ಜುಲೈ 3 ರಂದು ಯು.ಪಿ.ಎಸ್. ಮತ್ತು ಕೆ.ಪಿ.ಎಸ್.ಸಿ ತರಬೇತಿ ಕೇಂದ್ರ ಉದ್ಘಾಟನೆ

ತರಬೇತಿ ಇದ್ದರೆ ಪರೀಕ್ಷೆ ಎದುರಿಸಲು ಸಾಧ್ಯ : ವಿನಯ್ ಕುಮಾರ್

ಸ್ಪರ್ಧಾತ್ಮಕ ವಿದ್ಯಾರ್ಥಿಗಳಿಗೆ ಅನುಕೂಲ, ಕನಸ್ಸು ಸಾಧಿಸಲು ಒಳ್ಳೆಯ ವೇದಿಕೆ.

ಬೆಂಗಳೂರು : ಸ್ಪರ್ದಾತ್ಮಕ ಯುಗದಲ್ಲಿ ತರಬೇತಿ ಇಲ್ಲದೆ ಯಾವುದೇ ಪರೀಕ್ಷೆಯನ್ನು ಎದುರಿಸಿ ನಮ್ಮ ಕನಸ್ಸನ್ನು ಸಾಧಿಸಲು ಕಷ್ಟವಾಗಿದೆ ಹಾಗಾಗಿ ಸ್ಪರ್ದಾತ್ಮಕ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅತಿ ಕಡಿಮೆ ಶುಲ್ಕದಲ್ಲಿ ಜುಲೈ 3 ರಂದು ಯು.ಪಿ.ಎಸ್. ಮತ್ತು ಕೆ.ಪಿ.ಎಸ್.ಸಿ ತರಬೇತಿ ಕೇಂದ್ರ ಉದ್ಘಾಟನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಇನ್ಸೈಟ್ ಐ.ಎ.ಎಸ್ ಸಂಸ್ಥಾಪಕ ನಿದೇರ್ಶಕರಾದ ಜಿ.ಬಿ.ವಿನಯ್ ಕುಮಾರ್ ಹೇಳಿದರು.

ಬುಧವಾರ ನಗರದ ಹೋಟಲ್ ಪರಾಗ್ ನಲ್ಲಿ ಚಂದ್ರಗುಪ್ತ ಮೌರ್ಯ ಇನ್ಸಿಟ್ಯೂಷನ್ಸ್ ಹಾಗೂ ಇನ್ಸೈಟ್ ಐ.ಎ.ಎಸ್ ಬೆಂಗಳೂರು ಇವರ ಸಹಯೋಗದಲ್ಲಿ ಯುಪಿಎಸ್‍ಸಿ ಹಾಗೂ ಕೆಪಿಎಸ್‍ಸಿ ತರಬೇತಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು,   ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಹಿತ ಧೃಷ್ಟಿಯಿಂದ ಅತಿ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ತರಬೇತಿ, ವ್ಯವಸ್ಥಿತ ವಸತಿ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಸ್ಪರ್ದಾತ್ಮಕ ತರಬೇತಿಗಾಗಿ ವಿವಿಧ ದೂರದ ಸ್ಥಳಗಳಿಗೆ ಹೋಗುವ ಅವಶ್ಯಕತೆ ಇಲ್ಲ, ಮನೆಯಲ್ಲಿ ಹಣ್ಣು ಮಕ್ಕಳನ್ನು ಹೊರಗೆ ಕಳುಹಿಸಲು ಹಿಂಜರಿಯುವ ಪೋಷಕರಿಗಾಗಿ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಜನರೆಗೆ ಅನುಕೂಲವಾಗಲಿದೆ. ಈಗಾಗಲೇ ದಾಖಲಾತಿ ಪ್ರಾರಂಭವಾಗಿದ್ದು ದಿ.26.06.22 ರಿಂದ ಆನ್ ಲೈನ್ ಪ್ರವೇಶಾತಿ ಪರೀಕ್ಷೆಗಳು 2 ಅಂಕದ 100 ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿದ್ದು, ಪರೀಕ್ಷಾರ್ಥಿಗಳ ಉತ್ತರ ಪತ್ರಿಕೆಗಳು ಧನಾತ್ಮಕ ಮತ್ತು ಋಣಾತ್ಮಾಕ ಮೌಲ್ಯಮಾಪನದನುಸಾರ ಆಯ್ಕೆ ಮಾಡಲಾಗುತ್ತದೆ. ವಿಶೇಷ ಅರ್ಹತೆಯುಳ್ಳ ಬಾಲಕ ಮತ್ತು ಬಾಲಕಿಯರಿಗೆ ಪ್ರವೇಶಾತಿ ಶುಲ್ಕದಲ್ಲಿ ಶೇ20 ರಷ್ಟು ವಿನಾಯಿತಿ ಸೌಲಭ್ಯವನ್ನು ನಿಡಿದ್ದೇವೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಾರಿಗೆ ಸಚಿವರಾದ ಹೆಚ್.ಎಮ್ ರೇವಣ್ಣ ಮಾತನಾಡಿ. ಗ್ರಾಮೀಣ ಭಾಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಐಎಎಸ್, ಕೆಎಎಸ್ ತರಬೇತಿ ನೀಡಬೇಕು ಎಂಬ ಬಹುದಿನಗಳ ಕನಸ್ಸಾಗಿತ್ತು. ದೆಹಲಿ, ಬೆಂಗಳೂರು, ಹೈದ್ರಾಬಾದ್ ನಗರದಲ್ಲಿ ಸ್ಪರ್ದಾತ್ಮಕ ಪರೀಕ್ಷೆಗೆ ತರಬೇತಿ ಪಡೆಯಲು ಲಕ್ಷಾಂತರ ರೂ ಶುಲ್ಕವನ್ನು ಪಾವತಿಸಬೇಕು, ಆದರೆ ಇಲ್ಲಿ ಕಡಿಮೆ ಶುಲ್ಕದಲ್ಲಿ ಉತ್ತಮ ತರಬೇತಿ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಕರ್ನಾಟಕದಲ್ಲಿ ಸತತವಾಗಿ 8 ವರ್ಷಗಳಿಂದ ಐಎಎಸ್, ಕೆಎಎಸ್ ಪರೀಕ್ಷೆಯಲ್ಲಿ ನಮ್ಮ ತರಬೇತಿ ಕೇಂದ್ರದಿಂದ ಸಾಕಷ್ಟು ರ್ಯಾಂಕ್ ಗಳನ್ನು ನೀಡುತ್ತಾ ಬಂದಿದೆ. ಭಾರತದಾದ್ಯಂತ 185 ರ್ಯಾಂಕ್ ಗಳನ್ನು ಗಳಿಸಿದ್ದೇವೆ. ಕರ್ನಾಟಕದಲ್ಲಿ 22 ರ್ಯಾಂಕ್ ಪಡೆದಿದ್ದಾರೆ. ನಮ್ಮ ಪರೀಕ್ಷಾ ತರಬೇತಿ ಕೇಂದ್ರದಲ್ಲಿ 10 ತಿಂಗಳ ತರಬೇತಿಯ ಜೊತೆಗೆ ಊಟ, ವಸತಿ ಸೇರಿ ಕೇವಲ 90 ಸಾವಿರ ರೂ ಶುಲ್ಕವಿದೆ, ವಸತಿ ಬೇಡವಾದಲ್ಲಿ 70 ಸಾವಿರ ಹಣ ಪಾವತಿಸಬೇಕು, ವಿಶೇಷಚೇತನರಿಗೆ ಶೇ20 ರಷ್ಟು ವಿನಾಯಿತಿಯನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು.


ಇಂದು ನಾವೆಲ್ಲ ಸ್ಪರ್ದಾತ್ಮಕ ಯುಗದಲ್ಲಿದ್ದೇವೆ, ಐಎಎಸ್ ಮತ್ತು ಕೆಎಎಸ್ ಪರೀಕ್ಷೆಯಲ್ಲಿ ಗೆಲುವು ಸಾಧಿಸಲು ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಿಂದ ಪರೀಕ್ಷೆಯ ಬಗ್ಗೆ ಅರಿವು ಮೂಡಿಸಬೇಕು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸರಿಯಾದ ಪರೀಕ್ಷಾ ತರಬೇತಿ ಇಲ್ಲದೆ ಯಶಸ್ಸು ಸಾಧಿಸಲು ಸಾದ್ಯವಾಗುತ್ತಿಲ್ಲ, ಹಾಗಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಾಗಿ ಅನುಕೂಲವಾಗಲಿದೆ, ಅತಿ ಕಡಿಮೆ ವೆಚ್ಚದಲ್ಲಿ ಉತ್ತಮ ತರಬೇತಿ ಕೊಟ್ಟು ರಾಜ್ಯಕ್ಕೆ ಉತ್ತಮ ಅಧಿಕಾರಿಗಳನ್ನು ನೀಡುವ ವಿಶ್ವಾಸವನ್ನು ಹೊಂದಿದ್ದಾರೆ, ಈ ತರಬೇತಿ ಕೇಂದ್ರದಲ್ಲಿ ಇ-ಗ್ರಂಥಾಲಯ, ಒಳ್ಳೆಯ ವಾತಾವರಣ ಸೇರಿದಂತೆ ಉತ್ತಮ ಸಿಬ್ಬಂದಿಯನ್ನು ಹೊಂದಿದ್ದಾರೆ.

-ಟಿ.ಎನ್ ಮಧುಕರ್, ಸಹ ಸಂಪಾದಕರು, ಪ್ರಜಾ ಪ್ರಗತಿ ಪತ್ರಿಕೆ.

Recent Articles

spot_img

Related Stories

Share via
Copy link
Powered by Social Snap