್ಷರಾದ ಬಸವರಾಜ ಹಿರೇಮಠ, ದ್ರಾಕ್ಷಾಯಿಣಿ ಹರಮಗಟ್ಟಿ, ಮಲ್ಲಯ್ಯ ಹಿರೇಮಠ, ಎಂ.ಬಿ.ಅಂಗಡಿ, ಮುತ್ತು ರಾಮಗೊಂಡನಹಳ್ಳಿ, ರಾಜಣ್ಣ ಕಳ್ಳಿಹಾಳ, ಗಣೇಶ ಸೋಮನಕಟ್ಟಿ, ಎಚ್.ಎಸ್.ಬನ್ನಿಹಟ್ಟಿ, ಮಾಲತೇಶ ಕಮ್ಮಾರ, ಅಂಬುಲಾಲ ಜೈನ್, ಶೋಭಾ ಪೂಜಾರ, ರಘುವೀರ ಬಾಗೋಜಿ, ರಾಘವೇಂದ್ರ ಬಾಗೋಜಿ, ಆರ್.ಕೆ.ಹಿರೇಮಠ, ಪುಟ್ಟಪ್ಪ ರಾಮಗೊಂಡನಹಳ್ಳಿ, ನಾಗಮ್ಮ, ಸಿ.ಎಸ್.ದ್ಯಾವಜ್ಜನವರ, ಹನುಮಂತಪ್ಪ ಅಂಗರಗಟ್ಟಿ, ನಾಗರಾಜ ಶಿಗೀಹಳ್ಳಿ, ಮಘಾ ಸಜ್ಜನವರ. ಪಾಲಿಸಿದಾರರಾದ ಬಸವರಾಜ ನೆಗಳೂರ, ಚಂದ್ರಪ್ಪ ಪೂಜಾರ, ವೀರಭದ್ರಗೌಡ್ರ ಹೊಮ್ಮರಡಿ, ಮಂಜು ಪೂಜಾರ, ಪಾಂಡು ಸುತಾರ ಸೇರಿದಂತೆ ಇನ್ನೀತರರು ಜೀವವಿಮಾ ಪಾಲಿಸಿದಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link